ಶಿಸ್ತು, ಸಂಸ್ಕಾರದ ನೆಮ್ಮದಿಯ ಜೀವನ

ಕಿನ್ನಿಗೋಳಿ: ಶಿಸ್ತು, ಸಂಸ್ಕೃತಿ, ಸಂಸ್ಕಾರ, ಶೃದ್ದೆ ನೆಮ್ಮದಿಯ ಜೀವನ ನಮ್ಮದಾಗಿಸಿಕೊಳ್ಳಬೇಕು ಎಂದು ಕಟೀಲು ದೇವಳ ಅರ್ಚಕ ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ ಹೇಳಿದರು.
ಕಿನ್ನಿಗೋಳಿ ಯಕ್ಷಲಹರಿ, ಯಕ್ಷಮಿತ್ರರು ಮತ್ತು ಕಿನ್ನಿಗೋಳಿ ಶ್ರೀ ಮಹಮ್ಮಾಯೀ ಭಕ್ತವೃಂದ ಇದರ ವತಿಯಿಂದ ಕಿನ್ನಿಗೋಳಿ ಮಹಾಮ್ಮಯೀ ಅಶ್ವತ್ಥ ಕಟ್ಟೆಯ ಬಳಿ ಶನಿವಾರ ನಡೆದ ಶ್ರೀ ಶನಿಶಾಂತಿ ಹೋಮ ಮತ್ತು ಶ್ರೀಶನಿಪೂಜೆಯ ಧಾರ್ಮಿಕ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.
ಕ.ಸಾ.ಪ. ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಶುಭಶಂಸನೆ ಗೈದರು.
ಕಿನ್ನಿಗೋಳಿ ಸ್ವಾಮಿ ವಿವೇಕಾನಂದ ಸೇವಾ ಟ್ರಸ್ಟ್ಟ್ ಅಧ್ಯಕ್ಷ ನಿಡ್ಡೋಡಿ ಚಾವಡಿಮನೆ ಜಗನ್ನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ ಧಾರ್ಮಿಕ ಪ್ರಜ್ಞೆಯನ್ನು ಮೂಡಿಸುವಲ್ಲಿ ಸಾಮೂಹಿಕ ಶನಿಪೂಜೆಯು ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ಯಕ್ಷ ಕಲಾವಿದ ಶ್ರೀಪತಿಭಟ್ ಸಸಿಹಿತ್ಲು ಹಾಗೂ ಪ್ರಸಂಗಕರ್ತ ಯಕ್ಷಕವಿ ಹರೀಶ್ ಶೆಟ್ಟಿ ಸೂಡ ಅವರನ್ನು ಸನ್ಮಾನಿಸಲಾಯಿತು.
ಕಿನ್ನಿಗೋಳಿ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ, ಕಿನ್ನಿಗೋಳಿ ಶ್ರೀ ಶಾರದೋತ್ಸವ ಸಮಿತಿಯ ಅಧ್ಯಕ್ಷ ಸುಬ್ರಮಣ್ಯ ಶೆಣೈ ಮತ್ತಿತರರು ಉಪಸ್ಥಿತರಿದ್ದರು.
ಯಕ್ಷಲಹರಿ ಅಧ್ಯಕ್ಷ ಪಿ. ಸತೀಶ್ ರಾವ್ ಸ್ವಾಗತಿಸಿದರು. ಯುಗಪುರುಷದ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ ಪ್ರಸ್ತಾವನೆಗೈದರು ಯಕ್ಷ ಲಹರಿಯ ಕೋಶಾಧಿಕಾರಿ ಜಗದೀಶ್ ಹೊಳ್ಳ ಅಭಿನಂದನಾ ಭಾಷಣಗೈದರು. ಪತ್ರಕರ್ತ ರಘುನಾಥ ಕಾಮತ್ ಕೆಂಚನಕೆರೆ ವಂದಿಸಿದರು. ಶಿಕ್ಷಕ ಸಾಯಿನಾಥ ಶೆಟ್ಟಿ, ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಶನೀಶ್ವರ ಮಹಾತ್ಮೆ ತಾಳಮದ್ದಲೆ ಕಾರ್ಯಕ್ರಮ ನಡೆಯಿತು.

Kinnigoli-08041705

Comments

comments

Comments are closed.

Read previous post:
Kinnigoli-08041702
ಟಾರ್ಪೋಡೊಸ್ ಸ್ಪೋರ್ಟ್ಸ್ ಕ್ಲಬ್ ಕ್ರಿಕೆಟ್

ಕಿನ್ನಿಗೋಳಿ: ಕ್ರೀಡಾ ಸಾಮರ್ಥ್ಯ ಮತ್ತು ಕಠಿಣ ಪರಿಶ್ರಮ ಸಾಧನೆಯಿಂದ ಯಶಸ್ಸು ಗಳಿಸಬಹುದು ಎಂದು ಮಂಗಳೂರು ಉತ್ತರವಲಯ ಶಾಸಕ ಮೊಹಿಯುದ್ದೀನ್ ಬಾವ ಹೇಳಿದರು. ಹಳೆಯಂಗಡಿ ಬಳಿಯ ಟಾರ್ಪೋಡೊಸ್ ಸ್ಪೋರ್ಟ್ಸ್ ಕ್ಲಬ್‌ನ...

Close