ಯಕ್ಷಗಾನದಿಂದ ಧರ್ಮ ಜಾಗೃತಿ

ಕಿನ್ನಿಗೋಳಿ: ಕರಾವಳಿಯ ಯಕ್ಷಗಾನದ ಕಲೆಯ ಮೂಲಕ ಧರ್ಮ ಜಾಗೃತಿ ಭಾಷಾ ಜ್ಞಾನ ಹೆಚ್ಚಿಸಿ ಮಕ್ಕಳಲ್ಲಿ ಯಕ್ಷಗಾನಸಕ್ತರನ್ನಾಗಿ ಮಾಡುತ್ತಿರುವುದು ಶ್ಲಾಘನೀಯ ಎಂದು ಎಂದು ಕಿನ್ನಿಗೋಳಿ ಶ್ರೀ ಸ್ವಾಮಿ ವಿವೇಕಾನಂದ ಟ್ರಸ್ಟ್ ಅಧ್ಯಕ್ಷ ನಿಡ್ಡೋಡಿ ಚಾವಡಿ ಮನೆ ಜಗನ್ನಾಥ ಶೆಟ್ಟಿ ಹೇಳಿದರು.
ಶ್ರೀ ವಿನಾಯಕ ಯಕ್ಷಕಲಾ ತಂಡ ಮಕ್ಕಳ ಮೇಳ ಕೆರೆಕಾಡು ಮೂಲ್ಕಿ ಇದರ 9 ನೇ ವರ್ಷಾಚರಣೆಯ ಸಂಭ್ರಮದ ಪ್ರಯುಕ್ತ ಕೆರೆಕಾಡು ಯಕ್ಷಗಾನ ಅಧ್ಯಯನ ಕೇಂದ್ರ ವಠಾರದಲ್ಲಿ ಶನಿವಾರ ನಡೆದ ಯುಕ್ಷ ಕೌಮುದಿ – 2107 ಕಾರ್ಯಕ್ರಮ ಉದ್ಘಾಟಿಸಿ ಮಾತಾನಡಿದರು.
ಯುಗಪುರುಷ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ ಅಧ್ಯಕ್ಷತೆ ವಹಿಸಿದ್ದರು.
ಕಲಾವಿದರ ನೆಲೆಯಲ್ಲಿ ದಿನೇಶ ಶೆಟ್ಟಿ ಶೆಟ್ಟಿ ಕಾವಳಕಟ್ಟೆ, ಕಲಾ ಪೋಷಕರ ನೆಲೆಯಲ್ಲಿ ಶ್ರೀನಾಥ್ ಮುಲ್ಕಿ, ಕಲಾತಂಡಕ್ಕೆ ಸಹಕಾರದ ನೆಲೆಯಲ್ಲಿ ಚಂದ್ರಹಾಸ ಕತ್ತಲ್ ಸಾರ್ ಅವರಿಗೆ ಯಕ್ಷ ಕೌಮುದಿ ಪ್ರಶಸ್ತಿ, ಈಶ್ವರ್ ಭಟ್, ರಾಘವೇಂದ್ರ ಭಟ್ ಪೂಸ್ರಾಲ್, ರಾಜೇಶ್ ದಾಸ್, ಕುಶಲ ಪೂಜಾರಿ ತಾಳಿಪಾಡಿ, ಜಯರಾಮ ಆಚಾರ್ಯ ಅವರನ್ನು ವಿನಾಯಕ ಯಕ್ಷಕಲಾರತ್ನ ಪಶಸ್ತಿ ನೀಡಿಗೌರವಿಸಲಾಯಿತು.
ಕಲಾ ತಂಡದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಮತ್ತು ಪುಸ್ತಕ ವಿತರಣೆ ನಡೆಯಿತು.
ಮುಲ್ಕಿ ಮೂಡಬಿದಿರೆ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಅಭಿಲಾಷ್ ಶೆಟ್ಟಿ, ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್ ಪುನರೂರು ಉಪಸ್ಥಿತರಿದ್ದರು.
ಶ್ರೀ ವಿನಾಯಕ ಯಕ್ಷಕಲಾ ತಂಡ ಮಕ್ಕಳ ಮೇಳದ ವ್ಯವಸ್ಥಾಪಕ ಜಯಂತ ಅಮೀನ್ ಪ್ರಸ್ತಾವನೆಗೈದು ಸ್ವಾಗತಿಸಿದರು. ಪ್ರೇಮಲತಾ, ರೇಷ್ಮಾ ಬಂಗೇರ ಸಂಧ್ಯಾ, ಅಜಿತ್ , ಅಭಿಜಿತ್, ಅನ್ವಿತಾ ಪ್ರಶಸ್ತಿ ಪುರಸ್ಕ್ರತರ ಸನ್ಮಾನ ಪತ್ರ ವಾಚಿಸಿದರು. ಶರತ್ ಶೆಟ್ಟಿ ಹಾಗೂ ಉಮೇಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಬಳಿಕ ತಂಡದ ಕಲಾವಿದರಿಂದ ಕನಕಾಂಗಿ ಕಲ್ಯಾಣ ಯಕ್ಷಗಾನ ಬಂiಲಾಟ ನಡೆಯಿತು.

Kinnigoli-17041704

Comments

comments

Comments are closed.

Read previous post:
Kinnigoli-17041703
ಕಿನ್ನಿಗೋಳಿ ನೂತನ ಬಸ್ಸು ನಿಲ್ದಾಣ ಶಿಲಾನ್ಯಾಸ

ಕಿನ್ನಿಗೋಳಿ: ವೇಗವಾಗಿ ಬೆಳೆಯುತ್ತಿರುವ ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಒಳಚರಂಡಿ ಯೋಜನೆ, ರಸ್ತೆ ಅಭಿವೃದ್ದಿ ಮುಂತಾದ ಕಾಮಾಗರಿಗಳಿಗೆ ಗ್ರಾಮ ಪಂಚಾಯಿತಿ ಅನುದಾನದಲ್ಲಿ ಕೇವಲ 30 ಲಕ್ಷ ರೂ ಸರಕಾರದಿಂದ ದೊರಕುತ್ತಿದೆ ನಗರ...

Close