ಸಮಾಜದ ಯುವ ಸಂಘಟನೆಗಾಗಿ ಯುವವಾಹಿನಿ

ಕಿನ್ನಿಗೋಳಿ: ಬಿಲ್ಲವ ಸಮಾಜ ವಿದ್ಯೆ ಉದ್ಯೋಗ ಧ್ಯೇಯ ಉದ್ದೇಶಗಳನ್ನು ಇಟ್ಟುಕೊಂಡು ಯುವ ಸಮುದಾಯವನ್ನು ಒಂದೇ ವೇದಿಕೆಯಲ್ಲಿ ಸಂಘಟಿಸಿ ಯುವವಾಹಿನಿಯು ಸಮಾಜಮುಖಿ ಕಾರ್ಯವನ್ನು ಮಾಡುತ್ತಿದೆ ಎಂದು ಮಂಗಳೂರು ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಪದ್ಮನಾಭ ಮರೋಳಿ ಹೇಳಿದರು.
ಹಳೆಯಂಗಡಿ ಬ್ರಹ್ಮಶ್ರೀ ನಾರಾಯಣಗುರು ಸಭಾಗೃಹದಲ್ಲಿ ಭಾನುವಾರ ಯುವವಾಹಿನಿ ಹಳೆಯಂಗಡಿ ಘಟಕದ ನೂತನ ಪದಾಧಿಕಾರಿಗಳಿಗೆ ಪದ ಪ್ರಧಾನ ನೆರವೇರಿಸಿ ಮಾತನಾಡಿದರು.
ಹಳೆಯಂಗಡಿ ಯುವವಾಹಿನಿ ನಿಕಟಪೂರ್ವ ಅಧ್ಯಕ್ಷ ದೀಪಕ್ ನಾಣಿಲ್ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಕಟೀಲು ಮೇಳದ ಯಕ್ಷಗಾನ ಕಲಾವಿದ ರಾಮಚಂದ್ರ ಮುಕ್ಕ ಇವರ ನೇತೃತ್ವದಲ್ಲಿ ಯಕ್ಷಗಾನ ತರಬೇತಿ ತರಗತಿಯನ್ನು ಹಳೆಯಂಗಡಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಚಂದ್ರಶೇಖರ ನಾಣಿಲ್ ಉದ್ಘಾಟಿಸಿದರು.
ಹಳೆಯಂಗಡಿ ಬಿಲ್ಲವ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಗಣೇಶ್ ಜಿ. ಬಂಗೇರ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಕುಮಾರ್ ಬೊಳ್ಳೂರು, ಹಳೆಯಂಗಡಿ ಯುವವಾಹಿನಿಯ ಸಲಹೆಗಾರ ರವಿಚಂದ್ರ ಪಣಂಬೂರು ಉಪಸ್ಥಿತರಿದ್ದರು.
ಶರತ್ ಕುಮಾರ್ ನೂತನ ಅಧ್ಯಕ್ಷರಾಗಿ ಆಯ್ಕೆಯಾದರು.
ಹಳೆಯಂಗಡಿ ಬಿಲ್ಲವ ಸಮಾಜ ಸೇವಾ ಸಂಘದ ಕಟ್ಟಡ ಸಮಿತಿಯ ಕಾರ್ಯದರ್ಶಿ ಭಾಸ್ಕರ್ ಸಾಲ್ಯಾನ್ ಸ್ವಾಗತಿಸಿದರು. ರಮೇಶ್ ಕುಮಾರ್ ಪರಿಚಯಿಸಿದರು. ಬೃಜೇಶ್ ಕುಮಾರ್ ವಂದಿಸಿದರು. ಹಿಮಕರಾ ಟಿ. ಸುವರ್ಣ ನಿರೂಪಿಸಿದರು.

Kinnigoli-250417011

Comments

comments

Comments are closed.

Read previous post:
Kateel-25041701
ಯು.ಎ.ಯಿ ಆಶ್ರಯದಲ್ಲಿ ಕಲಾವಿದರಿಗೆ ಸಮ್ಮಾನ

ಕಿನ್ನಿಗೋಳಿ: ಧರ್ಮ ಜಾಗೃತಿ, ಪುರಾಣ ಕಥೆಗಳ ಸಾರವನ್ನು ಯಕ್ಷಗಾನದ ಮೂಲಕ ಸುಲಭ ರೀತಿಯಲ್ಲಿ ಜನರಿಗೆ ತಲುಪಿಸುವ ಕಲಾ ಪ್ರಕಾರವಾಗಿದೆ ಎಂದು ಕಟೀಲು ದೇವಳ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಹೇಳಿದರು....

Close