ಕಟೀಲು ದೇವಳಕ್ಕೆ ಸೇವಾರೂಪದ ದೇಣಿಗೆ

ಕಿನ್ನಿಗೋಳಿ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿನ ವಸಂತ ಮಂಟಪಕ್ಕೆ ಉದ್ಯಮಿ ಪೊಪ್ಯುಲರ್ ಜಗದೀಶ ಶೆಟ್ಟಿ ಮರವೂರು ಅವರು ಸೇವಾರೂಪದ ದೇಣಿಗೆ ನೀಡಿದ್ದು ಈ ಬಾರಿಯ ಜಾತ್ರಾ ಸಂದರ್ಭ ಮರದ ಆನೆಯ ಮುಖದ ಕೆತ್ತನೆ, ದಂತಕ್ಕೆ ಬಂಗಾರ ಲೇಪಿತ ಬೆಳ್ಳಿಯ ಕಟ್ಟು ಹಾಗೂ ವಸಂತ ಮಂಟಪದ ಹೊರಭಾಗಕ್ಕೆ ಗ್ರಾನೈಟ್ ಹೊದಿಕೆ ಸೇವಾ ರೂಪವಾಗಿ ಬುಧವಾರ ದೇವರಿಗೆ ಸಮರ್ಪಿಸಲಾಯಿತು. ದೇವಳದ ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ, ಅನುವಂಶಿಕ ಮೊಕ್ತೇಸರ ಆಡಳಿತ ಮೊಕ್ತೇಸರ ಸನತ್‌ಕುಮಾರ್ ಶೆಟ್ಟಿ ಕೊಡೆತ್ತೂರುಗುತ್ತು, ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ , ಕಮಲಾದೇವಿ ಪ್ರಸಾದ್ ಆಸ್ರಣ್ಣ, ಶ್ರೀಹರಿನಾರಾಯಣದಾಸ ಆಸ್ರಣ್ಣ, ಮುಂಬಯಿ ಉದ್ಯಮಿ ಅತ್ತೂರು ಹೊಸಲೊಟ್ಟು ಬಾಬು ಶೆಟ್ಟಿ, ರಾಘವೇಂದ್ರ ಆಚಾರ್ಯ ಬಜಪೆ, ರವಿ ಆಚಾರ್ಯ ಬಜಪೆ, ಸುಧೀರ್ ಶೆಟ್ಟಿ, ರಾಮಚಂದ್ರ ಶೆಟ್ಟಿ, ವಾಮನ ಪ್ರಭು, ಜಯ ಶೆಟ್ಟಿ, ಸಂದೀಪ ಶೆಟ್ಟಿ, ಪ್ರಸಾದ್ ಆಚಾರ್ಯ, ಮತ್ತಿತರರು ಉಪಸ್ಥಿತರಿದ್ದರು.

Kinnigoli-15041703

Comments

comments

Comments are closed.

Read previous post:
Kinnigoli-15041702
ಕಿನ್ನಿಗೋಳಿ: ಸಂಭ್ರಮ ಆಚರಣೆ

ಕಿನ್ನಿಗೋಳಿ: ರಾಜ್ಯದ ಗುಂಡ್ಲು ಪೇಟೆ ಹಾಗೂ ನಂಜನಗೂಡು ವಿಧಾನ ಸಭಾ ಕ್ಷೇತ್ರದಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷ ಜಯಗಳಿಸಿದ ಹಿನ್ನಲೆಯಲ್ಲಿ ಕಿನ್ನಿಗೋಳಿ ಕಾಂಗ್ರೇಸ್ ವತಿಯಿಂದ ಗುರುವಾರ ಕಿನ್ನಿಗೋಳಿ...

Close