ಕಟೀಲು ಅಂತರ್ ಕಾಲೇಜು ಸಾಂಸ್ಕ್ರತಿಕ ಸ್ಪರ್ಧೆ

ಕಿನ್ನಿಗೋಳಿ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜು ಆಶ್ರಯದಲ್ಲಿ ನಡೆದ ಅಂತರ್ ಕಾಲೇಜು ಸಾಂಸ್ಕ್ರತಿಕ ಸ್ಪರ್ಧೆಯಲ್ಲಿ ಸುರತ್ಕಲ್ ಗೋವಿಂದ ದಾಸ ಕಾಲೇಜು ಪ್ರಥಮ, ಕಟಪಾಡಿ ಕೆವಿಎಸ್ ಕಾಲೇಜು ದ್ವಿತೀಯ ಹಾಗೂ ಸುಂಕದಕಟ್ಟೆ ನಿರಂಜನಸ್ವಾಮಿ ಕಾಲೇಜು ತ್ರತೀಯ ಪ್ರಶಸ್ತಿಯನ್ನು ಪಡೆದುಕೊಂಡರು.
ಸುಂಕದಕಟ್ಟೆ ನಿರಂಜನ ಸ್ವಾಮಿ ಕಾಲೇಜು ತಂಡ ಉತ್ತಮ ಕಾರ್ಯಕ್ರಮ ನಿರೂಪಣೆ, ವಾಮದಪದವು ಸರಕಾರಿ ಪ್ರಥಮ ದರ್ಜೆ ಕಾಲೇಜು ಉತ್ತಮ ನೃತ್ಯ, ಸುರತ್ಕಲ್ ಗೋವಿಂದದಾಸ ಕಾಲೇಜು ತಂಡ ಉತ್ತಮ ಪ್ರಹಸನಕ್ಕಾಗಿ, ಪ್ರಶಸ್ತಿ ಪಡೆದವು.

ಕಟೀಲು ದೇವಳದ ಅರ್ಚಕರಾದ ಅನಂತಪದ್ಮನಾಭ ಆಸ್ರಣ್ಣ, ಕಮಲಾದೇವಿಪ್ರಸಾದ ಆಸ್ರಣ್ಣ, ಜಿ.ಪಂ. ಮಾಜಿ ಸದಸ್ಯ ಈಶ್ವರ ಕಟೀಲ್, ಪ್ರವೀಣ್ ಭಂಡಾರಿ, ಕಾಲೇಜು ಪ್ರಿನ್ಸಿಪಾಲ್ ಎಮ್. ಬಾಲಕೃಷ್ಣ ಶೆಟ್ಟಿ ಎಂ, ಡಾ.ಕೃಷ್ಣ ಕಾಂಚನ್, ವಿಜಯ್, ವಿದ್ಯಾರ್ಥಿ ಪ್ರಮುಖರಾದ ಪ್ರಜ್ವಲ್ ನಾಯಕ್, ಮನೀಷ್ ಶೆಟ್ಟಿ, ಶ್ರೀವೈಷ್ಣವಿ, ಮನೀಷ್ ಶೆಟ್ಟಿಗಾರ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-03041701 Kinnigoli-03041702

Comments

comments

Comments are closed.

Read previous post:
Kinnigoli-01041702
ಎಪಿಎಂಸಿ ಅಧ್ಯಕ್ಷ ಪ್ರಮೋದ್‌ಕುಮಾರ್ ಸನ್ಮಾನ

ಕಿನ್ನಿಗೋಳಿ: ಪ್ರಮೋದ್ ಕುಮಾರ್ ಈ ಹಿಂದೆ ಪ್ರಚಾರ ರಹಿತವಾಗಿ ಹಲವಾರು ಯೋಜನೆಯನ್ನು ಕಿನ್ನಿಗೋಳಿ ಪರಿಸರಕ್ಕೆ ನೀಡಿದ್ದು ಜನಪರ ಕಾಳಜಿಯಿಂದ ಈದೀಗ ಎಪಿಎಂಸಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ರೈತಾಪಿ ವರ್ಗದವರ ಸಮಸ್ಯೆ...

Close