ಪಾವಂಜೆ ದೇವಳದಲ್ಲಿ ದಿನಂಪ್ರತಿ ಕಾರ‍್ಯಕ್ರಮ

ಕಿನ್ನಿಗೋಳಿ : ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಳದಲ್ಲಿ ಮುಂದಿನ ವರ್ಷ ನಡೆಯಲಿರುವ ಬ್ರಹ್ಮಕಲಶೋತ್ಸವಾಂಗ ಪೂರ್ವಭಾವಿಯಾಗಿ ಸಾಂಸ್ಕೃತಿಕ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ದಿನಾಂಕ 21-04-2017 ಶುಕ್ರವಾರದಿಂದ ದಿನಾಂಕ 27-04-2017 ಗುರುವಾರತನಕ ಸಂಜೆ 5.30 ರಿಂದ 7.30 ರತನಕ ಬಾಲಕಾಂಡ ಶ್ರೀಮದ್ವಾಲ್ಮೀಕಿ ಮಹರ್ಷಿ ಪ್ರಣೀತ ಶ್ರೀಮದ್ರಾಮಾಯಣ ಕಥಾಮೃತಂ ನಡೆಯಲಿದ್ದು ವಾಚನವನ್ನು ಶ್ರೀ ಕೃಷ್ಣ ಭಟ್, ಸುಣ್ಣಂಗುಳಿ, ಪ್ರವಚನವನ್ನು ವಿದ್ವಾನ್ ರಘುಪತಿ ಭಟ್, ಸಸಿಹಿತ್ಲು ನಡೆಸಿಕೊಡಲಿದ್ದಾರೆ.
ದಿನಾಂಕ 28-04-2017 ಶುಕ್ರವಾರ ಸಂಜೆ 5.30 ರಿಂದ ಭಕ್ತಿ ಸಂಗೀತ ಕು. ನಾಗರತ್ನ ಮತ್ತು ಬಳಗದವರಿಂದ ನಡೆಯಲಿದೆ.
ದಿನಾಂಕ 29-04-2017 ಶನಿವಾರ ಮಧ್ಯಾಹ್ನ ಗಂಟೆ 2ರಿಂದ ಯಕ್ಷಗಾನ ತಾಳಮದ್ದಲೆ ಅರ್ಥಗಾರಿಕಾ ಶಿಬಿರ ರಂಗ ಪ್ರಸಂಗ : ಅರ್ಥಾಂತರಂಗ -1 ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಟಾನದ ಸಹಯೋಗದಲ್ಲಿ ನಡೆಯಲಿದೆ ಎಂದು ಶ್ರೀ ಹರಿದಾಸ ಲಕ್ಷ್ಮೀನಾರ್ಣಪ್ಪಯ್ಯ ಕಲಾಪೋಷಕ ವೇದಿಕೆಯ ಪ್ರಕಟನೆ ತಿಳಿಸಿದೆ.

Comments

comments

Comments are closed.

Read previous post:
Kinnigoli-20041705
ಶ್ರೀ ಭಗವತಿ ದೇವಳ ಸಸಿಹಿತ್ಲು ನಡಾವಳಿ

ಕಿನ್ನಿಗೋಳಿ: ಸಮುದ್ರ ತೀರದಲ್ಲಿರುವ ಐತಿಹಾಸಿಕ ಪ್ರಸಿದ್ಧ ಮುಕ್ಕ ಸಸಿಹಿತ್ಲು ಶ್ರೀ ಭಗವತಿ ದೇವಳದ ನಡಾವಳಿ ಮಹೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು. ಈ ಪ್ರಯುಕ್ತ ದೇವಳದಲ್ಲಿ ಭಜನಾ...

Close