ಟಾರ್ಪೋಡೊಸ್ ಸ್ಪೋರ್ಟ್ಸ್ ಕ್ಲಬ್ ಕ್ರಿಕೆಟ್

ಕಿನ್ನಿಗೋಳಿ: ಕ್ರೀಡಾ ಸಾಮರ್ಥ್ಯ ಮತ್ತು ಕಠಿಣ ಪರಿಶ್ರಮ ಸಾಧನೆಯಿಂದ ಯಶಸ್ಸು ಗಳಿಸಬಹುದು ಎಂದು ಮಂಗಳೂರು ಉತ್ತರವಲಯ ಶಾಸಕ ಮೊಹಿಯುದ್ದೀನ್ ಬಾವ ಹೇಳಿದರು.
ಹಳೆಯಂಗಡಿ ಬಳಿಯ ಟಾರ್ಪೋಡೊಸ್ ಸ್ಪೋರ್ಟ್ಸ್ ಕ್ಲಬ್‌ನ ಆಶ್ರಯದಲ್ಲಿ ಶುಕ್ರವಾರ ಕ್ರಿಕೆಟ್ ಅಕಾಡೆಮಿ ಉದ್ಘಾಟಿಸಿ ಮಾತನಾಡಿದರು.
ಪಣಂಬೂರು ಎಸಿಪಿ ರಾಜೇಂದ್ರ ಮಾತನಾಡಿ ಗ್ರಾಮೀಣ ಭಾಗದ ಕ್ರೀಡಾಳುಗಳು ಟಾರ್ಪೋಡೊಸ್ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ಉತ್ತಮ ತರಬೇತಿ ಪಡೆದು ಪ್ರತಿಭಾವಂತ ಕ್ರಿಕೆಟ್ ಆಟಗಾರರಾಗಬೇಕು ಎಂದರು.
ಈ ಸಂದರ್ಭ ಮುಲ್ಕಿ ಮೂಡಬಿದ್ರೆ ಶಾಸಕ ಕೆ. ಅಭಯಚಂದ್ರ ಜೈನ್, ಮಂಗಳೂರು ನಗರ ಪಾಲಿಕೆ ಸದಸ್ಯೆ ಪ್ರತಿಭಾ ಕುಳಾಯಿ, ಮೂಡಾ ಸದಸ್ಯ ವಸಂತ್ ಬರ್ನಾಡ್, ಪಡುಪಣಂಬೂರು ಗ್ರಾಮ ಪಂಚಾಯಿತಿ ಸದಸ್ಯ ವಿನೋದ್ ಸಾಲ್ಯಾನ್ ಬೆಳ್ಳಾಯಾರು, ನಿತಿನ್ ಮುಲ್ಕಿ, ಮತ್ತಿತರರು ಉಪಸ್ಥಿತರಿದ್ದರು.
ಟಾರ್ಪೋಡೊಸ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಗೌತಮ್ ಶೆಟ್ಟಿ ಸ್ವಾಗತಿಸಿದರು. ರಾಜೇಶ್ವರಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli-08041701 Kinnigoli-08041702 Kinnigoli-08041703Kinnigoli-08041704

Comments

comments

Comments are closed.

Read previous post:
Kinnigoli-07041704
ಕಾಲುಬಾಯಿ ರೋಗ ನಿಯಂತ್ರಣ ಅಭಿಯಾನ

ಕಿನ್ನಿಗೋಳಿ: ಹೈನುಗಾರಿಕೆಯಿಂದ ಮಹಿಳೆಯರು ಸ್ವಾವಲಂಬಿಗಳಾಗಿದ್ದಾರೆ ಜಾನುವಾರುಗಳ ಅನಾರೋಗ್ಯದ ಬಗ್ಗೆ ಗಮನವಿಡಬೇಕು. ದಕ್ಷಿಣ ಕನ್ನಡ ಜಿಲ್ಲೆಯು ಜಾನುವಾರುಗಳ ಕಾಲುಬಾಯಿ ರೋಗ ಮುಕ್ತ ಜಿಲ್ಲೆಯಾಗಿ ಪರಿವರ್ತಿಸಲು ರೈತರು ಹಾಗೂ ಪಶು ವೈದ್ಯರು...

Close