ಎ.19: ಸಸಿಹಿತ್ಲು ನಡಾವಳಿ ಮಹೋತ್ಸವ

ಕಿನ್ನಿಗೋಳಿ: ಹಳೆಯಂಗಡಿ ಸಸಿಹಿತ್ಲು ಶ್ರಿ ಭಗವತೀ ದೇವಳದಲ್ಲಿ ಏಪ್ರಿಲ್ ೧೯ರಂದು ನಡಾವಳಿ ಮಹೋತ್ಸವ ನಡೆಯಲಿದೆ. ಏ.18 ರಂದು ಕದಿಕೆ ಭಂಡಾರ ಮಂದಿರದಿಂದ ಕ್ಷೇತ್ರಕ್ಕೆ ಭಂಡಾರ ಆಗಮನ, ಏ.19 ರಂದು ಬೆಳಿಗ್ಗೆ ನಾಗತಂಬಿಲ ಸೇವೆ, ಮಧ್ಯಾಹ್ನ ಭಜನೆ, ಮಹಾಪೂಜೆ, ಅನ್ನಪ್ರಸಾದ, ಸಂಜೆ ಭಜನೆ, ವಾದ್ಯಗೋಷ್ಠಿ, ರಾತ್ರಿ ನಡಾವಳಿ, ಮಹಾಪೂಜೆ, ಬಲಿ ಪ್ರಾರಂಭ, ಮೂರ್ತಿ ದರ್ಶನ, ಕಂಚಿಲು ಸೇವೆ, ಉರುಳು ಸೇವೆ, ಹರಕೆ, ತುಲಾಭಾರ ನಡೆಯಲಿದೆ. ಈ ಸಂದರ್ಭ ಭಗವತೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯಿಂದ ಶ್ರಿ ಕೊಲ್ಲೂರು ಕ್ಷೇತ್ರ ಮಹಾತ್ಮೆ ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಲಿದೆ ಎಂದು ದೇವಳದ ಪ್ರಕಟಣೆಯಲ್ಲಿ ತಿಳಿಸಿದೆ.

Comments

comments

Comments are closed.

Read previous post:
ಎಪ್ರಿಲ್ 23 ಕಿನ್ನಿಗೋಳಿ ಅಂಬೇಡ್ಕರ್ ಜಯಂತಿ

ಕಿನ್ನಿಗೋಳಿ : ಕಿನ್ನಿಗೋಳಿಯ ರೋಟರ‍್ಯಾಕ್ಟ್ ಕ್ಲಬ್ ಮತ್ತು ಯುವ ಬ್ರಿಗೇಡ್ ನ ಸಂಯುಕ್ತ ಆಶ್ರಯದಲ್ಲಿ ಎಪ್ರಿಲ್ 23 ರ ಭಾನುವಾರ ಬೆಳಿಗ್ಗೆ ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ಶ್ರೀ ರಾಮಾನುಜಾಚಾರ್ಯರು ಹಾಗೂ ಡಾ...

Close