ಸಂಸ್ಥೆಗಳು ಜೊತೆಗೂಡಿ ಉನ್ನತಿಗಾಗಿ ಶ್ರಮಿಸಬೇಕು

ಕಿನ್ನಿಗೋಳಿ : ಗ್ರಾಮದ ಅಭಿವೃದ್ಧಿಗೆ ಪೂರಕ ಕೆಲಸ ಕಾರ್ಯಗಳ ಬಗ್ಗೆ ಸಂಘ ಸಂಸ್ಥೆಗಳು ಜೊತೆಗೂಡಿ ಸಮಾಜದ ಉನ್ನತಿಗಾಗಿ ಶ್ರಮಿಸಬೇಕು. ಎಂದು ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಹೇಳಿದರು.
ಕಿನ್ನಿಗೋಳಿ ಸಮೀಪದ ಗೋಳಿಜೋರ ಶ್ರೀ ರಾಮ ಯುವಕ ವೃಂದದ 31 ನೇ ವಾರ್ಷಿಕೋತ್ಸವದ ಪ್ರಯುಕ್ತ ಗೋಳಿಜೋರ ಶಶೀಂದ್ರ ರಂಗವೇದಿಕೆಯಲ್ಲಿ ಶುಕ್ರವಾರ ನಡೆದ ಸಾರ್ವಜನಿಕ ಸತ್ಯ ನಾರಾಯಣ ಪೂಜೆ ಹಾಗೂ ಶನಿಪೂಜೆಯ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ಈ ಸಂದರ್ಭ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಯಕ್ಷಗಾನ ಕಲಾವಿದ ಮುಖ್ಯಪ್ರಾಣ ಕಿನ್ನಿಗೋಳಿ ಹಾಗೂ ಪ್ರಗತಿಪರ ಕೃಷಿಕ ರಾಮಣ್ಣ ಶೆಟ್ಟಿ ಶಿಮಂತೂರು ಅವರನ್ನು ಸನ್ಮಾನಿಸಲಾಯಿತು. ಯಕ್ಷ ಕವಿ ಪ್ರಸಂಗ ಕರ್ತ ಶ್ರೀಧರ ಡಿ. ಎಸ್. ಸನ್ಮಾನಿತರ ಅಭಿನಂದನಾ ಭಾಷಣಗೈದರು.
ಆಟೋಟ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮನ ವಿತರಿಸಲಾಯಿತು.
ಎಳತ್ತೂರು ದೇವಳದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ಹೆಗ್ಡೆ, ದ.ಕ. ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಕುಮಾರ್ ಬೊಳ್ಳೂರು, ಕಿನ್ನಿಗೋಳಿ ಗ್ರಾ. ಪಂ. ಸದಸ್ಯ ಚಂದ್ರಶೇಖರ ಗೋಳಿಜೋರ, ಗೋಳಿಜೋರ ಶ್ರೀ ರಾಮ ಯುವಕ ವೃಂದದ ಗೌರವಾಧ್ಯಕ್ಷ ಪ್ರಕಾಶ್ ಹೆಗ್ಡೆ ಎಳತ್ತೂರು, ಗೌರವ ಸಲಹೆಗಾರ ಸುಧಾಕರ ಶೆಟ್ಟಿ, ಅಧ್ಯಕ್ಷ ರಜ್ ಗೋಳಿಜೋರ ಉಪಸ್ಥಿತರಿದ್ದರು.
ಕಾರ್ಯದರ್ಶಿ ಪ್ರಕಾಶ್ ಆಚಾರ್ ಸ್ವಾಗತಿಸಿದರು. ಶ್ರೀಪತಿ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಮನೋಜ್ ಕಾರ್ಯಕ್ರಮ ನಿರೂಪಿಸಿದರು.

Mulki--22041708

Comments

comments

Comments are closed.

Read previous post:
Mulki--22041702
ಮುಲ್ಕಿ: ಕೊಳಚಿಕಂಬಳ ನೇಮೋತ್ಸವ

ಮೂಲ್ಕಿ: ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಳದ ಆಡಳಿತ ಕ್ಕೊಳಪಟ್ಟ ಕೊಳಚಿಕಂಬಳ ಶ್ರೀ ಜಾರಂದಾಯ ದೈವಸ್ಥಾನದಲ್ಲಿ ವರ್ಷಾವಧಿ ನೇಮೋತ್ಸವದ ಪ್ರಯುಕ್ತ ಶ್ರೀ ಜಾರಂದಾಯ, ಶ್ರೀ ಧೂಮಾವತಿ ಮತ್ತು ಪರಿವಾರ...

Close