ವಿವಿಧೋದ್ದೇಶ ನೂತನ ಶಾಖೆ ಉದ್ಘಾಟನೆ

ಕಿನ್ನಿಗೋಳಿ: ಕರಾವಳಿ ಜಿಲ್ಲೆಗಳಲ್ಲಿ ಸಹಕಾರಿ ಸಂಘಗಳಿಂದ ಮಧ್ಯಮ ಹಾಗೂ ಬಡ ವರ್ಗದ ಕುಟುಂಬಗಳಿಗೆ ಆರ್ಥಿಕ ಸಹಾಯ ಮತ್ತು ವ್ಯವಸ್ಥೆಗಳನ್ನು ನೀಡುತ್ತಿರುವುದರಿಂದ ಜನರಿಗೆ ತುಂಬಾ ಅನುಕೂಲವಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೇಸ್ ಅಧ್ಯಕ್ಷ ಮಿಥುನ್ ರೈ ಹೇಳಿದರು.
ಕಿನ್ನಿಗೋಳಿ ಬಸ್ ನಿಲ್ದಾಣದ ಬಳಿಯ ಅನಂತ ಪ್ರಕಾಶ ಕಟ್ಟಡದಲ್ಲಿ, ಕಟೀಲು ವಿವಿಧೋದ್ದೇಶ ಸಹಕಾರ ಸಂಘ (ನಿ) ಇದರ ನೂತನ ಶಾಖೆಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಟೀಲು ಸಂತ ಜಾಕೋಬ್ ಚರ್ಚ್ ಧರ್ಮ ಗುರು ರೋನಾಲ್ಡ್ ಕುಟಿನ್ಹೋ ನೂತನ ಶಾಖೆ ಉದ್ಘಾಟಿಸಿದರು. ಭದ್ರತಾ ಕೊಠಡಿಯನ್ನು ಮಿಥುನ್ ರೈ, ಲಾಕರ್ ನ್ನು ಜೆ.ಡಿ.ಎಸ್. ಮುಲ್ಕಿ-ಮೂಡಬಿದ್ರೆ ಅಧ್ಯಕ್ಷ ಅಶ್ವಿನ್ ಜೆ. ಪಿರೇರಾ, ಕಂಪ್ಯೂಟರ್ ವಿಭಾಗವನ್ನು ಕೊಡೆತ್ತೂರು ದೇವಸ್ಯ ಮಠದ ವೇದವ್ಯಾಸ ಉಡುಪ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಈ ಸಂದರ್ಭ ಮಂಗಳೂರು ತಾಲೂಕು ಪಂಚಾಯಿತಿ ಸದಸ್ಯ ದಿವಾಕರ ಕರ್ಕೇರ, ಕಿನ್ನಿಗೋಳಿ ಪಂಚಾಯಿತಿ ಅಧ್ಯಕ್ಷೆ ಪಿಲೋಮಿನ ಸಿಕ್ವೇರ, ಸದಸ್ಯ ಟಿ.ಎಚ್. ಮೈಯ್ಯದಿ, ಜಾನ್ಸನ್ ಜೆರೋಮ್ ಡಿಸೋಜ, ಮುಲ್ಕಿ ನಗರ ಪಂಚಾಯಿತಿ ಸದಸ್ಯ ಪುತ್ತುಭಾವ, ಎಕ್ಕಾರು ಗ್ರಾಮ ಪಂಚಾಯಿತಿ ಸದಸ್ಯ ವಿಕ್ರಂ ಮಾಡ, ಉದ್ಯಮಿ ಸೌಂದರ್ಯ ರಮೇಶ್, ಮುಲ್ಕಿ ಮೂಡಬಿದ್ರೆ ಬಿಜೆಪಿ ಯುವ ಮೋರ್ಚ ಅಧ್ಯಕ್ಷ ಅಭಿಲಾಷ್ ಶೆಟ್ಟಿ, ಮುಲ್ಕಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಧನಂಜಯ ಮಟ್ಟು, ದ.ಕ. ಜಿಲ್ಲಾ ಮಹಿಳಾ ಕಾಂಗ್ರೇಸ್ ಅಧ್ಯಕ್ಷೆ ಶಾಲೆಟ್ ಪಿಂಟೋ, ಅನಂತ ಪ್ರಕಾಶ ಸಂಸ್ಥೆಯ ಮಾಲಕ ಕೆ. ಸಚ್ಚಿದಾನಂದ ಉಡುಪ, ಮುಲ್ಕಿ ವಿಜಯ ರೈತ ಸೇವಾ ಸಂಘದ ಅಧ್ಯಕ್ಷ ರಂಗನಾಥ ಶೆಟ್ಟಿ, ಹಳೆಯಂಗಡಿ ವ್ಯವಸಾಯ ಸೇವಾ ಸಂಘದ ನಿರ್ದೇಶಕ ವಿನೋದ್ ಸಾಲ್ಯಾನ್, ಬಸ್ ಚಾಲಕ ನಿರ್ವಾಹಕ ಸಂಘದ ಅಧ್ಯಕ್ಷ ಬಾಸ್ಕರ ಪೂಜಾರಿ, ಕಿನ್ನಿಗೋಳಿ ವಿಶ್ವ ಬ್ರಾಹ್ಮಣ ಸೇವಾ ಸಂಘದ ಅಧ್ಯಕ್ಷ ಶಿವಪ್ರಸಾದ್ ಆಚಾರ್ಯ, ಕಿನ್ನಿಗೋಳಿ ಜಿ.ಎಸ್.ಬಿ ಉಪಾಧ್ಯಕ್ಷ ರಾಘವೇಂದ್ರ ಪ್ರಭು, ಕಟೀಲು ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಸಂಜೀವ ಮಡಿವಾಳ, ಉಪಾಧ್ಯಕ್ಷ ಸ್ಟ್ಯಾನಿ ಪಿಂಟೋ, ಮುಖ್ಯಕಾರ್ಯನಿರ್ವಾಹಣಾಧಿಕಾರಿ ಉಷಾ, ಪ್ರಭಾರ ಶಾಖಾ ಪ್ರಬಂಧಕಿ ಸುಮಾ ಮತ್ತಿತರರು ಉಪಸ್ಥಿತರಿದ್ದರು.

Kinnigoli19041707 Kinnigoli19041708 Kinnigoli19041709 Kinnigoli190417010 Kinnigoli190417011 Kinnigoli190417013

Comments

comments

Comments are closed.

Read previous post:
Kinnigoli19041702
ಕಟೀಲು – ಹಗಲು ರಥೋತ್ಸವ

ಕಟೀಲು : ಕಟೀಲು ಶ್ರೀ ದುರ್ಗಾ ಪರಮೇಶ್ವರೀ ದೇವಳದ ವರ್ಷಾವಧಿ ಜಾತ್ರೆಯ ಪ್ರಯುಕ್ತ ಬುಧವಾರ ಹಗಲು ರಥೋತ್ಸವ ನಡೆಯಿತು.

Close