ಸ್ವಚ್ಛ ಕಟೀಲು ಯೋಜನೆ -ಪ್ರಾತ್ಯಕ್ಷಿಕೆ ಕಾರ್ಯಾಗಾರ

ಕಿನ್ನಿಗೋಳಿ: ಜನರ ಉತ್ತಮ ಆರೋಗ್ಯದ ದೃಷ್ಟಿಯಿಂದ ಶುದ್ಧ ಕುಡಿಯುವ ನೀರು, ನೈರ್ಮಲ್ಯ, ವಿಮಾ ಯೋಜನೆ ಮುಂತಾದ ಮೂಲಭೂತ ಸೌಕರ್ಯಗಳಿಗೆ ಒತ್ತುಕೊಡಬೇಕು. ಕಟೀಲು ಪರಿಸರದ 20 ಗ್ರಾಮಗಳಲ್ಲಿ ಇದನ್ನು ಅನುಷ್ಠಾನಗೊಳಿಸಿ ಸ್ವಚ್ಛ ಕಟೀಲು ಯೋಜನೆ ಸಾಕಾರ ಮಾಡಬೇಕು. ಇದಕ್ಕೆ ಗ್ರಾಮದ ಜನರು ಹಾಗೂ ಪಂಚಾಯಿತಿ ಆಡಳಿತದ ಸಹಕಾರ ಅತ್ಯಗತ್ಯ ಎಂದು ಸಂಜೀವನಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ. ಸುರೇಶ್ ರಾವ್ ಹೇಳಿದರು.
ಕಟೀಲು ದೇವಳದ ಪದವಿ ಪೂರ್ವ ಕಾಲೇಜು ಸಭಾಭವನದಲ್ಲಿ ಶ್ರೀ ದುರ್ಗಾಪರಮೇಶ್ವರೀ ದೇವಳ ಕಟೀಲು ಮತ್ತು ಸಂಜೀವನಿ ಚಾರಿಟೇಬಲ್ ಟ್ರಸ್ಟ್ ಮುಂಬಯಿ ಸಹಯೋಗದಲ್ಲಿ ಶನಿವಾರ ನಡೆದ ಸ್ವಚ್ಚ ಕಟೀಲು ಯೋಜನೆ ಮಾಹಿತಿ ವಿನಿಮಯ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಗಾರದಲ್ಲಿ ಮಾತನಾಡಿದರು.
ಕಟೀಲು ದೇವಳ ಹಾಗೂ ಮುಂಬಯಿ ಸಂಜೀವನಿ ಟ್ರಸ್ಟ್ ಸಹಭಾಗಿತ್ವದಲ್ಲಿ ಕಟೀಲಿನ ಆಸುಪಾಸಿನ ಮೆನ್ನಬೆಟ್ಟು , ಕೆಮ್ರಾಲ್, ಕಿನ್ನಿಗೋಳಿ, ಐಕಳ, ಬಳ್ಕುಂಜೆ, ಕಲ್ಲಮುಂಡ್ಕೂರು, ಎಕ್ಕಾರು, ಸೂರಿಂಜೆ ಸಹಿತ ಒಂಬತ್ತು ಗ್ರಾಮ ಪಂಚಾಯತ್‌ಗಳನ್ನು 20 ಗ್ರಾಮಗಳನ್ನು ಒಳಗೊಂಡು ಸ್ವಚ್ಚ ಕಟೀಲು ಯೋಜನೆ ಕಾರ್ಯಗತಗೊಳ್ಳಲಿದೆ ಎಂದು ಹೇಳಿದರು.
ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಕಮ್ಯೂನಿಟಿ ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ. ಉಣ್ಣಿಕೃಷ್ಣನ್, ಹಾಗೂ ಕೆ.ಎಂ.ಸಿಯ ಆಸ್ಪತ್ರೆಯ ಶ್ರೀಪತಿ ಆರೋಗ್ಯ ಕಾರ್ಡ್ ಬಗ್ಗೆ ಮಾಹಿತಿ ನೀಡಿದರು. ಟಾಟಾ ಸ್ಟೀಲ್ ಇಂಡಸ್ಟ್ರೀಸ್ ಮ್ಯಾನೇಜರ್ ಸಾಯಿ ನೀರು ಉಪಯೋಗ ಹಾಗೂ ಸುಲಭ ಶೌಚಾಲಯ ನಿರ್ಮಾಣ ಬಗ್ಗೆ ಮಾಹಿತಿ ನೀಡಿದರು. ಪರಾಗ್ ಕುಡಿಯುವ ನೀರಿನ ಬಗ್ಗೆ ಮಾಹಿತಿ ನೀಡಿದರು.
ಮುಲ್ಕಿ ಮೂಡಬಿದಿರೆ ಶಾಸಕ ಕೆ. ಅಭಯಚಂದ್ರ ಜೈನ್, ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಕುಮಾರ್ ಬೊಳ್ಳೂರು, ಕಟೀಲು ದೇವಳದ ಅನುವಂಶಿಕ ಮೊಕ್ತೇಸರ ಕೆ. ವಾಸುದೇವ ಆಸ್ರಣ್ಣ, ಕಟೀಲು ದೇವಳ ಅನುವಂಶಿಕ ಮೊಕ್ತೇಸರ ಆಡಳಿತ ಸಮಿತಿಯ ಅಧ್ಯಕ್ಷ ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರು ಗುತ್ತು, ಲಕ್ಷ್ಮೀನಾರಾಯಣ ಆಸ್ರಣ್ಣ , ವೆಂಕಟರಮಣ ಆಸ್ರಣ್ಣ, ಅನಂತ ಪದ್ಮನಾಭ ಆಸ್ರಣ್ಣ, ಗ್ರಾಮ ಪಂಚಾಯಿತಿಗಳ ಪದಾಕಾರಿಗಳು ಉಪಸ್ಥಿತರಿದ್ದರು.
ಕಟೀಲು ದೇವಳ ಅರ್ಚಕ ಶ್ರೀಹರಿನಾರಾಯಣ ಆಸ್ರಣ್ಣ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Mulki--220417010

Comments

comments

Comments are closed.

Read previous post:
Mulki--22041709
ರೋಟರ‍್ಯಾಕ್ಟ್ -ಜಾಕ್ಸನ್ ಸಲ್ದಾನ ಆಯ್ಕೆ

ಕಿನ್ನಿಗೋಳಿ : ಕೆನರಾ - ಚಾಮುಂಡಿ ವಲಯ (3181) ಇದರ 2017-18ನೇ ಸಾಲಿನ ರೋಟರ‍್ಯಾಕ್ಟ್ ಜಿಲ್ಲಾ ಪ್ರತಿನಿಯಾಗಿ ಕಿನ್ನಿಗೋಳಿ ರೋಟರ‍್ಯಾಕ್ಟ್ ಕ್ಲಬ್‌ನ ಜಾಕ್ಸನ್ ಸಲ್ಡಾನ್ಹ ಆಯ್ಕೆಯಾಗಿದ್ದಾರೆ.

Close