ಹಳೆಯಂಗಡಿ: ಸಾಲ ಮಂಜೂರಾತಿ ಪತ್ರ ವಿತರಣೆ

ಕಿನ್ನಿಗೋಳಿ: ಅಲ್ಪ ಸಂಖ್ಯಾತರ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಅನೇಕ ಸವಲತ್ತು ಯೋಜನೆಗಳನ್ನು ಹಮ್ಮಿಕೊಂಡಿದೆ. ಮುಲ್ಕಿ ಮೂಡಬಿದಿರೆ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಅರ್ಹ 300 ಫಲಾನುಭಾವಿಗಳಿಗೆ 95.75ಲಕ್ಷರೂ ವೆಚ್ಚದಲ್ಲಿ ಸವಲತ್ತುಗಳನ್ನು ನೀಡಲಾಗುತ್ತಿದ್ದರೂ ಮದ್ಯವರ್ತಿಗಳ ಹಾವಳಿಯಿಂದಾಗಿ ಸೂಕ್ತ ಫಲಾನುಭವಿಗಳನ್ನು ತಲುಪದೇ ಇರುವುದು ವಿಷಾದನೀಯ ಎಂದು ಶಾಸಕ ಕೆ. ಅಭಯಚಂದ್ರ ಜೈನ್ ಹೇಳಿದರು.
ಗುರುವಾರ ಹಳೆಯಂಗಡಿ ಕಮಲಾ ಹಾಲ್‌ನಲ್ಲಿ ಕರ್ನಾಟಕ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ ಮೂಡಬಿದ್ರಿ ವಿಧಾನ ಸಭಾ ಕ್ಷೇತ್ರದ ಫಲಾನುಭವಿಗಳಿಗೆ ಸಾಲ ಮಂಜೂರಾತಿ ಪತ್ರ ವಿತರಿಸಿ ಮಾತನಾಡಿದರು.
ಇಂದಿರಾಜಿಯವರ ನಂತರ ಅಲ್ಪಸಂಖ್ಯಾತರರಿಗಾಗಿ ಉನ್ನತ ಸವಲತ್ತು ನೀಡಿರುವುದರಲ್ಲಿ ಸಿದ್ದರಾಮಯ್ಯ ಮೊದಲಿಗರಾಗಿದ್ದಾರೆ. ರಾಜ್ಯ ಸರ್ಕಾರದ ಜನ ಪರ ಯೋಜನೆಗಳ ಬಗ್ಗೆ ವಿರೋಧ ಪಕ್ಷಗಳು ಸುಳ್ಳು ಪ್ರಚಾರ ನಡೆಸುತ್ತಿವೆ ಆದರೆ ಜನರು ಈ ಬಗ್ಗೆ ತಿಳುವಳಿಕೆ ಹೊಂದಲು ಕಾರ್ಯಕರ್ತರು ಸರ್ಕಾರದ ಜನಪರ ಯೋಜನೆಗಳನ್ನು ಜನರಿಗೆ ತಿಳಿಸುವ ಕಾರ್ಯ ಮಾಡಬೇಕು ಎಂದರು.
ಈ ಸಂದರ್ಭ ಅಲ್ಪ ಸಂಖ್ಯಾತರ ಸವಲತ್ತುಗಳ ಬಗ್ಗೆ ನಿಗಮದ ಜಿಲ್ಲಾ ಪ್ರಭಂದಕ ಮೊಹಮ್ಮದ್ ಸಪ್ವಾನ್ ಮಾತನಾಡಿ, ಕೇವಲ ಅಲ್ಪ ಸಂಖ್ಯಾತರಿಗಾಗಿ ಶ್ರಮ ಶಕ್ತಿ ಯೋಜನೆಯಡಿ 23.25ಲಕ್ಷ ವೆಚ್ಚದಲ್ಲಿ ತಲಾ 25ಸಾವಿರ (12ಸಾವಿರ ಸಬ್ಸಿಡಿಯೊಂದಿಗೆ 93 ಜನರಿಗೆ ಸಾ.
ಶ್ರಮಶಕ್ತಿ (ಕ್ರಿಶ್ಚಿಯನ್)21ಲಕ್ಷರೂ ವೆಚ್ಚದಲ್ಲಿ 42 ಜನರಿಗೆ ಸಾಲ. 14ಲಕ್ಷರೂ ವೆಚ್ಚದಲ್ಲಿ ತಲಾ 10ಸಾವಿರದಂತೆ 140 ಜನರಿಗೆ ಕಿರು ಸಾಲ. ಗಂಗಾ ಕಲ್ಯಾಣ ಯೋಜನೆಯಡಿ ರೂ37.50 ಲಕ್ಷರೂ ವೆಚ್ಚದಲ್ಲಿ 25 ಜನರಿಗೆ ತಲಾ 1.5ಲಕ್ಷರೂ ವೆಚ್ಚದ ಉಚಿತ ಬೋರ್‌ವೆಲ್ ನೀಡಿಕೆ. ಮಾತ್ರವಲ್ಲದೆ ಉನ್ನತ ಶಿಕ್ಷಣಕ್ಕಾಗಿ ಸಹಾಯಧನ ಹಾಗೂ ಇನ್ನಿತರ ಸರಕಾರಿ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಹಳೆಯಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಲಜ ಅಧ್ಯಕ್ಷತೆ ವಹಿಸಿದ್ದರು.
ಮಂಗಳೂರು ಮೂಡಾ ಸದಸ್ಯ ಎಚ್. ವಸಂತ ಬೆರ್ನಾಡ್, ಹಳೆಯಂಗಡಿ ಗ್ರಾಮ ಪಂ. ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ಸದಸ್ಯರಾದ ಬೇಬಿ ಸುಲೋಚನಿ, ಅಬ್ದುಲ್ ಖಾದರ್, ಸುಗಂ, ಶರ್ಮಿಲಾ ಕೋಟ್ಯಾನ್, ಸಾಹುಲ್ ಹಮೀದ್ ಕದಿಕೆ, ಬಶೀರ್ ಸಾಗ್, ಮೈಯದ್ದಿ, ಹಮೀದ್ ಸಾಗ್ ಮತ್ತಿತರರು ಉಪಸ್ಥಿತರಿದ್ದರು.
ಮೂಲ್ಕಿ ನಗರ ಪಂಚಾಯಿತಿ ಸದಸ್ಯ ಬಿ.ಎಂ.ಆಸೀಪ್ ಕಾರ್ಯಕ್ರಮ ನಿರೂಪಿಸಿದರು.

Kinnigoli-20041707

Comments

comments

Comments are closed.

Read previous post:
ಸ್ವಚ್ಛ ಕಟೀಲು ಎ.22 ರಂದು ಕಾರ್ಯಾಗಾರ

ಕಿನ್ನಿಗೋಳಿ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಮತ್ತು ಮುಂಬೈನ ಸಂಜೀವನಿ ಚಾರಿಟೇಬಲ್ ಟ್ರಸ್ಟ್ ಇವರ ಸಹಭಾಗಿತ್ವದಲ್ಲಿ ಕಟೀಲಿನ ಆಸುಪಾಸಿನ 9 ಗ್ರಾಮ ಪಂಚಾಯತ್‌ಗಳ 20 ಗ್ರಾಮಗಳನ್ನು ಕೇಂದ್ರವಾಗಿರಿಸಿ ಸ್ವಚ್ಛ...

Close