ದೈಹಿಕ ಮಾನಸಿಕವಾಗಿ ಸದೃಡವಾಗಲು ಕ್ರೀಡೆ ಸಹಕಾರಿ

ಕಿನ್ನಿಗೋಳಿ : ದೈಹಿಕ ಮಾನಸಿಕವಾಗಿ ಸದೃಡವಾಗಲು ಕ್ರೀಡೆ ತುಂಬಾ ಸಹಕಾರಿ ಇಂತಹ ಪಂದ್ಯಾಟಗಳಿಂದ ಸಂಘಟನೆ ಬಲಗೊಳ್ಳಲು ಸಾದ್ಯ ಎಂದು ಕರ್ನಾಟಕ, ಕೇರಳ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ (ರಿ.) ಅಧ್ಯಕ್ಷ ಸುಂದರ ಹೇಳಿದರು.
ಕಿನ್ನಿಗೋಳಿ ಸಮೀಪದ ಗುತ್ತಕಾಡು-ಶಾಂತಿನಗರದ ಸಂಗಮ್ ಫ್ರೆಂಡ್ಸ್ ಕ್ರಿಕೆಟರ‍್ಸ್ ಆಶ್ರಯದಲ್ಲಿ ಮಂಗಳೂರು ತಾಲೂಕಿನ ಕೊರಗ ಭಾಂದವರಿಗಾಗಿ ಭಾನುವಾರ ನಡೆದ ಕ್ರಿಕೆಟ್ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು.
ದ.ಕ. ಎ.ಪಿ.ಎಂ.ಸಿ ಅಧ್ಯಕ್ಷ ಪ್ರಮೋದ್‌ಕುಮಾರ್, ಶಾಂತಿನಗರ ಶ್ರೀ ಮೂಕಾಂಬಿಕ ದೇವಳ ಧರ್ಮದರ್ಶಿ ವಿವೇಕಾನಂದ, ಯುಗಪುರುಷ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ, ದ.ಕ. ಜಿ.ಪಂ.ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿ.ಪಂ. ಸದಸ್ಯ ವಿನೋದ್ ಬೊಳ್ಳೂರು, ಮೂಲ್ಕಿ ಮೂಡಬಿದ್ರೆ ಕ್ಷೇತ್ರದ ಬಿ.ಜೆ.ಪಿ ಮಂಡಲ ಅಧ್ಯಕ್ಷ ಈಶ್ವರ ಕಟೀಲು, ಮಂಗಳೂರು ತಾ.ಪಂ. ಸದಸ್ಯ ದಿವಾಕರ ಕರ್ಕೇರ, ಕಿನ್ನಿಗೋಳಿ ಪಂಚಾಯಿತಿ ಸದಸ್ಯರಾದ ವಾಣಿ, ಕೊರಗಾಭಿವೃದ್ಧಿ ಸಂಘದ ಭೋಜ, ನಾರಾಯಣ ಪೂಜಾರಿ, ಚಂದ್ರಶೇಖರ್, ಗುಲಾಂ ಹುಸೇನ್, ತಾಹೀರ್ ನಕಾಶ್, ಟಿ.ಎ.ಹನೀಫ್, ಜಬ್ಬಕೊರಗ, ಆನಂದ, ಶಶಿಕಾಂತ್ ರಾವ್ ಎಳತ್ತೂರು, ಪ್ರಕಾಶ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

Kinnigoli-21041701

Comments

comments

Comments are closed.

Read previous post:
Mulki-21041703
ಕೊಳಚಿಕಂಬಳ ವರ್ಷಾವಧಿ ನೇಮೋತ್ಸವದ

ಮೂಲ್ಕಿ: ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಳಕ್ಕೆ ಸಂಭಂಧಿತ ಕೊಳಚಿಕಂಬಳದ ಶ್ರೀ ಜಾರಂದಾಯ ಧೂಮಾವತಿ ದ್ಯೆವಸ್ಥಾನದಲ್ಲಿ ವರ್ಷಾವಧಿ ನೇಮೋತ್ಸವದ ಪ್ರಯುಕ್ತ ಶ್ರೀ ಜಾರಂದಾಯ ಮತ್ತು ಧೂಮಾವತಿ ದೈವಗಳ ದರ್ಶನ...

Close