ಗುತ್ತಕಾಡು ಕಾನೂನು ಮಾಹಿತಿ ಶಿಬಿರ

ಕಿನ್ನಿಗೋಳಿ: ನೈತಿಕ ಮೌಲ್ಯಭರಿತ ಮಕ್ಕಳ ಆಸಕ್ತಿಗೆ ತಕ್ಕಂತಹ ಶಿಕ್ಷಣಕ್ಕೆ ಹೆತ್ತವರು ಹೆಚ್ಚಿನ ಗಮನ ನೀಡಬೇಕು ಎಂದು ಮೂಲ್ಕಿ ಅರಕ್ಷಕ ಠಾಣಾ ಸಹಾಯಕ ನಿರೀಕ್ಷಕ ಉಮೇಶ್ ಹೇಳಿದರು.
ಗುತ್ತಕಾಡು ದ. ಕ. ಜಿ. ಪಂ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಸಮುದಾಯದತ್ತ ಶಾಲಾ ಕಾರ್ಯಕ್ರಮದಲ್ಲಿ ಮಕ್ಕಳ ಹಕ್ಕುಗಳ ಸುರಕ್ಷತೆಯ ಬಗ್ಗೆ ಕಾನೂನು ಮಾಹಿತಿ ನೀಡಿದರು.
ಈ ಸಂದರ್ಭ ಪೋಲೀಸ್ ಸಂತೋಷ್, ಶಾಲಾಭಿವೃದ್ಧಿ ಸಂಘದ ಅಧ್ಯಕ್ಷ ನಾರಾಯಣ ಪೂಜಾರಿ, ಎಸ್‌ಡಿಎಮ್‌ಸಿ ಸದಸ್ಯರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕಿ ರೀಟಾ ಡೇಸಾ ಸ್ವಾಗತಿಸಿದರು. ಶಿಕ್ಷಕ ಸಂತೋಷ್ ವಂದಿಸಿದರು. ಶಿಕ್ಷಕಿ ಅನುರಾಧ ಕಾರ್ಯಕ್ರಮ ನಿರೂಪಿಸಿದರು.

Kinnigoli-06041701

Comments

comments

Comments are closed.

Read previous post:
Kinnigoli-05041702
ಕಿನ್ನಿಗೋಳಿ : ಶ್ರೀ ರಾಮ ನವಮಿ ಆಚರಣೆ

ಕಿನ್ನಿಗೋಳಿ: ಕಿನ್ನಿಗೋಳಿ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ ವತಿಯಿಂದ ಕಿನ್ನಿಗೋಳಿ ಶ್ರೀ ಮಹಮ್ಮಾಯೀ ಅಶ್ವತ್ಥ ಕಟ್ಟೆಯ ಬಳಿ ಶ್ರೀ ರಾಮನವಮಿ ಆಚರಣೆ ಬುಧವಾರ ನಡೆಯಿತು. ಈ ಸಂದರ್ಭ ಕಿನ್ನಿಗೋಳಿ...

Close