ಸಾಮರಸ್ಯದಿಂದ ಭವ್ಯ ಭಾರತ ಕಟ್ಟೋಣ

ಕಿನ್ನಿಗೋಳಿ: ದೇಶ ಕಂಡ ಶ್ರೇಷ್ಟ ದಾರ್ಶನಿಕ ರಾಮಾನುಜಾಚಾರ್ಯರು ಸಾವಿರ ವರ್ಷಗಳ ಹಿಂದೆ ಜಾತಿಯ ಪರಿಕಲ್ಪನೆಯನ್ನು ಮೆಟ್ಟಿ ನಿಂತವರು ಅದೇ ತರಹ ನೂರು ವರ್ಷಗಳ ಹಿಂದೆ ಡಾ. ಬಿ. ಆರ್. ಅಂಬೇಡ್ಕರ್ ಕೂಡ ಜಾತಿ ಸಾಮರಸ್ಯಕ್ಕಾಗಿ ಜೀವನವನ್ನು ಮುಡಿಪಾಗಿಟ್ಟರು. ಇಂತವರನ್ನು ನೆನಸಿಕೊಂಡು ಶತಮಾನಗಳಿಂದ ಅಂಟಿಕೊಂಡಿರುವ ಜಾತಿಯ ಕೊಳೆಯನ್ನು ತೊಳೆದು ಬಿಡಲು ನಾವು ಯಾಕೇ ಪ್ರಯತ್ನ ಮಾಡಬಾರದು ಎಂದು ಖ್ಯಾತ ಅಂಕಣಕಾರ ಯುವಾಬ್ರಿಗೇಡ್ ಮಾಗದರ್ಶಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಕಿನ್ನಿಗೋಳಿ ರೋಟರ‍್ಯಾಕ್ಟ್ ಕ್ಲಬ್, ಯುವ ಬ್ರಿಗೇಡ್ ಕಿನ್ನಿಗೋಳಿ ಇದರ ಆಶ್ರಯದಲ್ಲಿ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಭಾನುವಾರ ನಡೆದ ಸಾವಿರದ ಜಯಂತಿಯ ಜಾತಿಯ ಸಂಕೋಲೆಯನ್ನು ಕಳಚೋಣ ಬನ್ನಿ ಎಂಬ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣಗೈದು ಮಾತನಾಡಿ ಮೇಲ್ವರ್ಗ ಹಾಗೂ ಕೆಳವರ್ಗ ಎಂಬ ಮನೋಧರ್ಮ ಹಿಂದಿನ ಕಾಲದಿಂದಲೂ ಬಂದಿದೆ. ಇಂತಹ ಶೋಷಣೆಯನ್ನು ವಿರೋಧಿಸುತ್ತ ಬಂದ ರಾಮಾನುಜಾಚಾರ್ಯರು ಮತ್ತು ಡಾ. ಬಿ. ಆರ್ ಅಂಬೇಡ್ಕರ್ ಅವರು ಎಲ್ಲಾ ಅಪಮಾನ ಅವಮಾನಗಳ ವಿರುದ್ಧ ನಿಂತು ಇಡಿಯ ಸಮಾಜವನ್ನು ಮೇಲೆತ್ತಲು ಕಟಿಬದ್ದರಾಗಿದ್ದರು. ಅವರನ್ನು ನೆನಪಿಸಿ ಅವರ ಧ್ಯೇಯ ದೋರಣೆಗಳನ್ನು ರೂಡಿಸಿಕೊಳ್ಳುವುದು ಅಗತ್ಯವಾಗಿದೆ. ಶಿಕ್ಷಣ, ಊಟ, ವಸತಿ ಎಲ್ಲಾ ವಿಷಯದಲ್ಲೂ ಆಗ ತಾರತಮ್ಯ ಇತ್ತಾದರೂ ಈಗ ಶೇ. 50 ಕಡಿಮೆಯಾಗಿದ್ದರೂ ಕೆಲವು ಗ್ರಾಮೀಣ ಪ್ರದೇಶದಲ್ಲಿ ಕೆಲವೂಂದು ಶೋಷಣೆಗಳು ಜಾತಿ ಪದ್ದತಿಗಳು ಇಂದಿಗೂ ಜೀವಂತವಾಗಿದೆ. ಯುವ ಜನಾಂಗದಿಂದ ಇಂತಹ ಅನಿಷ್ಟ ಪದ್ದತಿಗಳನ್ನು ದೂರ ಮಾಡಲು ಸಾಧ್ಯ. ಯುವ ಜನರು ಜಾತಿಯ ಸಂಕೋಲೆಯನ್ನು ಕಳಚುವ ಕೆಲಸಕ್ಕೆ ಸಹಕರಿಸಿ ಭವ್ಯ ಭಾರತವನ್ನು ಕಟ್ಟಬೇಕು. ಹೀಗಾದಲ್ಲಿ 2023ರಲ್ಲಿ ವಿಶ್ವದಲ್ಲಿ ಶ್ರೇಷ್ಟತೆನ್ನು ಪಡೆಯುವಲ್ಲಿ ಸಂಶಯವಿಲ್ಲ ಎಂದು ಹೇಳಿದರು.
ಯುಗಪುರುಷದ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ ಅಧ್ಯಕ್ಷತೆ ವಹಿಸಿದ್ದರು.
ಉದ್ಯಮಿ ಪ್ರಥ್ವಿರಾಜ ಆಚಾರ್ಯ, ನಿಯೋಜಿತ ರೋಟರ‍್ಯಾಕ್ಟ್ ಜಿಲ್ಲಾ ಪ್ರತಿನಿಧಿ ಜಾಕ್ಸನ್ ಸಲ್ದಾನ್, ಕಿನ್ನಿಗೋಳಿ ರೋಟರ‍್ಯಾಕ್ಟ್ ಅಧ್ಯಕ್ಷ ಅಶೋಕ್ ಕೆ, ಕಾರ್ಯದರ್ಶಿ ಪ್ರಣಿಕ್ ಉಪಸ್ಥಿತರಿದ್ದರು.
ಪ್ರಕಾಶ್ ಆಚಾರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Kinnigoli-25041703

Comments

comments

Comments are closed.