ಕ್ರೀಡೆಯೊಂದಿಗೆ ಸಮಾಜಅಭಿವೃದ್ಧಿ ಕೆಲಸಮಾಡಬೇಕು

ಕಿನ್ನಿಗೋಳಿ: ಸಂಘಟನಾ ಶಕ್ತಿಯಿಂದ ಸಂಘ ಸಂಸ್ಥೆಗಳು ಕ್ರೀಡೆಯೊಂದಿಗೆ ಸಮಾಜ ಅಭಿವೃದ್ಧಿ ಪರ ಕೆಲಸ ಕಾರ್ಯಗಳನ್ನು ಮಾಡಿ ಅರ್ಹರಿಗೆ ಸಿಗುವ ಅಭಿವೃದ್ದಿಪರ ಯೋಜನೆಗಳ ಬಗ್ಗೆ ತಿಳಿ ಹೇಳಬೇಕು ಎಂದು ಮಂಗಳೂರು ಎಪಿಎಂಸಿ ಅಧ್ಯಕ್ಷ ಪ್ರಮೋದ್ ಕುಮಾರ್ ಹೇಳಿದರು.
ಭಾನುವಾರ ಕಿನ್ನಿಗೋಳಿ ಸಮೀಪದ ಗುತ್ತಕಾಡು ಶಾಲಾ ಮೈದಾನದಲ್ಲಿ ಕಿನ್ನಿಗೋಳಿ ಗುತ್ತಕಾಡು ನವಚೈತನ್ಯ ಫ್ರೆಂಡ್ಸ್ ಇದರ 9 ನೇ ವರ್ಷದ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾಟ ನವಚೈತನ್ಯ ಟ್ರೋಫಿ- 2017 ಉದ್ಘಾಟಿಸಿ ಮಾತನಾಡಿದರು.
ಶಾಂತಿನಗರ ಮೂಕಾಂಬಿಕಾ ದೇವಳದ ಧರ್ಮದರ್ಶಿ ವಿವೇಕಾನಂದ, ಕಿನ್ನಿಗೋಳಿ ಗ್ರಾ. ಪಂ. ಸದಸ್ಯರಾದ ಟಿ. ಎಚ್ ಮಯ್ಯದ್ದಿ, ವಾಣ, ಬಿಲ್ಲವ ಸಂಘದ ಗೌರವಾಧ್ಯಕ್ಷ ಬಾಲಕೃಷ್ಣ ಡಿ ಸಾಲ್ಯಾನ್, ಫ್ರೆಂಡ್ಸ್ ಕ್ಲಬ್ ಗೌರವಾಧ್ಯಕ್ಷ ಚಂದ್ರ ಶೇಖರ್, ಶಾಲಾ ಸಮಿತಿಯ ಅಧ್ಯಕ್ಷ ನಾರಾಯಣ ಪೂಜಾರಿ, ಗ್ರೀನ್ ಸ್ಟಾರ್ ಸಂಸ್ಥೆಯ ಅಧ್ಯಕ್ಷ ಗುಲಾಂ ಹುಸೈನ್, ಯಂಗ್ ಫ್ರೆಂಡ್ಸ್ ತಾಹಿರ್ ನಕಾಶ್, ಆನಂದ್, ದಲಿತ ಸಂಘರ್ಷ ಸಮಿತಿಯ ಮಾಜಿ ಅಧ್ಯಕ್ಷ ಕೃಷ್ಣ ಅಂಚನ್, ಕ್ಲಬ್ ಅಧ್ಯಕ್ಷ ಶಿವಾನಂದ, ಪ್ರಸಾದ್ ದೇವಾಡಿಗ, ಕಾರ್ಯದರ್ಶಿ ನಕುಲ್, ಉಪಾಧ್ಯಕ್ಷ ಸಂದೇಶ್, ಕಪ್ತಾನ ಕುಶಲ್, ಉಪಕಪ್ತಾನ ರೋನೆಲ್ ಡಿಸೋಜ, ಕಪಿಲ್ ಅಂಚನ್ ಉಪಸ್ಥಿತರಿದ್ದರು.

Kinnigoli-10041707

Comments

comments

Comments are closed.

Read previous post:
Kinnigoli-10041706
ಕಟೀಲು: ಬಂಟರ ಕ್ರೀಡೋತ್ಸವ

ಕಿನ್ನಿಗೋಳಿ: ಬಂಟರ ಸಂಘ ಸಾಮಾಜಿಕ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಶಿಕ್ಷಣ ಮತ್ತು ಕ್ರೀಡಾ ಚಟುವಟಿಕೆಗಳನ್ನು ಪ್ರೋತ್ಸಾಹಿಸಿ ಯುವ ಜನರನ್ನು ಪ್ರತಿಭಾವಂತರನ್ನಾಗಿ ಮಾಡಲು ನಿರಂತರ ಪ್ರಯತ್ನಿಸಬೇಕು ಎಂದು ಎಕ್ಕಾರು ಬಂಟರ...

Close