ಸ್ವಾರ್ಥ ರಹಿತ ಸೇವೆಯನ್ನು ಸಮಾಜ ಗುರುತಿಸುತ್ತದೆ

ಕಿನ್ನಿಗೋಳಿ : ಜನ ಪ್ರತಿನಿಧಿಗಳು ಸ್ವಾರ್ಥ ರಹಿತ ಸೇವೆಯನ್ನು ಮಾಡಿದಲ್ಲಿ ಸಮಾಜ ಅವರನ್ನು ಗುರುತಿಸುತ್ತದೆ ಅವರನ್ನು ಗೌರವಿಸುವುದು ಅಭಿನಂದನಾರ್ಹ ಎಂದು ಮಂಗಳೂರು ತಾಲೂಕು ಪಂಚಾಯಿತಿ ಸದಸ್ಯ ಜೀವನ್ ಪ್ರಕಾಶ್ ಹೇಳಿದರು.
ಪಾವಂಜೆ ಅರಂದ್ ಶ್ರೀ ಪಂಜುರ್ಲಿ ದೈವಸ್ಥಾನ ಕುಮೇರ‍್ದನ್ನ ಕುಮೇರ್ ಮೂಲಸ್ಥಾನದ ವತಿಯಿಂದ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸಂದರ್ಭ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಅರಂದು ಪ್ರದೇಶದ ಅಭಿವೃದ್ಧಿಗೆ ಸಹಕರಿಸಿದ ಎಚ್.ವಸಂತ್ ಬೆರ್ನಾರ್ಡ್ ಅವರನ್ನು ಸನ್ಮಾನಿಸಲಾಯಿತು.
ಹಳೆಯಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಲಜ, ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯೆ ಜಯಂತಿ, ಎನ್.ಎಂ.ಪಿ.ಟಿ. ವರ್ಕರ‍್ಸ್, ಯೂನಿಯನ್ ಅಧ್ಯಕ್ಷ ರಮೇಶ್ ಚೆಳ್ಳಾಯರು, ಸ್ಥಳೀಯ ಮುಖಂಡರಾದ ರಾಜೇಶ್ ದೇವಾಡಿಗ, ಭಾಸ್ಕರ್ ದೇವಾಡಿಗ, ಉದ್ಯಮಿ ರಾಕೇಶ್ ಶೆಟ್ಟಿ. ನಂದಿನಿ ಫ್ರೆಂಡ್ಸ್ ಇದರ ಅಧ್ಯಕ್ಷರಾದ ರಾಮಚಂದ್ರ ದೇವಾಡಿಗ, ಹರಿಯಪ್ಪ, ಗಣೇಶ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

Kinnigoli-17041701

Comments

comments

Comments are closed.

Read previous post:
Kinnigoli-150417011
ಕವತ್ತಾರು ರಸ್ತೆಗೆ ಗುದ್ದಲಿ ಪೂಜೆ

ಕಿನ್ನಿಗೋಳಿ: ಕವತ್ತಾರು ದೇವಳಕ್ಕೆ ಹೋಗುವ ಕಾಂಕ್ರೀಕರಣ ರಸ್ತೆ ನಿರ್ಮಾಣದ ಗುದ್ದಲಿ ಪೂಜೆಯನ್ನು ಇತ್ತೀಚೆಗೆ ಮುಲ್ಕಿ ಮೂಡಬಿದ್ರೆ ಶಾಸಕ ಕೆ.ಅಭಯಚಂದ್ರ ಜೈನ್ ನೆರವೇರಿಸಿದರು. ಬಳ್ಕುಂಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ...

Close