ಪುನರೂರು ಬಾಲ ವಿಕಾಸ ಶಿಬಿರ

ಕಿನ್ನಿಗೋಳಿ: ಪುನರೂರು ಪ್ರತಿಷ್ಠಾನದ ಆಶ್ರಯದಲ್ಲಿ ಜನ ವಿಕಾಸ ಸಮಿತಿಯ ಸಹಕಾರದಲ್ಲಿ ಎಪ್ರಿಲ್ 23 ರಿಂದ 30 ರ ವರೆಗೆ ಪ್ರತಿದಿನ ಬೆಳಿಗ್ಗೆ 8 ರಿಂದ ಸಂಜೆ 4 ರ ವರೆಗೆ ಮಕ್ಕಳ ಬೌದ್ದಿಕ ಬೆಳವಣಿಗೆಗಾಗಿ ಉಚಿತ ಬೇಸಿಗೆ ಶಿಬಿರ ಬಾಲ ವಿಕಾಸ ಶಿಬಿರ -2017 ಪುನರೂರು ಶ್ರೀ ವಿಶ್ವನಾಥ ದೇವಳದ ಸಭಾಂಗಣದಲ್ಲಿ ನಡೆಯಲಿದೆ.
ಶಿಬಿರದಲ್ಲಿ ಯೋಗದ ಬಗ್ಗೆ ಯೋಗ ಶಿಕ್ಷಕ ಜಯ ಮುದ್ದು ಶೆಟ್ಟಿ ಕೆಂಚನಕೆರೆ,ಶ್ಲೋಕ ಕಂಠ ಪಾಠದ ಬಗ್ಗೆ ಶ್ಲೋಕ ಶಿಕ್ಷಕ ಶ್ರೀವತ್ಸ ಉಪಾಧ್ಯಾಯ ಕೊಲಕಾಡಿ, ನೀತಿ ಕಥೆ, ಉಪನ್ಯಾಸ ಕುರಿತು ಡಾ ಸೋಂದಾ ಭಾಸ್ಕರ ಭಟ್, ಆವೆ ಮಣ್ಣಿನ ಕಲಾ ಕೃತಿಯ ರಚನೆ ಬಗ್ಗೆ ವೆಂಕಿ ಫಲಿಮಾರು, ಚಿತ್ರ ಕಲೆ ತರಬೇತಿ ಬಗ್ಗೆ ಕುತ್ಯಾರ್ ಅಶ್ವತ್ ಭಟ್, ಭಜನೆ ಬಗ್ಗೆ ಸುರೇಶ್ ಆಚಾರ್ಯ ಹಳೆಯಂಗಡಿ ತರಬೇತಿ ನೀಡಲಿದ್ದಾರೆ. ಎಂದು ಪುನರೂರು ಪ್ರತಿಷ್ಥಾನದ ಅಧ್ಯಕ್ಷ ದೇವಪ್ರಸಾದ್ ಪುನರೂರು ಮತ್ತು ಜನ ವಿಕಾಸ ಸಮಿತಿಯ ಅಧ್ಯಕ್ಷ ಎಸ್ ಸುರೇಶ್ ರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments

comments

Comments are closed.

Read previous post:
Kateel02
KATEEL ANNUVAL UTSAVAM 2017

Close