ಕೆ.ಎಸ್.ರಾವ್ ನಗರ ಶಾಲಾ ಕೊಠಡಿ ನವೀಕರಣ

 ಮೂಲ್ಕಿ: ಮಂಗಳೂರು ತಾಲೂಕಿನಲ್ಲಿ ಅತೀ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಮೂಲ್ಕಿಯ ಕೆ ಎಸ್ ರಾವ್ ನಗರದ ಸರ್ಕಾರಿ ಶಾಲೆಗೆ ಸರ್ಕಾರದ ಅನುದಾನ ಸೇರಿದಂತೆ ಉದ್ಯಮಿಗಳ ಸಹಕಾರದೊಂದಿಗೆ ಅಭಿವೃದ್ದಿ ಗೊಳಿಸಿ ಜಿಲ್ಲೆಯಲ್ಲಿ ಮಾದರಿ ಶಾಲೆಯನ್ನಾಗಿ ರೂಪಿಸಲು ಪ್ರಯತ್ನಿಸುವುದಾಗಿ ಶಾಸಕ ಕೆ.ಅಭಯಚಂದ್ರ ಜೈನ್ ತಿಳಿಸಿದರು.ಮೂಲ್ಕಿ ಯ ಕೆಎಸ್‌ರಾವ್ ನಗರದ ದ.ಕ.ಜಿಲ್ಲಾ ಪಂಚಾಯತ್ ಉನ್ನತೀಕರಿಸಿದ ಮಾದರಿ ಹಿರಿಯ ಪ್ರಾಥಮಿಕ ಶಾಲಾ ರಜತ ಮಹೋತ್ಸವ ಅಂಗವಾಗಿ ದಾನಿಗಳ ನೆರವಿನಿಂದ ನವೀಕರಿಸಿದ ಶಾಲಾ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು ಶಾಲಾ ಕಟ್ಟಡ ದುರಸ್ಥಿಗೆ ತನ್ನ ಶಾಸಕರ ನಿಧಿಯಿಂದ 5ಲಕ್ಷ ಮತ್ತು 1.50 ಲಕ್ಷ ಅನುದಾನ ನೀಡಲಾಗಿದೆ.2 ಲಕ್ಷ ರೂ ಅನುದಾನ ನೀಡಿ ಎರಡು ಶಾಲಾ ಕೊಠಡಿ ನಿರ್ಮಿಸಲಾಗಿದೆ. ಇಲ್ಲಿ ಅತೀ ಹೆಚ್ಚು ವಿದ್ಯಾರ್ಥಿಗಳಿರುವ ಕಾರಣ ಮತ್ತೆ ಶಾಲಾ ಅಭಿವೃದ್ಧಿಗೆ 20 ಲಕ್ಷ ರೂ. ಅನುದಾನ ನೀಡುವಂತೆ ರಾಜ್ಯ ಪ್ರೌಢ ಶಿಕ್ಷಣ ಸಚಿವರಿಗೆ ಮನವಿ ಮಾಡಲಾಗಿದೆ.ರಾಜ್ಯ ಸಭಾ ಸದಸ್ಯ ಬಿ.ಕೆ ಹರಿಪ್ರಸಾದ್‌ರಿಂದ 10 ಲಕ್ಷ ರೂ. ಅನುದಾನ ನೀಡುವಂತೆಯೂ ಮನವಿ ಮಾಡಲಾಗಿದೆ.ಅದೇ ರೀತಿ ಮೂಡಾ ವತಿಯಿಂದ 10 ಲಕ್ಷ ರೂ ಅನುದಾನ ಬಿಡುಗಡೆಯಾಗಿದೆ. ಮೂಲ್ಕಿ ನಗರ ಪಂಚಾಯತ್ ಅಧ್ಯಕ್ಷ ಸುನಿಲ್ ಆಳ್ವರವರು ಶಾಲಾ ಶೌಚಾಲಯ ನಿರ್ಮಾಣಕ್ಕೆ 20 ಲಕ್ಷ ರೂ. ಅನುದಾನ ನೀಡುವ ಭರವಸೆ ನೀಡಿದ್ದಾರೆ .ಶಿಕ್ಷಕರ ಕೊರತೆ ಬಗ್ಗೆ ಗಮನ ಹರಿಸಲಾಗಿದ್ದು,ಹೆಚ್ಚುವರಿ ಶಿಕ್ಷಕರ ನೇಮಕಕ್ಕೆ ಈಗಾಗಲೇ ಮನವಿ ಮಾಡಲಾಗಿದೆಯೆಂದು ಹೇಳಿದರು. ಕಾರ್ಯಕ್ರಮದಲ್ಲಿ ಶಾಲಾ ಕಟ್ಟಡ ನವೀಕರಣಕ್ಕೆ 1.60ಲಕ್ಷ ರೂ. ನೀಡಿದ ಪ್ರೆಮಾ ರಮೇಶ್ ಶೇಟ್, ಒಂದು ಲಕ್ಷ ರೂ ನೀಡಿದ ಮೂಲ್ಕಿ ನಗರ ಪಂಚಾಯತ್ ಅಧ್ಯಕ್ಷ ಸುನಿಲ್ ಆಳ್ವರ ತಂದೆ ಶ್ರೀಧರ ಆಳ್ವ ಹಾಗೂ 30 ಸಾವಿರ ರೂ ನೀಡಿದ ಕುಲ್ಯಾಡಿ ನರಸಿಂಹ ಪೈ,ಶಾಲಾಭಿವೃದ್ಧಿಗೆ ಸಹಕಾರ ನೀಡುವ ಭರವಸೆ ನೀಡಿದ ಹಾಜಿ ಸಯ್ಯದ್ ಕರ್ನಿರೆ ಮತ್ತು ಎಎಚ್ ರಫಿಕ್ ರವರನ್ನು ಶಾಲಾ ರಜತ ಮಹೋತ್ಸವ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.ಮೂಲ್ಕಿ ನಗರ ಪಂಚಾಯತ್ ಅಧ್ಯಕ್ಷ ಸುನಿಲ್ ಆಳ್ವ ಅಧ್ಯಕ್ಷತೆ ವಹಿಸಿದ್ದು ದ.ಕ. ಜಿ.ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ ಮಾತನಾಡಿ ಶಾಲಾ ಅಭಿವೃದ್ಧಿಗೆ ತನ್ನ ವತಿಯಿಂದ ಒಂದು ಲಕ್ಷ ರೂ ಅನುದಾನ ನೀಡುವುದಾಗಿ ತಿಳಿಸಿದರು.z.ಕ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ,ನಗರ ಪಂಚಾಯತ್ ಸದಸ್ಯರುಗಳಾದ ಶೈಲೇಶ್ ಕುಮಾರ್,ವಿಮಲಾ ಪೂಜಾರಿ, ಪುತ್ತುಬಾವ,ಹಸನ್ ಬಶೀರ್,ಯೋಗೀಶ್ ಕೋಟ್ಯಾನ್,ಸಂದೀಪ್ ಸಾಲ್ಯಾನ್,ಹಾಗೂ ಡಾ.ಹರಿಪ್ರಸಾದ್ ಶೆಟ್ಟಿ,ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಕೋಟ್ಯಾನ್ ಮಟ್ಟು,ಅಶೋಕ್ ಪೂಜಾರ್, ಶಾಲಾ ಮುಖ್ಯಶಿಕ್ಷಕಿಯರಾದ ಸುಮತಿ ಬಾಯಿ, ಸಂಧ್ಯಾ ಉಪಸ್ತಿತರಿದ್ದರು.ಶಾಲಾ ರಜತ ಮಹೋತ್ಸವ ಸಮಿತಿ ಅಧ್ಯಕ್ಷ ಬಿಎಮ್ ಆಸಿಫ್ ಪ್ರಸ್ತಾವಿಸಿದರು. ನವೀನ್ ಪುತ್ರನ್ ಕಾರ್ಯಕ್ರಮ ನಿರ್ವಹಿಸಿ ಸ್ವಾಗತಿಸಿದರು.

Mulki-01041701

Comments

comments

Comments are closed.

Read previous post:
31031703
ಕನ್ನಡ ಚಿತ್ರ ರಂಗದ ಆಧಾರ ಸ್ತಂಭ ರಾಕ್ ಲ್ಯೆನ್

ಬೆಂಗಳೂರು: ರಾಕ್ ಲ್ಯೆನ್ ವೆಂಕಟೇಶ್ ರವರು ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದು ಪರೋಪಕಾರ ಸ್ವಭಾವದವರಾಗಿದ್ದು ಚಲನಚಿತ್ರ ರಂಗದಲ್ಲಿನ ಸಮಸ್ಯೆಗಳನ್ನು ತನ್ನಲ್ಲಿರುವ ಸಾಮರ್ಥ್ಯದಿಂದ ನಿಭಾಯಿಸುವ ವ್ಯಕ್ತಿತ್ವವನ್ನು ಹೊಂದಿದ್ದಾರೆ.ಕನ್ನಡ ಚಲನಚಿತ್ರ ರಂಗದ...

Close