ಕಾಲುಬಾಯಿ ರೋಗ ನಿಯಂತ್ರಣ ಅಭಿಯಾನ

ಕಿನ್ನಿಗೋಳಿ: ಹೈನುಗಾರಿಕೆಯಿಂದ ಮಹಿಳೆಯರು ಸ್ವಾವಲಂಬಿಗಳಾಗಿದ್ದಾರೆ ಜಾನುವಾರುಗಳ ಅನಾರೋಗ್ಯದ ಬಗ್ಗೆ ಗಮನವಿಡಬೇಕು. ದಕ್ಷಿಣ ಕನ್ನಡ ಜಿಲ್ಲೆಯು ಜಾನುವಾರುಗಳ ಕಾಲುಬಾಯಿ ರೋಗ ಮುಕ್ತ ಜಿಲ್ಲೆಯಾಗಿ ಪರಿವರ್ತಿಸಲು ರೈತರು ಹಾಗೂ ಪಶು ವೈದ್ಯರು ಪ್ರಾಮಾಣಿಕ ಪ್ರಯತ್ನ ನಡೆಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿಯ ಉಪಾಧ್ಯಕ್ಷೆ ಕಸ್ತೂರಿ ಪಂಜ ಹೇಳಿದರು.
ಹಳೆಯಂಗಡಿ ಬಳಿಯ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ವಠಾರದಲ್ಲಿ ಶುಕ್ರವಾರ ನಡೆದ ರಾಷ್ಟ್ರೀಯ ಕಾಲುಬಾಯಿ ರೋಗ ನಿಯಂತ್ರಣ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್‌ಕುಮಾರ್ ಬೊಳ್ಳೂರು ಅಧ್ಯಕ್ಷತೆ ವಹಿಸಿದ್ದರು.
ಪಶು ಸಂಗೋಪನಾ ಇಲಾಖಾ ಸಹಾಯಕ ನಿರ್ದೇಶಕ ಡಾ.ಸತ್ಯಶಂಕರ್ ಅಭಿಯಾನದ ಬಗ್ಗೆ ಮಾಹಿತಿ ನೀಡಿ, ಏ.7ರಿಂದ 29ರವರೆಗೆ ವಿವಿಧ ಕಡೆಗಳಲ್ಲಿ 12ನೇ ಸುತ್ತಿನ ಲಸಿಕೆ ಹಾಕುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಪಶುಪಾಲನಾ ಇಲಾಖೆ ಮತ್ತು ಕರ್ನಾಟಕ ಹಾಲು ಮಹಾಮಂಡಳಿ ಮತ್ತು ಜಿಲ್ಲಾ ಹಾಲು ಒಕ್ಕೂಟಗಳ ವಿಶೇಷ ಸಹಕಾರದಲ್ಲಿ ಗ್ರಾಮೀಣ ಭಾಗದ ಹಾಲು ಉತ್ಪಾದಕರ ಸಹಕಾರಿ ಸಂಘಗಳು ಜಂಟಿ ಸಂಯೋಜನೆಯಲ್ಲಿ ರಾಜ್ಯದ ಎಲ್ಲಾ ರಾಸುಗಳಿಗೆ ಉಚಿತವಾಗಿ ಲಸಿಕೆ ಹಾಕುವ ಮೂಲಕ ಕಾಲುಬಾಯಿ ರೋಗ ನಿಯಂತ್ರಿಸಲು ಮುಖ್ಯವಾಗಿ ಹೈನುಗಾರರು ಮಾಹಿತಿ ಪಡೆದು ಸಹಕರಿಸಬೇಕು ಎಂದರು.
ಮಂಗಳೂರು ತಾಲ್ಲೂಕು ಪಂಚಾಯಿತಿ ಸದಸ್ಯ ಜೀವನ್‌ಪ್ರಕಾಶ್ ಕಾಮೆರೊಟ್ಟು ಅರ್ಹ ರೈತರಿಗೆ ಉಚಿತ ಮೇವಿನ ಬೀಜದ ಕಿಟ್‌ಗಳನ್ನು ವಿತರಿಸಿದರು.
ಪಶುವೈದ್ಯಾಧಿಕಾರಿ ಡಾ.ವಿಶ್ವರಾಧ್ಯ, ಹಳೆಯಂಗಡಿ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ ಮೀರಾ ಬಾಯಿ ಸದಸ್ಯರು ಉಪಸ್ಥಿತರಿದ್ದರು.

Kinnigoli-07041704

Comments

comments

Comments are closed.

Read previous post:
Kinnigoli-07041703
ನಾಗದೇವರಬಿಂಬದ ರಥಯಾತ್ರೆ

ಕಿನ್ನಿಗೋಳಿ : ಶ್ರೀ ಬಾರ್ಕೂರು ಬಂಟ ಮಹಾಸಂಸ್ಥಾನಂ ಇಲ್ಲಿನ ನಾಗದೇವರ ಮತ್ತು ಮೂಲದೈವಗಳ ಪುನರ್ ಪ್ರತಿಷ್ಠಾಪನೆ ಮತ್ತು ಪರಮ ಪವಿತ್ರ ನಾಗಮಂಡಲದ ಪೂರ್ವಬಾವಿಯಾಗಿ ನಾಗದೇವರಬಿಂಬದ ರಥಯಾತ್ರೆ ಶುಕ್ರವಾರ ಕಟೀಲಿಗೆ...

Close