ಶಿಮಂತೂರು ಸ್ಕೌಟ್ಸ್ ಗೈಡ್ಸ್ ಶಿಬಿರ ಸಮಾರೋಪ

ಕಿನ್ನಿಗೋಳಿ: ಸರಕಾರದಿಂದ ಸ್ಕೌಟ್ಸ್ , ಗೈಡ್ಸ್ ಸಂಸ್ಥೆಗೆ ತುಂಬಾ ಪ್ರೋತ್ಸಾಹ ನೀಡುತ್ತದೆ. ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿ ತಮ್ಮ ವ್ಯಕ್ತಿತ್ವ ವಿಕಸನಗೊಳಿಸಬೇಕು ಇದರಿಂದ ವಿದ್ಯಾರ್ಥಿಗಳಿಗೆ ತಮ್ಮ ಮುಂದಿನ ಶಿಕ್ಷಣದ ಸಂದರ್ಭದಲ್ಲಿ ಮೆರಿಟ್‌ಗೆ ಇದರಿಂದ ಪ್ರಯೋಜನವಾಗಲಿದೆ ಎಂದು ಸ್ಕೌಟ್ಸ್ ಗೈಡ್ಸ್‌ನ ಜಿಲ್ಲಾ ಆಯುಕ್ತ ಜಿ. ಎನ್ ಮೋಹನ್ ಹೇಳಿದರು.
ಬುಧವಾರ ಶಿಮಂತೂರು ಶ್ರೀ ಶಾರದಾ ವಿದ್ಯಾ ಸಂಸ್ಥೆಯಲ್ಲಿ ಮಂಗಳೂರು ಶಾರದಾ ವಿದ್ಯಾಲಯದ ಸ್ಕೌಟ್ಸ್ ಮತ್ತು ಗೈಡ್ಸ್ ವಿಭಾಗದ ಆಶ್ರಯಲ್ಲಿ ನಡೆದ ಒಂದು ವಾರದ ವಿಶೇಷ ಶಿಬಿರದಲ್ಲಿ ಮಾತನಾಡಿದರು.
ಮಂಗಳೂರು ಶಾರದಾ ವಿದ್ಯಾಲಯ ಅಧ್ಯಕ್ಷ ಎಂ. ಬಿ. ಪುರಾಣಿಕ್ ಮಾತನಾಡಿ ಮಕ್ಕಳಲ್ಲಿ ದೇಶ ಪ್ರೇಮ, ಸಂಸ್ಕಾರಯುತ ಶಿಸ್ತುಬದ್ಧ ಜೀವನಕ್ಕೆ ಸ್ಕೌಟ್ಸ್ ಗೈಡ್ಸ್ ನಂತಹ ಸಂಸ್ಥೆಗಳು ಸಹಕಾರಿ ಎಂದು ಹೇಳಿದರು.
ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಶಿಮಂತೂರು ಶಾಲಾ ಸಮಿತಿಯ ಕೆ. ಭುವನಾಭಿರಾಮ ಉಡುಪ, ಸ್ಕೌಟ್ಸ್ ಗೈಡ್ಸ್ ಸಂಸ್ಥೆಯ ಡಿಸಿಒ ಚಂದ್ರಕಲಾ, ಕೋಶಾಧಿಕಾರಿ ವಸುದೇವ ಬೋಳೂರು, ಶಿಮಂತೂರು ಶಾಲಾ ಮುಖ್ಯ ಶಿಕ್ಷಕಿ ಗೀತಾ ಜಿ. ಎಸ್, ಶಾರದಾ ವಿದ್ಯಾಲಯದ ಭಾರತ್ ಸ್ಕೌಟ್ಸ್ ಗೈಡ್ಸ್‌ನ ರೇಖಾ , ಶಿಕ್ಷಕ ದಿನೇಶ್ ಕೆ ಉಪಸ್ಥಿತರಿದ್ದರು. ಸುವಿಧಾ ಸ್ವಾಗತಿಸಿ, ಧನುಷ್ ಕಾರ್ಯಕ್ರಮ ನಿರೂಪಿಸಿದರು. ಲಾವಣ್ಯರಾವ್ ವರದಿ ವಾಚಿಸಿದರು.

Mulki--22041707

Comments

comments

Comments are closed.

Read previous post:
Kinnigoli-21041701
ದೈಹಿಕ ಮಾನಸಿಕವಾಗಿ ಸದೃಡವಾಗಲು ಕ್ರೀಡೆ ಸಹಕಾರಿ

ಕಿನ್ನಿಗೋಳಿ : ದೈಹಿಕ ಮಾನಸಿಕವಾಗಿ ಸದೃಡವಾಗಲು ಕ್ರೀಡೆ ತುಂಬಾ ಸಹಕಾರಿ ಇಂತಹ ಪಂದ್ಯಾಟಗಳಿಂದ ಸಂಘಟನೆ ಬಲಗೊಳ್ಳಲು ಸಾದ್ಯ ಎಂದು ಕರ್ನಾಟಕ, ಕೇರಳ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ (ರಿ.)...

Close