ಕಾಂತಾಬಾರೆ ಬೂದಾಬಾರೆ ಧರ್ಮಚಾವಡಿ ಲೋಕಾರ್ಪಣೆ

ಮೂಲ್ಕಿ: ಧರ್ಮ ಮನುಜನ ವಯುಕ್ತಿಕ ಬದುಕಿನ ವ್ಯವಸ್ಥೆಯಷ್ಟೇ ಆದರೆ ಮಾನವ ನಂಬಿಕೆಯ ಧಾರ್ಮಿಕ ನಂಬಿಕೆ ನಮ್ಮನ್ನು ವಿಶ್ವಾಸದ ಬದುಕಿನತ್ತ ಚಿಂತನೆ ನಡೆಸಲು ಪ್ರೇರಣೆ ನೀಡುತ್ತದೆ. ಕಾಂತಾಬಾರೆ ಬೂದಾಬಾರೆ ಅವಳಿ ವೀರರ ದೂದೃಷ್ಟಿತ್ವದಿಂದ ಅವರು ನೀಡುತ್ತಿದ್ದ ನ್ಯಾಯಪರ ಹಾಗೂ ಧರ್ಮದ ನಡೆಯಲ್ಲಿ ಜನರು ವಿಶ್ವಾಸವಿಟ್ಟಿದ್ದರು ಅದುವೆ ಅವರ ನಡೆ ನುಡಿಯನ್ನು ಜೀವಂತವಾಗಿರಿಸಿದೆ ಎಂದು ಮೂಲ್ಕಿ ಸೀಮೆಯ ಅರಸರಾದ ಎಂ.ದುಗ್ಗಣ್ಣ ಸಾವಂತರು ಹೇಳಿದರು.
ಅವರು ಮೂಲ್ಕಿ ಸೀಮೆಯ ಪಡುಪಣಂಬೂರು ಅರಮನೆಯ ಪ್ರಾಂಗಣದಲ್ಲಿ ಮೂಲ್ಕಿ ಒಂಭತ್ತು ಮಾಗಣೆಯ ಬಿಲ್ಲವ ಸಮುದಾಯದವರು 30ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಕಾಂತಾಬಾರೆ ಬೂದಾಬಾರೆ ಧರ್ಮಚಾವಡಿಯನ್ನು ಉದ್ಘಾಟಿಸಿ ಮಾತನಾಡಿದರು.
ಮುಂದಿನ ಪೀಳಿಗೆಗೆ ಇತಿಹಾಸದ ಮಹತ್ವವವನ್ನು ತಿಳಿಹೇಳಬೇಕಾದರೆ ಅದರ ಕುರುಹುಗಳಿಗೆ ಆಶ್ರಯ ನೀಡಬೇಕು, ರಾಜಕೀಯರಂಗ ಎಂದಿಗೂ ಶಾಶ್ವತವಲ್ಲ ಬದಲಾಗಿ ನಮ್ಮನ್ನು ಸನ್ಮಾರ್ಗಕ್ಕೆ ಸಾಗಿಸಲು ಸಾಮಾಜಿಕ, ಜನಪದ, ಸಂಸ್ಕೃತಿಯ ಅನಾವರಣವೇ ಸಾಕು ಎಂದರು.
ಈ ಸಂದರ್ಭದಲ್ಲಿ ಧರ್ಮಚಾವಡಿಗೆ ಸಹಾಯ ನೀಡಿದ ದಾನಿಗಳನ್ನು ಹಾಗೂ ಒಂಭತ್ತು ಮಾಗಣೆಯ ದೈವ-ದೇವರ ಧರ್ಮದರ್ಶಿಗಳನ್ನು ವಿಶೇಷವಾಗಿ ಗೌರವಿಸಲಾಯಿತು.
ಚಂದ್ರಶೇಖರ ನಾನಿಲ್,ಗೋಪಾಲ ನಾಯಕಗರು, ಬಂಕಿ ನಾಯಗರು, ಅಂತಪ್ಪ ನಾಯಗರು, ಕಾಂತು ಲಕ್ಕಣ ಗುರಿಕಾರರು, ಕಡಂಬೋಡಿ ಮಹಾಬಲ ಪೂಜಾರಿ, ಪ್ರಮೋದ್‌ಕುಮಾರ್, ಗುರುಪ್ರಸಾದ್ ನಾನಿಲ್, ಸುಚೇಂದ್ರ ಅಮಿನ್ ಬರ್ಕೆ, ರಾಘವ ಅಮೀನ್, ಮಾಧವ ಕೋಟ್ಯಾನ್ ಕುಳೂರು, ರಾಘು ಸುವರ್ಣ, ಉಮೇಶ್ ಪೂಜಾರಿ, ಜೈಕೃಷ್ಣ ಬಿ. ಕೋಟ್ಯಾನ್, ಎರ್ಚ.ಎಂ.ಪೂಜಾರಿ, ತಾರಾನಾಥ ಸುವರ್ಣ, ಬಿಪಿನ್‌ಪ್ರಸಾದ್ ಮೂಲ್ಕಿ, ಎಲ್.ವಿ.ಅಮಿನ್ ಮುಂಬಯಿ, ಅಪ್ಪು ಪೂಜಾರಿ, ಮತ್ತಿತರರು ಇದ್ದರು.

Mulki-10041705

Comments

comments

Comments are closed.

Read previous post:
Mulki-10041702
ಮೂಲ್ಕಿ ಬಪ್ಪನಾಡು ಧ್ವಜಾರೋಹಣ

ಮೂಲ್ಕಿ: ಮೂಲ್ಕಿಯ ಬಪ್ಪನಾಡಿನ ಶ್ರೀ ದುರ್ಗಾಪರಮೇಶ್ವರಿ ದೇವಳದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವದ ಅಂಗವಾಗಿ ಇಂದು ಧ್ವಜಾರೋಹಣ ನೆರವೇರಿತು. ಸಸಿಹಿತ್ಲುವಿನ ಶ್ರೀ ಭಗವತಿ ಮತ್ತು ಬಪ್ಪನಾಡಿನ ಶ್ರೀ ದುರ್ಗಾಪರಮೇಶ್ವರಿ...

Close