ಅರಂದು ಪ್ರದೇಶದ ಅಭಿವೃದ್ಧಿಗೆ ಶಾಸಕರು ಬದ್ಧ

ಕಿನ್ನಿಗೋಳಿ : ಹಳೆಯಂಗಡಿ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟ ಅರಂದು ಪ್ರದೇಶ ದ್ವೀಪದಂತಿದ್ದು, ಇಲ್ಲಿಯ ಜನರ ಮೂಲಭೂತ ಸೌಕರ್ಯಕ್ಕಾಗಿ ಶಾಸಕರಾದ ಕೆ. ಅಭಯಚಂದ್ರ ರವರು ಈಗಾಗಲೇ ವಿವಿಧ ಮೂಲದ ಅನುದಾನವನ್ನು ವಿನಿಯೋಗಿಸಿದ್ದು ಸಂಪೂರ್ಣ ಅಭಿವೃದ್ಧಿಗೆ ಶಾಸಕರು ಬದ್ಧ ಎಂದು ಹಳೆಯಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಲಜ ಹೇಳಿದರು.
ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಸದಸ್ಯ ಎಚ್. ವಸಂತ್ ಬೆರ್ನಾರ್ಡ್ ಮಾತನಾಡಿ ಮೀನುಗಾರಿಕಾ ಇಲಾಖೆ ಮುಖಾಂತರ 10 ಲಕ್ಷ ಅಂದಾಜು ವೆಚ್ಚದಲ್ಲಿ ಅರಂದು ರಸ್ತೆ ಅಭಿವೃದ್ಧಿ ಕಾರ್ಯ ಉದ್ಘಾಟಿಸಿ ಮಾತನಾಡಿದರು.
ಮೀನುಗಾರಿಕಾ ಸಚಿವರಾದ ದಿನದಿಂದಲೂ ಅಭಯ ಚಂದ್ರರವರು ಕೊಂಡಿ ರಸ್ತೆಗಳನ್ನು ಅಭಿವೃದ್ಧಿ ಪಡಿಸುವ ಕಾಯಕಕ್ಕೆ ಚಾಲನೆ ನೀಡಿದ್ದು, ಅರಂದು ಪ್ರದೇಶದ ರಸ್ತೆ ಕಾಂಕ್ರೀಟೀಕರಣಗಳಿಗೆ 10 ಲಕ್ಷ ವಿನಿಯೋಗಿಸಿ ದ್ವಿತೀಯ ಹಂತದ ಕಾಮಗಾರಿಗಾಗಿ ಈಗಾಗಲೇ 5 ಲಕ್ಷ ಬಿಡುಗಡೆಗೊಳಿಸಿರುತ್ತಾರೆ. ಅತೀ ಶೀಘ್ರದಲ್ಲಿಯೇ ಎಲ್ಲಾ ರಸ್ತೆಗಳನ್ನು ಕಾಂಕ್ರೀಟೀಕರಣಗೊಳಿಸಲಾಗುವುದು ಎಂದು ತಿಳಿಸಿದರು.
ಹಳೆಯಂಗಡಿ ಗ್ರಾಮಪಂಚಾಯಿತಿ ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ತಾಲೂಕು ಪಂಚಾಯಿತಿ ಸದಸ್ಯ ಜೀವನ್ ಪ್ರಕಾಶ್, ಹಳೆಯಂಗಡಿ ಗ್ರಾಮ ಪಂಚಾಯಿತಿ ಸದಸ್ಯೆ ಜಯಂತಿ, ಎನ್.ಎಮ್.ಪಿ.ಟಿ. ವರ್ಕರ‍್ಸ್ ಯೂನಿಯನ್ ಅಧ್ಯಕ್ಷ ರಮೇಶ್ ಚೆಳ್ಳಾಯರು, ರಾಜೇಶ್ ದೇವಾಡಿಗ, ಭಾಸ್ಕರ್ ದೇವಾಡಿಗ, ಉದ್ಯಮಿ ರಾಕೇಶ್ ಶೆಟ್ಟಿ. ನಂದಿನಿ ಫ್ರೆಂಡ್ಸ್ ಅಧ್ಯಕ್ಷ ರಾಮಚಂದ್ರ ದೇವಾಡಿಗ, ಹರಿಯಪ್ಪ, ಗಣೇಶ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

Kinnigoli-15041706

Comments

comments

Comments are closed.

Read previous post:
Kinnigoli-15041705
ಹಳೆಯಂಗಡಿ ಸರಕಾರಿ ಕಾಲೇಜು ವಾರ್ಷಿಕೋತ್ಸವ

ಕಿನ್ನಿಗೋಳಿ : ಗ್ರಾಮೀಣ ಪ್ರದೇಶದ ಕಾಲೇಜು ಮುಖ್ಯವಾಗಿ ಹೆಣ್ಣುಮಕ್ಕಳ ಉನ್ನತ ಶಿಕ್ಷಣಕ್ಕೆ ಅವಕಾಶ ಕಲ್ಪಿಸುತ್ತಿರುವುದು ಶ್ಲಾಘನೀಯ ಎಂದು ಮುಲ್ಕಿ ಮೂಡಬಿದಿರೆ ಶಾಸಕ ಕೆ. ಅಭಯಚಂದ್ರ ಜೈನ್ ಹೇಳಿದರು. ಹಳೆಯಂಗಡಿ ಸರಕಾರಿ...

Close