ತೋಕೂರು : “ಮಾನಸಿಕ ಖಿನ್ನತೆ” ಮಾಹಿತಿ ಶಿಬಿರ

ಕಿನ್ನಿಗೋಳಿ: ಮಾನಸಿಕ ಖಿನ್ನತೆ ಮನೋರೋಗವಲ್ಲ ಇವತ್ತಿನ ಒತ್ತಡಮಯ ಜೀವನದಲ್ಲಿ ಯಾವುದೇ ನಿರಾಸೆ, ನೋವುಗಳು ಹೃದಯಕ್ಕೆ ತಟ್ಟಿದರೂ ಅದನ್ನು ಮನಸ್ಸಿನಿಂದ ದೂರವಿಡುವ ಸಾಮರ್ಥ್ಯ ಬೆಳಸಿಕೊಳ್ಳುವುದು ಬಹಳ ಮುಖ್ಯ ಎಂದು ಸಸಿಹಿತ್ಲು ಗ್ರಾಮೀಣ ಅರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ. ಇಂದುಶೇಖರ ಶೆಟ್ಟಿ ಹೇಳಿದರು.
ತಪೋವನ, ತೋಕೂರು ಎಂ.ಆರ್.ಪೂಂಜಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಸಮುದಾಯ ಆರೋಗ್ಯ ವಿಭಾಗ ಕ್ಷೇಮ, ದೇರಳಕಟ್ಟೆ, ಯುವಕ ಮಂಡಲ ಸಸಿಹಿತ್ಲು ಮತ್ತು ಗ್ರಾಮೀಣ ಆರೋಗ್ಯ ಕೇಂದ್ರ ಸಸಿಹಿತ್ಲು ಇವರ ಸಹಯೋಗದೊಂದಿಗೆ ವಿಶ್ವ ಆರೋಗ್ಯ ದಿನದ ಅಂಗವಾಗಿ ಮಂಗಳವಾರ ನಡೆದ “ಮಾನಸಿಕ ಖಿನ್ನತೆ” ಮಾಹಿತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಸಮುದಾಯ ಆರೋಗ್ಯ ಕೇಂದ್ರ ಕ್ಷೇಮ ದೇರಳಕಟ್ಟೆ ಸಹಾಯಕ ಪ್ರಾಧ್ಯಾಪಕಿ ಡಾ. ಅಂಕಿತ ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿದರು.
ಮೆಡಿಕಲ್ ಸೋಷಿಯಲ್ ವರ್ಕರ್ ಸಂತೋಷ್, ಐಟಿಐ ಪ್ರಿನ್ಸಿಪಾಲ್ ವೈ.ಎನ್. ಸಾಲಿಯಾನ್, ತರಬೇತಿ ಅಧಿಕಾರಿ ರಘುರಾಮ ರಾವ್, ಕಿರಿಯ ತರಬೇತಿ ಅಧಿಕಾರಿ ಸುರೇಶ್ ಎಸ್. ಇವರು ಕಾರ್ಯಕ್ರಮ ನಿರ್ವಹಿಸಿದರು. ಸಸಿಹಿತ್ಲು ಯುವಕ ಮಂಡಲ ಅಧ್ಯಕ್ಷ ಶ್ರೀ ಪ್ರವೀಣ್ ಕುಮಾರ್, ಕಾರ್ಯದರ್ಶಿ ದಿಲೀಪ್ ಕರ್ಕೇರ, ಸಂಜೀವ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು.

Kinnigoli-05041701

Comments

comments

Comments are closed.