ಎ. 15 ರಂದು ಯುಕ್ಷ ಕೌಮುದಿ – 2017

ಕಿನ್ನಿಗೋಳಿ: ಶ್ರೀ ವಿನಾಯಕ ಯಕ್ಷಕಲಾ ತಂಡ ಮಕ್ಕಳ ಮೇಳ ಕೆರೆಕಾಡು ಮೂಲ್ಕಿ ಇದರ 9 ನೇ ವರ್ಷಾಚರಣೆಯ ಸಂಭ್ರಮದ ಯುಕ್ಷ ಕೌಮುದಿ – 2017 ಕಾರ್ಯಕ್ರಮಕ ಎ. 15 ರಂದು ಸಂಜೆ 5 ರಿಂದ ಕೆರೆಕಾಡು ಯಕ್ಷಗಾನ ಅಧ್ಯಯನ ಕೇಂದ್ರದಲ್ಲಿ ಮುಲ್ಕಿ ಮೂಡಬಿದ್ರೆ ಶಾಸಕ ಕೆ. ಅಭಯಚಂದ್ರ ಜೈನ್ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಕಲಾವಿದರ ನೆಲೆಯಲ್ಲಿ ದಿನೇಶ ಶೆಟ್ಟಿ ಶೆಟ್ಟಿ ಕಾವಳಕಟ್ಟೆ, ಕಲಾ ಪೋಷಕರ ನೆಲೆಯಲ್ಲಿ ಶ್ರೀನಾಥ್ ಮುಲ್ಕಿ, ಕಲಾ ತಂಡಕ್ಕೆ ಸಹಕಾರ ನೆಲೆಯಲ್ಲಿ ಚಂದ್ರಹಾಸ ಕತ್ತಲ್ ಸಾರ್ ಅವರಿಗೆ ಯಕ್ಷ ಕೌಮುದಿ ಪ್ರಶಸ್ತಿ ಹಾಗೂ ರಾಜೇಶ್ ಭಟ್ ಕೆರೆಕಾಡು, ಈಶ್ವರ್ ಭಟ್, ರಾಘವೇಂದ್ರ ಭಟ್ ಪೊಸ್ರಾಲ್, ರಾಜೇಶ್ ದಾಸ್, ಕುಶಲ ಪೂಜಾರಿ ತಾಳಿಪಾಡಿ ಮತ್ತು ಜಂಯರಾಮ ಆಚಾರ್ಯ ಅವರಿಗೆ ವಿನಾಯಕ ಯಕ್ಷ ಕಲಾರತ್ನ ಪಶಸ್ತಿ ನೀಡಿ ಗೌರವಿಸಲಾಗುವುದು ಬಳಿಕ ತಂಡದ ಕಲಾವಿದರಿಂದ ಕನಕಾಂಗಿ ಕಲ್ಯಾಣ ಯಕ್ಷಗಾನ ಬಂಯಲಾಟ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಜಯಂತ್ ಅಮೀನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments

comments

Comments are closed.

Read previous post:
ಪುನರೂರು ಬಾಲ ವಿಕಾಸ ಶಿಬಿರ

ಕಿನ್ನಿಗೋಳಿ: ಪುನರೂರು ಪ್ರತಿಷ್ಠಾನದ ಆಶ್ರಯದಲ್ಲಿ ಜನ ವಿಕಾಸ ಸಮಿತಿಯ ಸಹಕಾರದಲ್ಲಿ ಎಪ್ರಿಲ್ 23 ರಿಂದ 30 ರ ವರೆಗೆ ಪ್ರತಿದಿನ ಬೆಳಿಗ್ಗೆ 8 ರಿಂದ ಸಂಜೆ 4 ರ ವರೆಗೆ ಮಕ್ಕಳ ಬೌದ್ದಿಕ ಬೆಳವಣಿಗೆಗಾಗಿ...

Close