ಕಿನ್ನಿಗೋಳಿ ನೂತನ ಬಸ್ಸು ನಿಲ್ದಾಣ ರಚನಾ ಸಭೆ

ಕಿನ್ನಿಗೋಳಿ : ಕಿನ್ನಿಗೋಳಿ ಬಸ್ ನಿಲ್ದಾಣದಲ್ಲಿ ವಾಹನ ನಿಬಿಡತೆ, ವಾಹನಗಳ ಪಾರ್ಕಿಂಗ್ ಹಾಗೂ ಜನ ಸಂಚಾರ ಹೆಚ್ಚಾಗಿದ್ದು ಪ್ರಸ್ತುತ ಇರುವ ಬಸ್ಸು ತಂಗುದಾಣ ಕೆಡವಿ ಅದರ ಸಮೀಪದಲ್ಲಿಯೇ ಸುಸಜ್ಜಿತವಾದ ಸುಮಾರು 12 ಲಕ್ಷರೂ ವೆಚ್ಚದಲ್ಲಿ ಬಸ್ ನಿಲ್ದಾಣ, ಪೋಲಿಸ್ ಹೊರಠಾಣೆ, ಟ್ರಾಫಿಕ್ ಪೋಲಿಸ್ ಕೊಠಡಿ ಹಾಗೂ ಬಸ್ಸು ಏಜಂಟರ ಕೊಠಡಿ ನಿರ್ಮಾಣ ಮಾಡಲಾಗುವುದು ಎಂದು ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನ ಸಿಕ್ವೇರಾ ಹೇಳಿದರು.
ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಬುಧವಾರ ನಡೆದ ಪೋಲಿಸ್, ಟ್ರಾಫಿಕ್, ಕಿನ್ನಿಗೋಳಿ ವಲಯ ಬಸ್ಸು ಮಾಲಕರ ಸಂಘ ಹಾಗೂ ಕಿನ್ನಿಗೋಳಿ ಬಸ್ಸು ನಿಲ್ದಾಣದ ವರ್ತಕರ ಸಭೆಯಲ್ಲಿ ಮಾಹಿತಿ ನೀಡಿ ಮಾತನಾಡಿದರು.
ಪ್ರಸ್ತುತ ಬಸ್ಸು ತಂಗುದಾಣ ತೀರಾ ಚಿಕ್ಕದಾಗಿದ್ದು ಮಳೆಗಾಲದಲ್ಲಿ ಪ್ರಯಾಣಿಕರು ಬಸ್ಸಿಗೆ ಕಾಯುವ ಸಮಯ ಒದ್ದೆಯಾಗುವ ಸಮಸ್ಯೆ ಹಾಗೂ ಬಸ್ಸುಗಳು ಕೂಡಾ ನಿಲ್ಲಲು ಅನಾನುಕೂಲವಾಗಿದೆ ಹಾಗಾಗಿ ಅನಿರ್ವಾಯವಾಗಿ ಬಸ್ಸು ನಿಲ್ದಾಣವನ್ನು ಸ್ವಲ್ಪ ಹಿಂದೆ ಸರಿಸಬೇಕಾದ ಪ್ರಮೇಯ ಬಂದೊಗಿದೆ. ಆಗ ಹೆಚ್ಚಿನ ಸಂಖ್ಯೆಯ ಬಸ್ಸುಗಳು ನಿಲ್ಲಲು ಪ್ರಯಾಣಿಕರಿಗೆ ಸುಸಜ್ಜಿತ ತಂಗುದಾಣ ನಿರ್ಮಾಣ ಸಾಧ್ಯವಾಗಲಿದೆ. ನೂತನವಾಗಿ ನಿರ್ಮಾಣವಾಗುವ ಬಸ್ಸು ನಿಲ್ದಾಣದ ಹಿಂಭಾಗದಲ್ಲಿ 9 ಮೀಟರ್‌ಗಳ ಅಗಲದ ರಸ್ತೆಯನ್ನು ಮಾಡಲಾಗುವುದು. ಗುತ್ತಕಾಡು ಹಾಗೂ ಗೋಳಿಜೋರದಿಂದ ಬರುವ ಬಸ್ಸುಗಳು ಹಾಗೂ ಇತರ ವಾಹನಗಳು ಈ ರಸ್ತೆಯಲ್ಲಿ ಚಲಿಸಬೇಕು. ರಿಕ್ಷಾ ಪಾರ್ಕ್ ಯಾಥಾ ಸ್ಥಿತಿಯಲ್ಲಿರುತ್ತದೆ. ಮುಲ್ಕಿ ಮೂಡಬಿದ್ರೆ ಶಾಸಕ ಕೆ. ಅಭಯಚಂದ್ರ ಜೈನ್ ಅವರ 2 ಲಕ್ಷ ರೂ ಅನುದಾನದಲ್ಲಿ ಬಸ್ ನಿಲ್ದಾಣಕ್ಕೆ ಫೆವರ್ ಫಿನಿಶ್ ಮಾಡಲಾಗುವುದು ಮುಂದಿನ ಹಂತದಲ್ಲಿ ಇಡೀ ಬಸ್ಸು ನಿಲ್ದಾಣಕ್ಕೆ ಫೆವರ್ ಫಿನಿಶ್ ಮಾಡಲಾಗುತ್ತದೆ. ಗುತ್ತಿಗೆದಾರ ಸಂತೋಷ್ ಕುಮಾರ್ ಹೆಗ್ಡೆ ಅವರಿಗೆ ಕಾಮಗಾರಿಯ ಗುತ್ತಿಗೆಯನ್ನು ವಹಿಸಿ ಕೊಡಲಾಗಿದೆ. ಎಂದು ಇಳಿಸಿದರು.

ಪಾರ್ಕಿಂಗ್ ಸಮಸ್ಯೆಗೆ ಪರಿಹಾರ :
ಕಿನ್ನಿಗೋಳಿ ಪಂಚಾಯಿತಿ ಪಿಡಿಒ ಅರುಣ್ ಪ್ರದೀಪ್ ಡಿಸೋಜ ಮಾತನಾಡಿ ಬಸ್ಸು ನಿಲ್ದಾಣದ ಕಾಮಗಾರಿ ನಡೆಯುವ ಮುಂದಿನ ಒಂದೂವರೆ ತಿಂಗಳಿನಲ್ಲಿ ಬಸ್ಸುಗಳನ್ನು ಬಿಟ್ಟು ಬೇರೆ ಯಾವ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗುವುದಿಲ್ಲ ಸಾರ್ವಜನಿಕರು ಈ ಬಗ್ಗೆ ಪಂಚಾಯಿತಿ ಆಡಳಿತದೊಂದಿಗೆ ಸಹಕರಿಸಬೇಕು. ಇತರ ವಾಹನಗಳ ಪಾರ್ಕಿಂಗ್ ವ್ಯವಸ್ಥೆಯನ್ನು ಮುಂದಿನ ದಿನಗಳಲ್ಲಿ ಸೂಕ್ತ ರೀತಿಯ ಜಾಗವನ್ನು ಕಲ್ಪಿಸಿ ಕೊಡಲಾಗುವುದು.
ಬೆಳ್ಮನ್,ಮೂಡಬಿದಿರೆ ಕಟೀಲು ಮಂಗಳೂರು ಕಡೆ ಹೋಗುವವರಿಗೆ ಕಿನ್ನಿಗೋಳಿ ಕನ್ಸೆಟ್ಟಾ ಆಸ್ಪತ್ರೆ ಹಾಗೂ ಚರ್ಚ್ ಬಳಿಯ ಆವರಣೆ ಗೋಡೆಯ ಹೊರಗಡೆ ದ್ವಿಚಕ್ರ, ಕಾರು ಹಾಗೂ ಇತರ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ, ಮೂಲ್ಕಿ, ಉಡುಪಿ ಕಡೆ, ಸುರತ್ಕಲ್ ಮಂಗಳೂರು ಕಡೆ ಹೋಗುವವರಿಗೆ ಕಿನ್ನಿಗೋಳಿ ರಾಜಾಂಗಣದಿಂದ ರೋಟರಿ ರಜತ ಭವನದ ತನಕ ಪಾರ್ಕಿಂಗ್ ವ್ಯವಸ್ಥೆ ಮಾಡುವ ಚಿಂತನೆ ಪಂಚಾಯಿತಿ ಆಡಳಿತಕ್ಕಿದೆ.
ಕಿನ್ನಿಗೋಳಿ ಸಿಂಡಿಕೇಟ್ ಬ್ಯಾಂಕ್ ಬಳಿ ಬಸ್ಸು ಬೇ ನಿರ್ಮಾಣ ಮಾಡಲಾಗುವುದು. ಬಸ್ಸುಗಳನ್ನು ಬಸ್ ನಿಲ್ದಾಣದಲ್ಲಿ ದುರಸ್ತಿ ಮಾಡುವುದು ಕಡ್ಡಾಯವಾಗಿ ನಿಷೇಧಿಸಲಾಗಿದೆ ಬಸ್ಸು ನಿಲ್ದಾಣದಿಂದ ಹೊರಡುವ 5 ನಿಮಿಷ ಮೊದಲು ಮಾತ್ರ ಬಸ್ಸು ನಿಲ್ದಾಣ ಪ್ರವೇಶಿಸಬೇಕು. ಬಸ್ಸು ನಿಲ್ಲಲು ರಾಜಾಂಗಣ ಹಾಗೂ ರೋಟರಿ ರಜತ ಭವನ ಸಮೀಪದ ರಸ್ತೆ ಬದಿಯ ಖಾಲಿ ಸ್ಥಳವನ್ನು ಬಳಸಿಕೊಳ್ಳಬಹುದು. ಬಸ್ ನಿಲ್ದಾಣದ ಪುಟಪಾತ್‌ನಲ್ಲಿ ಅನಧಿಕೃತವಾಗಿ ನಿರ್ಮಿಸಿದ ಅಂಗಡಿಗಳ ಮುಂಬಾಗ ರಚನೆ ಮಾಡಿದ ಅಂಗಡಿಗಳ ಪರವಾನಿಗೆಗಳನ್ನು ನವೀಕರಿಸಲಾಗುವುದಿಲ್ಲ ಅನಧಿಕೃತ ರಚನೆಯಿಂದಾಗಿ ಪ್ರಯಾಣಿಕರು ಹಾಗೂ ಗ್ರಾಹಕರಿಗೆ ತೊಂದರೆಯಾಗುತ್ತಿದೆ. ರಚನೆ ತೆರವು ಗೊಳಿಸಿದ ಬಳಿಕವೇ ಅಂಗಡಿ ಪರವಾನಿಗೆಗಳನ್ನು ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಸಂಚಾರಿ ಠಾಣೆಯ ಮಂಜುನಾಥ್, ಮೂಲ್ಕಿ ಠಾಣೆಯ ಶಾಂತಪ್ಪ , ಕಿನ್ನಿಗೋಳಿ ವಲಯ ಬಸ್ಸು ಮಾಲಕರ ಸಂಘದ ಅಧ್ಯಕ್ಷ ದುರ್ಗಾಪ್ರಸಾದ್ ಹೆಗ್ಡೆ, ಗುತ್ತಿಗೆದಾರ ಸಂತೋಷ್ ಕುಮಾರ್ ಹೆಗ್ಡೆ, ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸುಜಾತಾ ಪೂಜಾರಿ, ಸದಸ್ಯ ಸಂತಾನ್ ಡಿಸೋಜ ಉಪಸ್ಥಿತರಿದ್ದರು.

Kinnigoli-13041701

Comments

comments

Comments are closed.

Read previous post:
ಎ. 15 ರಂದು ಯುಕ್ಷ ಕೌಮುದಿ – 2017

ಕಿನ್ನಿಗೋಳಿ: ಶ್ರೀ ವಿನಾಯಕ ಯಕ್ಷಕಲಾ ತಂಡ ಮಕ್ಕಳ ಮೇಳ ಕೆರೆಕಾಡು ಮೂಲ್ಕಿ ಇದರ 9 ನೇ ವರ್ಷಾಚರಣೆಯ ಸಂಭ್ರಮದ ಯುಕ್ಷ ಕೌಮುದಿ - 2017 ಕಾರ್ಯಕ್ರಮಕ ಎ. 15 ರಂದು ಸಂಜೆ...

Close