ಶ್ರೀ ಶತಚಂಡಿಕಾಧ್ವರ ಸಮಾಲೋಚನಾ ಸಭೆ

ಕಿನ್ನಿಗೋಳಿ: ಬಪ್ಪನಾಡು ಸಾರ್ವಜನಿಕ ಗಣೇಶೋತ್ಸವ ಸಮಿತಿ ಮೂಲ್ಕಿ ಇದರ ಆಶ್ರಯದಲ್ಲಿ ಲೋಕಕಲ್ಯಾಣಾರ್ಥವಾಗಿ ಎಪ್ರಿಲ್ 30 ರಿಂದ ಮೇ 5ರ ತನಕ ಶ್ರೀ ಶತಚಂಡಿಕಾಧ್ವರ ಶ್ರೀ ದೇವಿಗೆ ಸುವರ್ಣ ಲೇಪಿತ ರಜತ ಕವಚ ಸಮರ್ಪಣೆ ಶ್ರೀ ಮಹಾರಂಗಪೂಜೆ ಮತ್ತು ವಸಂತೋತ್ಸವ ನಡೆಯಲಿದೆ ಎಂದು ಸಮಿತಿಯ ಸುನಿಲ್ ಆಳ್ವ ಹೇಳಿದರು.
ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ಬುಧವಾರ ನಡೆದ ಕಿನ್ನಿಗೋಳಿ ವಲಯದ ಸಮಾಲೋಚನಾ ಸಭೆಯಲ್ಲಿ ಮಾಹಿತಿ ನೀಡಿದರು.
ಎಪ್ರಿಲ್ 30 ರಂದು ಹೊರೆಕಾಣಿಕೆ, ಉಗ್ರಾಣ ಮೂಹೂರ್ತ ಮೇ. 1 ರಂದು ಸಪ್ತಸತೀ ಪಾರಾಯಣ, ಮೇ 3 ರಂದು ಧಾರ್ಮಿಕ ಕಾರ್ಯಕ್ರಮ, ಮಂಟಪ ಸಂಸ್ಕಾರ, ಅಗ್ನಿ ಜನಜ, ಮೇ. 4 ರಂದು ಸಹಸ್ರ ಮೋದಕ ಹವನ, ಶ್ರೀ ಲಕ್ಷ್ಮಿನಾರಾಯಣ ಹೃದಯ ಮಂತ್ರ ಹೋಮ, ಶ್ರೀನರಸಿಂಹ ಮಂತ್ರ ಹೋಮ, ಪಂಚದುರ್ಗಾ ಮಂತ್ರ ಹೋಮ, ಮಹಾ ಮೃತ್ಯುಂಜಯ ಯಾಗ, ಸಂಜೆ 5.30 ಭಗವತೀ ಸೇವೆ ಸಾಮೂಹಿಕ ಕುಂಕುಮಾರ್ಚಾನಾ ಸೇವೆ, ಮೇ. 5 ರಂದು ಚತುದೀಕ್ಲು ನವಾಕ್ಷರೀ ಯಾಗ ಸಹಿತ ಶ್ರೀ ಶತಚಂಡಿಕಾಧ್ವರ ಶ್ರೀ ದೇವಿಗೆ ಸುವರ್ಣ ಲೇಪಿತ ರಜತಕವಚ ಸಮರ್ಪಣೆ, ಸಂಜೆ ಶ್ರೀ ಮಹಾರಂಗಪೂಜೆ ಮತ್ತು ವಸಂತೋತ್ಸವ ನಡೆಯಲಿದೆ ಎಂದು ಸಮಿತಿಯ ಚಂದ್ರಶೇಖರ ಸುವರ್ಣ ತಿಳಿಸಿದರು.
ಯುಗಪುರುಷದ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ, ಯಕ್ಷಲಹರಿ ಅಧ್ಯಕ್ಷ ಪಿ. ಸತೀಶ್ ರಾವ್, ಕಿನ್ನಿಗೋಳಿ ಲಯನ್ಸ್ ಅಧ್ಯಕ್ಷ ವೈ. ಯೋಗೀಶ್ ರಾವ್, ಈಶ್ವರ್ ಕಟೀಲು, ಶರತ್ ಶೆಟ್ಟಿ, ಮೆನ್ನಬೆಟ್ಟು ಗ್ರಾ. ಪಂ. ಅಧ್ಯಕ್ಷೆ ಸರೋಜಿನಿ ಗುಜರನ್, ಕಿನ್ನಿಗೋಳಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ರಾಮಣ್ಣ ಕುಲಾಲ್, ಕಿನ್ನಿಗೋಳಿ ವಿಶ್ವಬ್ರಾಹ್ಮಣ ಸಂಘದ ಅಧ್ಯಕ್ಷ ಶಿವಪ್ರಸಾದ್ ಆಚಾರ್ಯ, ಸುರೇಶ್ ಬಪ್ಪನಾಡು, ನಿತಿನ್ ಬಪ್ಪನಾಡು, ಪುರುಷೋತ್ತಮ ರಾವ್, ಗಗನ್ ಮೂಲ್ಕಿ ಮತ್ತಿತರರು ಉಪಸ್ಥಿತರಿದ್ದರು.

Kinnigoli-07041701

Comments

comments

Comments are closed.