ಕಟೀಲು: ಬಂಟರ ಕ್ರೀಡೋತ್ಸವ

ಕಿನ್ನಿಗೋಳಿ: ಬಂಟರ ಸಂಘ ಸಾಮಾಜಿಕ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಶಿಕ್ಷಣ ಮತ್ತು ಕ್ರೀಡಾ ಚಟುವಟಿಕೆಗಳನ್ನು ಪ್ರೋತ್ಸಾಹಿಸಿ ಯುವ ಜನರನ್ನು ಪ್ರತಿಭಾವಂತರನ್ನಾಗಿ ಮಾಡಲು ನಿರಂತರ ಪ್ರಯತ್ನಿಸಬೇಕು ಎಂದು ಎಕ್ಕಾರು ಬಂಟರ ಸಂಘದ ಅಧ್ಯಕ್ಷ ರತ್ನಾಕರ ಶೆಟ್ಟಿ ಹೇಳಿದರು.
ಮೂಲ್ಕಿ ಬಂಟರ ಸಂಘ (ರಿ) ಮೂಲ್ಕಿ ಇದರ ಯುವವೇದಿಕೆ ಮತ್ತು ಮಹಿಳಾ ವೇದಿಕೆಗಳ ನೇತೃತ್ವದಲ್ಲಿ ಕಟೀಲು ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಮುಲ್ಕಿ ಬಂಟರ ಸಂಘದ ವ್ಯಾಪ್ತಿಯ 32 ಗ್ರಾಮಗಳ ಬಂಟ ಬಾಂಧರಿಗಾಗಿ ಭಾನುವಾರ ನಡೆದ ಬಂಟರ ಕ್ರೀಡೋತ್ಸವ ಉದ್ಘಾಟಿಸಿ ಮಾತನಾಡಿದರು.
ಮೂಲ್ಕಿ ಬಂಟರ ಸಂಘದ ಅಧ್ಯಕ್ಷ ಸಂತೋಷ್‌ಕುಮಾರ್ ಹೆಗ್ಡೆ ಅಧ್ಯಕ್ಷತೆವಹಿಸಿ ಮಾತನಾಡಿ ಸಮಾಜ ಬಾಂಧವರು ಕ್ರೀಡೆಯಲ್ಲಿ ಭಾಗವಹಿಸುವುದು ಬಹು ಮುಖ್ಯ ಇದರಿಂದ ಸಂಘಟನೆ ಹಾಗೂ ಎಳೆಯರಲ್ಲಿ ಪ್ರೇರಣೆ ಆಸಕ್ತಿ ಬಲವಾಗುತ್ತದೆ ಎಂದರು
ಈ ಸಂದರ್ಭ ಸಂಘದ ಉಪಾಧ್ಯಕ್ಷ ಪುರುಷೋತ್ತಮ ಶೆಟ್ಟಿ , ಜೊತೆ ಕಾರ್ಯದರ್ಶಿ ಮಲ್ಲಿಕಾ ಪೂಂಜಾ, ಮಹಿಳಾ ವಿಭಾಗದ ಸಂಚಾಲಕಿ ಬಬಿತಾ ಯು ಶೆಟ್ಟಿ, ಯುವ ವಿಭಾಗದ ಸಂಚಾಲಕ ರಾಜೇಶ್ ಶೆಟ್ಟಿ, ಕೋಶಾಧಿಕಾರಿ ಸುಂದರ ಶೆಟ್ಟಿ, ಕಿನ್ನಿಗೋಳಿ ಬಂಟರ ಸಂಘದ ಅಧ್ಯಕ್ಷ ಸ್ವರಾಜ್ ಶೆಟ್ಟಿ, ಅಭಿಲಾಷ್ ಶೆಟ್ಟಿ, ಕ್ರೀಡಾಕೂಟದ ಸಂಚಾಲಕರಾದ ಸಾಯಿನಾಥ ಶೆಟ್ಟಿ, ಶರತ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Kinnigoli-10041706

Comments

comments

Comments are closed.

Read previous post:
Kinnigoli-10041705
ಆರೋಗ್ಯದ ಕಾಳಜಿ ನೆಮ್ಮದಿಯ ಜೀವನ

ಕಿನ್ನಿಗೋಳಿ: ಒತ್ತಡದ ಜೀವನದಲ್ಲಿ ಆರೋಗ್ಯದ ಕಾಳಜಿ ಇರಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದಾಗ ನೆಮ್ಮದಿಯ ಜೀವನ ಸಾಗಿಸಬಹುದು. ನಿಸ್ವಾರ್ಥ ಜನಪರ ಚಿಂತನೆಯ ಕೆಲಸಗಳನ್ನು ಸೇವಾ ಸಂಸ್ಥೆಗಳು ಮಾಡಿದಲ್ಲಿ ಮಾತ್ರ ಜನರ...

Close