ಕ್ರೀಡಾ ಸ್ಪೂರ್ತಿಯಿಂದ ಸವಾಲುಗಳನ್ನು ಎದುರಿಸಿ

ಕಿನ್ನಿಗೋಳಿ: ಉತ್ತಮ ಕ್ರೀಡಾ ಸ್ಪೂರ್ತಿಯಿಂದ ನಮ್ಮ ವೈಯಕ್ತಿಕ ಬದುಕಿನಲ್ಲಿಯೂ ಸವಾಲುಗಳನ್ನು ಎದುರಿಸಬಹುದು, ಕ್ರೀಡಾ ಸಂಘಟನೆಯಿಂದ ಸಮಾಜ ಸೇವೆಯ ಮನೋಭಾವನೆಯನ್ನು ಬೆಳೆಸಿಕೊಂಡು ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಿರಿ ಎಂದು ಹಿರಿಯ ಸಮಾಜ ಸೇವಕ ರಮೇಶ್ ದೇವಾಡಿಗ ಹೇಳಿದರು.
ಅವರು ಮೂಲ್ಕಿ ಬಳಿಯ ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್‌ನ ಆಶ್ರಯದಲ್ಲಿ ನಡೆದ ತೋಕೂರು ದಿ.ಬೂಬ ದೇವಾಡಿಗರ ಸ್ಮರಣಾರ್ಥ 28ನೇ ವರ್ಷದ ಗ್ರಾಮೀಣ ಮಟ್ಟದ ಕ್ರಿಕೇಟ್ ಟೂರ್ನಿಗೆ ಚಾಲನೆ ನೀಡಿ ಮಾತನಾಡಿದರು.
ಪಡುಪಣಂಬೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನ್‌ದಾಸ್ ಅಧ್ಯಕ್ಷತೆ ವಹಿಸಿದ್ದರು.
ದಕ್ಷಿಣಕನ್ನಡ ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಕುಮಾರ್ ಬೊಳ್ಳೂರು, ತಾಲೂ ಕು ಪಂಚಾಯಿತಿ ಸದಸ್ಯ ದಿವಾಕರ ಕರ್ಕೇರ, ಪಡುಪಣಂಬೂರು ಗ್ರಾಮ ಪಂಚಾಯಿತಿ ಸದಸ್ಯರಾದ ಹೇಮಂತ ಅಮಿನ್, ಸಂತೋಷ್‌ಕುಮಾರ್, ದಿನೇಶ್ ಕುಲಾಲ್, ಉದ್ಯಮಿ ನೂರು ಅಹ್ಮದ್, ಸ್ಪೋರ್ಟ್ಸ್ ಕ್ಲಬ್‌ನ ಸುರೇಶ್ ಶೆಟ್ಟಿ, ಪದ್ಮನಾಭ ಶೆಟ್ಟಿ, ಗಣಪತಿ ಆಚಾರ್ಯ, ಯೋಗೀಶ್ ಕೋಟ್ಯಾನ್, ದೀಪಕ್ ಸುವರ್ಣ, ಕ್ರೀಡಾ ಕಾರ್ಯದರ್ಶಿ ವಿಶಾಲ್, ಕ್ರಿಕೇಟ್ ತಂಡದ ನಾಯಕ ಸುಖಾನಂದ ಶೆಟ್ಟಿ, ಕ್ಲಬ್‌ನ ಅಧ್ಯಕ್ಷ ರತನ್ ಶೆಟ್ಟಿ, ಕೋಶಾಧಿಕಾರಿ ಪ್ರಶಾಂತ್‌ಕುಮಾರ್ ಬೇಕಲ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-250417012

Comments

comments

Comments are closed.

Read previous post:
Kinnigoli-250417011
ಸಮಾಜದ ಯುವ ಸಂಘಟನೆಗಾಗಿ ಯುವವಾಹಿನಿ

ಕಿನ್ನಿಗೋಳಿ: ಬಿಲ್ಲವ ಸಮಾಜ ವಿದ್ಯೆ ಉದ್ಯೋಗ ಧ್ಯೇಯ ಉದ್ದೇಶಗಳನ್ನು ಇಟ್ಟುಕೊಂಡು ಯುವ ಸಮುದಾಯವನ್ನು ಒಂದೇ ವೇದಿಕೆಯಲ್ಲಿ ಸಂಘಟಿಸಿ ಯುವವಾಹಿನಿಯು ಸಮಾಜಮುಖಿ ಕಾರ್ಯವನ್ನು ಮಾಡುತ್ತಿದೆ ಎಂದು ಮಂಗಳೂರು ಯುವವಾಹಿನಿ ಕೇಂದ್ರ...

Close