ಹಳೆಯಂಗಡಿ : ಎಪ್ರಿಲ್ 9 ಉಚಿತ ದಂತ ಚಿಕಿತ್ಸಾ

ಕಿನ್ನಿಗೋಳಿ: ಕಿನ್ನಿಗೋಳಿ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ, ಮತ್ತು ಹಳೆಯಂಗಡಿ ಶ್ರೀ ವಿದ್ಯಾ ವಿನಾಯಕ ಯುವಕ ಮಂಡಲ, ಶ್ರೀ ವಿದ್ಯಾ ವಿನಾಯಕ ರಜತ ಸೇವಾ ಟ್ರಸ್ಟ್, ಯುವತಿ ಮತ್ತು ಮಹಿಳಾ ಮಂಡಲದ ಸಂಯುಕ್ತ ಆಶ್ರಯದಲ್ಲಿ ಮಂಗಳೂರಿನ ಎ ಬಿ ಶೆಟ್ಟಿ ಸ್ಮಾರಕ ದಂತ ಮಹಾ ವಿದ್ಯಾಲಯ ಹಾಗೂ ನಿಟ್ಟೆ ವಿ.ವಿ ಯ ಸಹಯೋಗದಲ್ಲಿ ಎಪ್ರಿಲ್ 9 ಭಾನುವಾರ ಬೆಳಿಗ್ಗೆ ಹಳೆಯಂಗಡಿ ಯು ಬಿ ಎಂ ಸಿ ಪ್ರಾಥಮಿಕ ಶಾಲೆಯಲ್ಲಿ ಉಚಿತ ದಂತ ಚಿಕಿತ್ಸಾ ಶಿಬಿರವು ಜರುಗಲಿದೆ. ದ.ಕ. ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಕುಮಾರ್ ಬೊಳ್ಳೂರು ಉದ್ಘಾಟಿಸಲಿದ್ದು ಅಧ್ಯಕ್ಷತೆಯನ್ನು ಕಿನ್ನಿಗೋಳಿಯ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ ಅಧ್ಯಕ್ಷ ನಿಡ್ಡೋಡಿ ಚಾವಡಿ ಮನೆ ಜಗನ್ನಾಥ ಶೆಟ್ಟಿ ವಹಿಸಲಿದ್ದಾರೆ. ಹಳೆಯಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಲಜಾ, ತಾಲೂಕು ಪಂಚಾಯಿತಿ ಸದಸ್ಯರಾದ ವಜ್ರಾಕ್ಷಿ ಶೆಟ್ಟಿ, ಜೀವನ್ ಪ್ರಕಾಶ್, ಶರತ್ ಕುಬೆವೂರು ಮತ್ತು ಕೆ ಎಸ್ ಹೆಗ್ಡೆ ಸ್ಮಾರಕ ದಂತ ಮಹಾ ವಿದ್ಯಾಲಯದ ಡಾ ಸಹನಾ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆಂದು ಪ್ರಕಟಣೆ ತಿಳಿಸಿದೆ.

Comments

comments

Comments are closed.

Read previous post:
Kinnigoli-0441703
ಶಾಂಭವಿ ಬಿ. ಶೆಟ್ಟಿ

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಐಕಳ ಪಾದೆ ಮನೆ ದಿ. ಬಾಲಕೃಷ್ಣ ಶೆಟ್ಟಿ ಅವರ ಧರ್ಮ ಪತ್ನಿ ತೋನ್ಸೆ ಶಾಂಭವಿ ಬಿ. ಶೆಟ್ಟಿ (72ವರ್ಷ) ಮಾರ್ಚ್ 27 ಸೋಮವಾರದಂದು...

Close