ಕಿನ್ನಿಗೋಳಿ ನೂತನ ಬಸ್ಸು ನಿಲ್ದಾಣ ಶಿಲಾನ್ಯಾಸ

ಕಿನ್ನಿಗೋಳಿ: ವೇಗವಾಗಿ ಬೆಳೆಯುತ್ತಿರುವ ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಒಳಚರಂಡಿ ಯೋಜನೆ, ರಸ್ತೆ ಅಭಿವೃದ್ದಿ ಮುಂತಾದ ಕಾಮಾಗರಿಗಳಿಗೆ ಗ್ರಾಮ ಪಂಚಾಯಿತಿ ಅನುದಾನದಲ್ಲಿ ಕೇವಲ 30 ಲಕ್ಷ ರೂ ಸರಕಾರದಿಂದ ದೊರಕುತ್ತಿದೆ ನಗರ ಪಂಚಾಯಿತಿ ಆದರೆ ಸುಮಾರು 5 ಕೋಟಿಯ ಅನುದಾನ ಸರಕಾರದಿಂದ ಬರುತ್ತದೆ. ಎಂದು ಮುಲ್ಕಿ ಮೂಡಬಿದ್ರೆ ಶಾಸಕ ಕೆ. ಅಭಯಚಂದ್ರ ಜೈನ್ ಹೇಳಿದರು.
ಭಾನುವಾರ ಕಿನ್ನಿಗೋಳಿ ಗ್ರಾಮ ಪಂಚಾಯಿತಿಯ ಅನುದಾನದಲ್ಲಿ ಸುಮಾರು 12 ಲಕ್ಷರೂ ವೆಚ್ಚದಲ್ಲಿ ನೂನವಾಗಿ ನಿರ್ಮಾಣವಾಗುವ ಬಸ್ಸು ನಿಲ್ದಾಣದ ಶಿಲಾನ್ಯಾಸ ಕಾರ್ಯಕ್ರಮ ನಡೆಸಿ ಮಾತನಾಡಿ ಜನಸಂಖ್ಯೆಯಲ್ಲಿನ ಹೆಚ್ಚಳ ಹಾಗೂ ತ್ವರಿತವಾಗಿ ಅಭಿವೃದ್ದಿಗೊಳ್ಳುತ್ತಿರುವ ಕಿನ್ನಿಗೋಳಿ ಹಾಗೂ ಮೆನ್ನಬೆಟ್ಟು ಗ್ರಾಮ ಪಂಚಾಯಿತಿಗಳನ್ನು ಒಟ್ಟು ಸೇರಿಸಿ ಪಟ್ಟಣ ಪಂಚಾಯಿತಿ ಅಥವಾ ನಗರ ಪಂಚಾಯಿತಿ ಮಾಡಬೇಕಾದ ಅನಿವಾರ್ಯತೆ ಇದೆ. ಎಂದರು.
ಈ ಸಂದರ್ಭ ದ.ಕ. ಜಿಲ್ಲಾ ಯುವ ಕಾಂಗ್ರೆಸ್ ನಾಯಕ ಮಿಥುನ್ ರೈ, ಮುಲ್ಕಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಧನಂಜಯ ಮಟ್ಟು, ಎಪಿಎಂಸಿ ಅಧ್ಯಕ್ಷ ಪ್ರಮೋದ್ ಕುಮಾರ್, ಮಂಗಳೂರು ತಾ. ಪಂ. ಸದಸ್ಯ ದಿವಾಕರ ಕರ್ಕೇರಾ, ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರ, ಉಪಾಧ್ಯಕ್ಷೆ ಸುಜಾತಾ ಪೂಜಾರಿ, ಸುರತ್ಕಲ್ ಸಂಚಾರಿ ಠಾಣಾಧಿಕಾರಿ ಮಂಜುನಾಥ್, ಗುತ್ತಿಗೆದಾರ ಸಂತೋಷ್ ಕುಮಾರ್ ಹೆಗ್ಡೆ, ಬಸ್ಸು ಮಾಲಕರ ಸಂಘದ ಸ್ವರಾಜ್ ಶೆಟ್ಟಿ, ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ, ಜೋಸ್ಸಿ ಪಿಂಟೋ, ರಾಕಿ ಪಿಂಟೋ, ಕಿಶೋರ್ ಶೆಟ್ಟಿ ದೆಪ್ಪುಣಿಗುತ್ತು, ಪುತ್ತುಬಾವ, ಕಿನ್ನಿಗೋಳಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅರುಣ್ ಪ್ರದೀಪ್ ಡಿಸೋಜ, ಗ್ರಾಮ ಪಂಚಾಯಿತಿ ಸದಸ್ಯರಾದ ಟಿ. ಎಚ್. ಮಯ್ಯದ್ದಿ, ವಾಣಿ, ಅರುಣ್ ಕುಮಾರ್, ಶರತ್ ಕುಮಾರ್, ಸಂತಾನ್ ಡಿಸೋಜ, ಚಂದ್ರಶೇಖರ್, ರವೀಂದ್ರ ದೇವಾಡಿಗ, ಜಾನ್ಸನ್ ಜೆರೋಮ್ ಡಿಸೋಜ, ಸಂತೋಷ್, ಸುನೀತಾ ರೋಡ್ರಿಗಸ್, ಪ್ರಕಾಶ್ ಆಚಾರ್ ಶರತ್ ಶೆಟ್ಟಿ ಗಣೇಶ್ ಭಟ್, ವರುಣ್ ಭಟ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-17041703

Comments

comments

Comments are closed.

Read previous post:
Kinnigoli-17041702
ಕ್ರೀಡೆಯಿಂದ ಆರೋಗ್ಯ ಮಾನಸಿಕ ಕ್ಷಮತೆ

ಕಿನ್ನಿಗೋಳಿ: ಕ್ರೀಡೆಯಿಂದ ಆರೋಗ್ಯ ಮಾನಸಿಕ ಕ್ಷಮತೆ ಹಾಗೂ ಸಂಘಟನೆ ಬಲಗೊಳ್ಳುತ್ತದೆ. ಹರಿ ಸ್ಪೋರ್ಟ್ಸ್ ಕ್ಲಬ್ ಕೇವಲ ಕ್ರೀಡೆಗೆ ಮಾತ್ರ ಸೀಮಿತವಾಗಿರದೆ, ಹಲವಾರು ಸಮಾಜಮುಖಿ ಕೆಲಸ ಕಾರ್ಯಗಳಲ್ಲಿ ತನ್ನನ್ನು ತಾನು...

Close