ಕ್ರೀಡೆಯಿಂದ ಆರೋಗ್ಯ ಮಾನಸಿಕ ಕ್ಷಮತೆ

ಕಿನ್ನಿಗೋಳಿ: ಕ್ರೀಡೆಯಿಂದ ಆರೋಗ್ಯ ಮಾನಸಿಕ ಕ್ಷಮತೆ ಹಾಗೂ ಸಂಘಟನೆ ಬಲಗೊಳ್ಳುತ್ತದೆ. ಹರಿ ಸ್ಪೋರ್ಟ್ಸ್ ಕ್ಲಬ್ ಕೇವಲ ಕ್ರೀಡೆಗೆ ಮಾತ್ರ ಸೀಮಿತವಾಗಿರದೆ, ಹಲವಾರು ಸಮಾಜಮುಖಿ ಕೆಲಸ ಕಾರ್ಯಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಮಾದರಿ ಸಂಘವಾಗಿ ಬೆಳೆದು ನಿಂತಿದೆ ಎಂದು ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಉಮಾನಾಥ ಕೋಟ್ಯಾನ್ ಹೇಳಿದರು
ಶನಿವಾರ ಪಕ್ಷಿಕೆರೆ ಸಮೀಪದ ಕೆಮ್ರಾಲ್ ಪ್ರೌಢ ಶಾಲಾ ಮೈದಾನದಲ್ಲಿ ಹರಿಪಾದೆ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ವಿದ್ಯಾ ನಿಧಿಯ ಪ್ರಯುಕ್ತ ಶ್ರೀ ಹರಿ ಟ್ರೋಫಿ 60 ಗಜಗಳ ಕ್ರಿಕೆಟ್ ಪಂದ್ಯಾಟ ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭ ಕಿನ್ನಿಗೋಳಿ ಶ್ರೀ ಸ್ವಾಮಿ ವಿವೇಕಾನಂದ ಸೇವಾ ಟ್ರಸ್ಟ್ ಅಧ್ಯಕ್ಷ ನಿಡ್ಡೋಡಿ ಚಾವಡಿ ಮನೆ ಜಗನ್ನಾಥ್ ಶೆಟ್ಟಿ, ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್‌ಕುಮಾರ್ ಬೊಳ್ಳೂರು, ಮಂಗಳೂರು ತಾಲೂಕು ಪಂಚಾಯಿತಿ ಸದಸ್ಯೆ ವಜ್ರಾಕ್ಷಿ ಶೆಟ್ಟಿ, ಕೆಮ್ರಾಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್ ಅಂಚನ್, ಪಡುಪಣಂಬೂರು ಪಂಚಾಯಿತಿ ಅಧ್ಯಕ್ಷ ಮೋಹನ್ ದಾಸ್, ಸುದರ್ಶನ್ ಎಂ, ಈಶ್ವರ್ ಕಟೀಲ್, ಜಯರಾಮ ಆಚಾರ್ಯ, ಪದ್ಮಾನಾಭ ಶೆಟ್ಟಿ, ಹರಿ ಸ್ಪೋರ್ಟ್ಸ್ ಕ್ಲಬ್ ನ ಚೇತನ್, ದಿನೇಶ್ ಹರಿಪಾದೆ ಮತ್ತಿತರರು ಉಪಸ್ಥಿತರಿದ್ದರು.
ಅರ್ಪಿತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli-17041702

Comments

comments

Comments are closed.

Read previous post:
Kinnigoli-17041701
ಸ್ವಾರ್ಥ ರಹಿತ ಸೇವೆಯನ್ನು ಸಮಾಜ ಗುರುತಿಸುತ್ತದೆ

ಕಿನ್ನಿಗೋಳಿ : ಜನ ಪ್ರತಿನಿಧಿಗಳು ಸ್ವಾರ್ಥ ರಹಿತ ಸೇವೆಯನ್ನು ಮಾಡಿದಲ್ಲಿ ಸಮಾಜ ಅವರನ್ನು ಗುರುತಿಸುತ್ತದೆ ಅವರನ್ನು ಗೌರವಿಸುವುದು ಅಭಿನಂದನಾರ್ಹ ಎಂದು ಮಂಗಳೂರು ತಾಲೂಕು ಪಂಚಾಯಿತಿ ಸದಸ್ಯ ಜೀವನ್ ಪ್ರಕಾಶ್ ಹೇಳಿದರು....

Close