ಯು.ಎ.ಯಿ ಆಶ್ರಯದಲ್ಲಿ ಕಲಾವಿದರಿಗೆ ಸಮ್ಮಾನ

ಕಿನ್ನಿಗೋಳಿ: ಧರ್ಮ ಜಾಗೃತಿ, ಪುರಾಣ ಕಥೆಗಳ ಸಾರವನ್ನು ಯಕ್ಷಗಾನದ ಮೂಲಕ ಸುಲಭ ರೀತಿಯಲ್ಲಿ ಜನರಿಗೆ ತಲುಪಿಸುವ ಕಲಾ ಪ್ರಕಾರವಾಗಿದೆ ಎಂದು ಕಟೀಲು ದೇವಳ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಹೇಳಿದರು.
ಕೀರ್ತಿಶೇಷ ಕಟೀಲು ಗೋಪಾಲಕೃಷ್ಣ ಆಸ್ರನ್ಣ ಸಂಸ್ಮರಣ ಸಮಿತಿ ಮುಂಬಯಿ ಹಾಗೂ ಯು.ಎ.ಯಿ ದುಬೈ ಇದರ ಆಶ್ರಯದಲ್ಲಿ ಭಾನುವಾರ ಕಟೀಲು ಮಚ್ಚಾರಿನಲ್ಲಿ ನಡೆದ ಕಟೀಲು ಮೇಳದ ಬಯಲಾಟ ಸಂದರ್ಭ ಯಕ್ಷಗಾನದ ಹಿರಿಯ ಕಲಾವಿದರನ್ನು ಸನ್ಮಾನಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಟೀಲು ದೇವಳ ಅರ್ಚಕ ಶ್ರೀ ದುರ್ಗಾ ಮಕ್ಕಳ ಮೇಳದ ಅಧ್ಯಕ್ಷ ಶ್ರೀ ಹರಿನಾರಾಯಣದಾಸ ಆಸ್ರಣ್ಣ ಮಾತನಾಡಿ ಯಕ್ಷಗಾನ ಜಾನಪದ ಕಲೆಯಾಗಿರದೆ ಶಾಸ್ತ್ರೀಯ ಕಲೆಯಂತಿದೆ. ಈ ಕಲೆಯ ಹಿಂದೆ ಕಲಾವಿದರ ಕೊಡುಗೆ ಅನನ್ಯ ಅವರನ್ನು ನೆನಪಿಸುವ ಗುರುತಿಸುವ ಕೆಲಸ ಶ್ಲಾಘನೀಯ ಎಂದರು.
ಕಳೆದ 15 ವರ್ಷದಿಂದ ಕೀರ್ತಿಶೇಷ ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಸಂಸ್ಮರಣ ಸಮಿತಿಯ ಆಶ್ರಯಲ್ಲಿ ಮುಂಬಯಿ, ದುಬೈಯಲ್ಲಿ ಯಕ್ಷಗಾನ ಕಾರ್ಯಕ್ರಮ ಹಮ್ಮಿಕೊಂಡು 115 ಕ್ಕೂ ಮಿಕ್ಕಿ ಕಲಾವಿದರನ್ನು ಗುರುತಿಸಿ ಗೌರವಿಸುವ ಕೆಲಸ ಮಾಡಲಾಗಿದೆ ಎಂದು ಸಮಿತಿಯ ಪದ್ಮನಾಭ ಕಟೀಲು ದುಬೈ ಹೇಳಿದರು.
ಮುಂಬಯಿ ಉದ್ಯಮಿ ಬಾಬು ಎಸ್ ಶೆಟ್ಟಿ ಪೆರಾರ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಯಕ್ಷಗಾನ ಕಲಾವಿದ ಮೇಳದ ಪ್ರಬಂಧಕ ಶ್ರೀಧರ ಪೂಜಾರಿ ಪಂಜಾಜೆ, ಸ್ತ್ರಿವೇಷದಾರಿ ಬಾಬು ಕುಲಾಲ್, ಬಣ್ಣದ ವೇಷಧಾರಿ ಶಿವಪ್ರಸಾದ್ ಭಟ್ ಪೆರುವಾಜೆ, ನೇಪಥ್ಯದ ಕಲಾವಿದ ಅರಳ ವಿಜಯ ಅವರನ್ನು ಗೌರವಿಸಲಾಯಿತು. ಮುಂಬಯಿ ಉದ್ಯಮಿ ಪ್ರಭಾಕರ ಡಿ. ಸುವರ್ಣ, ಸಂತೋಷ ಶೆಟ್ಟಿ ಕಿಲೆಂಜೂರು, ಕಿನ್ನಿಗೋಳಿ ಯಕ್ಷಲಹಿರಿ ಅಧ್ಯಕ್ಷ ಪಿ. ಸತೀಶ್ ರಾವ್, ಸುಧಾಕರ ತುಂಬೆ, ಮಾಧವ ಅಮೀನ್ ಮುಂಬಯಿ , ಶ್ರೀಮತಿ ಪದ್ಮನಾಭ ಕಟೀಲು ಮತ್ತಿತರರು ಉಪಸ್ಥಿತರಿದ್ದರು.

Kateel-25041701

Comments

comments

Comments are closed.

Read previous post:
Kinnigoli-25041703
ಸಾಮರಸ್ಯದಿಂದ ಭವ್ಯ ಭಾರತ ಕಟ್ಟೋಣ

ಕಿನ್ನಿಗೋಳಿ: ದೇಶ ಕಂಡ ಶ್ರೇಷ್ಟ ದಾರ್ಶನಿಕ ರಾಮಾನುಜಾಚಾರ್ಯರು ಸಾವಿರ ವರ್ಷಗಳ ಹಿಂದೆ ಜಾತಿಯ ಪರಿಕಲ್ಪನೆಯನ್ನು ಮೆಟ್ಟಿ ನಿಂತವರು ಅದೇ ತರಹ ನೂರು ವರ್ಷಗಳ ಹಿಂದೆ ಡಾ. ಬಿ. ಆರ್....

Close