ಜನವಿಕಾಸ ಸಮಿತಿ ಮುಲ್ಕಿ ಉದ್ಘಾಟನೆ

ಕಿನ್ನಿಗೋಳಿ: ಇತ್ತೀಚಿನ ದಿನಗಳಲ್ಲಿ ಮೌಲ್ಯಗಳು ಬದಲಾವಣೆಯಾಗುತ್ತಿದೆ. ಸಂಸ್ಕ್ರತಿ ಸಂಸ್ಕಾರ ಮಾನವೀಯ ಮೌಲ್ಯಗಳನ್ನು ಉಳಿಸಿ ಯುವಜನರಿಗೆ ತಿಳಿ ಹೇಳುವ ಕಾಲ ಬಂದಿದೆ ಎಂದು ಲಯನ್ಸ್ ಜಿಲ್ಲಾ ಮಾಜಿ ಜಿಲ್ಲಾ ರಾಜ್ಯಪಾಲ ಕವಿತಾ ಎಸ್. ಶಾಸ್ತ್ರಿ ಹೇಳಿದರು.
ಭಾನುವಾರ ಪುನರೂರು ಶ್ರೀ ವಿಶ್ವನಾಥ ದೇವಳದ ಆವರಣದಲ್ಲಿ ಪುನರೂರು ಪ್ರತಿಷ್ಠಾನದ ಉಪಸಮಿತಿ ಜನ ವಿಕಾಸ ಸಮಿತಿ ಮೂಲ್ಕಿ ಇದರ ಉದ್ಘಾಟನಾ ಸಮಾರಂಭದಲ್ಲಿ ದಿಕೂಚಿ ಭಾಷಣ ಮಾಡಿದರು.
ಆರೋಗ್ಯ, ಶಿಕ್ಷಣ, ಗ್ರಾಮದ ಅಭಿವೃದ್ಧಿಯ ಬಗ್ಗೆ ಸ್ಪಂದನೆ, ಸರಕಾರದ ಸವಲತ್ತುಗಳನ್ನು ಪರಿಚಯಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಾಗ ಭಗವಂತನ ಅನುಗ್ರಹ ಹಾಗೂ ಶ್ರೇಯಸ್ಸು ಲಭಿಸುತ್ತದೆ ಎಂದು ಕಟೀಲು ದೇವಳ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಉಪಸಮಿತಿಯನ್ನು ಉದ್ಘಾಟಿಸಿ ಮಾತನಾಡಿದರು.
ಮಂಗಳೂರು ಉದ್ಯಮಿ ಪಟೇಲ್ ವಾಸುದೇವ ರಾವ್ ಸಂಸ್ಥೆಯ ಲಾಂಛನ ಬಿಡುಗಡೆಗೊಳಿಸಿದರು.
ಪುನರೂರು ಪ್ರತಿಷ್ಠಾನದ ಗೌರವಾಧ್ಯಕ್ಷ ಹರಿಕೃಷ್ಣ ಪುನರೂರು, ಮಂಗಳೂರು ಉದ್ಯಮಿ ವಾಸುದೇವ ರಾವ್, ದ.ಕ. ಜಿಲ್ಲಾ ಮೀನುಗಾರಿಕಾ ಫೆಡರೇಷನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ದ.ಕ. ಮಂಗಳೂರು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಹಾಯಕ ಆಯುಕ್ತ ಸರ್ವೋತ್ತಮ ಅಂಚನ್, ಮುಲ್ಕಿ ಶಾರದಾ ಇನ್ಫ್ರಾಡಿಸೈನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪನಾ ನಿರ್ದೇಶಕ ಜೀವನ್ ಕೆ. ಶೆಟ್ಟಿ, ಯುಗಪುರುಷ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ, ಪುನರೂರು ಪ್ರತಿಷ್ಠಾನದ ಗೌರವಾಧ್ಯಕ್ಷೆ ಉಷಾರಾಣಿ, ಪ್ರಧಾನ ಕಾರ್ಯದರ್ಶಿ ಶ್ರೇಯಾ ಪುನರೂರು, ಮುಲ್ಕಿ ಜನವಿಕಾಸ ಸಮಿತಿ ಅಧ್ಯಕ್ಷ ಸುರೇಶ್ ರಾವ್, ಉಪಾಧ್ಯಕ್ಷ ಜೀವನ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಭಾಗ್ಯ ರಾಜೇಶ್, ಜೊತೆ ಕಾರ್ಯದರ್ಶಿ ರಾಘವೇಂದ್ರ ಭಟ್, ಪ್ರಶಾಂತಿ ಶೆಟ್ಟಿ, ಆನಂದ ಮೇಲಾಂಟ, ಪ್ರಾಣೇಶ್ ಭಟ್ ದೇಂದಡ್ಕ, ದಾಮೋದರ ಶೆಟ್ಟಿ, ಶಶಿಕರ ಕೆರೆಕಾಡು, ಶೋಭರಾವ್, ಗೀತಾ ಶೆಟ್ಟಿ ಉಪಸ್ಥಿತರಿದ್ದರು.
ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್ ಪುನರೂರು ಸ್ವಾಗತಿಸಿದರು. ಸುಚಿತ್ರಾ ಕಾರ್ಯಕ್ರಮ ನಿರೂಪಿಸಿದರು.
ಸನಾತನ ನಾಟ್ಯಾಲಯದವರಿಂದ ರಾಷ್ಟ್ರದೇವೋಭವ ಕಾರ್ಯಕ್ರಮ ನಡೆಯಿತು.

Kinnigoli-03041701

Comments

comments

Comments are closed.

Read previous post:
Kinnigoli-01041702
ಎಪಿಎಂಸಿ ಅಧ್ಯಕ್ಷ ಪ್ರಮೋದ್‌ಕುಮಾರ್ ಸನ್ಮಾನ

ಕಿನ್ನಿಗೋಳಿ: ಪ್ರಮೋದ್ ಕುಮಾರ್ ಈ ಹಿಂದೆ ಪ್ರಚಾರ ರಹಿತವಾಗಿ ಹಲವಾರು ಯೋಜನೆಯನ್ನು ಕಿನ್ನಿಗೋಳಿ ಪರಿಸರಕ್ಕೆ ನೀಡಿದ್ದು ಜನಪರ ಕಾಳಜಿಯಿಂದ ಈದೀಗ ಎಪಿಎಂಸಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ರೈತಾಪಿ ವರ್ಗದವರ ಸಮಸ್ಯೆ...

Close