ಭೂಮಿಯ ರಕ್ಷಣೆ ಅಗತ್ಯ : ಜಗದೀಶ್ ಬಾಳ

ಕಿನ್ನಿಗೋಳಿ: ಭೂಮಿಯ ಮೇಲೆ ಮಾನವರು ಮಾಡುವ ವಿವಿಧ ರೀತಿಯ ಆಕ್ರಮಣಗಳಿಗೆ ಕಡಿವಾಣ ಹಾಕಿಕೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ತೊಂದರೆಗೊಳಗಾಗುವುದು ಅನಿವಾರ್ಯ. ಈ ಬಗ್ಗೆ ಎಚ್ಚರ ಅಗತ್ಯ ಎಂದು ಹಳೆಯಂಗಡಿ ಸರಕಾರಿ ಪದವಿ ಕಾಲೇಜು ಪ್ರಾಧ್ಯಾಪಕ ಜಗದೀಶ್ ಬಾಳ ಹೇಳಿದರು.
ಸಸಿಹಿತ್ಲು ಉತ್ಥಾನ ಬಳಗ ಸೇವಾ ಟ್ರಸ್ಟ್ ರಿ ಆಶ್ರಯದಲ್ಲಿ ಪಾಂಚಜನ್ಯ ಸಭಾಭವನದಲ್ಲಿ ವಿಶ್ವ ಭೂ ದಿನದ ಪರವಾಗಿ ನಡೆದ ನೆಲ- ಜಲಸಂರಕ್ಷಣೆಯ ಜಾಗೃತಿಗಾಗಿ ಹೀಗೊಂದು ಕಾರ್ಯಕ್ರಮದಲ್ಲಿ ಮಾತನಾಡಿದರು.
ಶ್ರೀ ಸರಸ್ವತೀ ಕ್ರೆಡಿಟ್ ಸೌಹಾರ್ದ ಸಹಕಾರಿ ಬ್ಯಾಂಕ್ ಸುರತ್ಕಲ್ ಶಾಖಾ ವ್ಯವಸ್ಥಾಪಕಿ ಸುಧಾ ಕೆ. ಪ್ರಭು ಅರಬ್ಬೀ ಸಮುದ್ರಕ್ಕೆ ಹಾಲೆರೆಯುವುದರೊಂದಿಗೆ ಭೂ ದಿನ ಕಾರ್ಯಕ್ರಮಕ್ಕೆ ಚಾಲನೆಯಿತ್ತರು. ಕಡಲ ಕಿನಾರೆಯಲ್ಲಿ ಪುಟಾಣಿಗಳು ಗಾಳಿಪಟ ಹಾರಿಸುವುದರೊಂದಿಗೆ ಪರಿಸರ ಸಂದೇಶವನ್ನು ಸಾರಲಾಯಿತು ಹಾಗೂ ಕಡಲ ಕಿನಾರೆಯಲ್ಲಿ ಮರಳು ಶಿಲ್ಪ ರಚಿಸಲಾಯಿತು. ನಾವು-ನೀವು ಮಾನವ ಸರಪಳಿಯ ಮೂಲಕ ನಡೆದ ವಿಶ್ವ ಭೂ ದಿನದ ಸಂಕಲ್ಪವನ್ನು ಪರಮಾನಂದ ಸಾಲ್ಯಾನ್ ಹೇಳಿದರು.
ಈ ಸಂದರ್ಭ ಅತಿಥಿಗಳಿಂದ ಸಭಾಂಗಣದ ಎದುರಿನಲ್ಲಿ ಹೂವಿನ ಗಿಡಗಳನ್ನು ನೆಡಲಾಯಿತು.
ನೋಟರಿ ಮತ್ತು ವಕೀಲ ಡೇನಿಯಲ್ ದೇವರಾಜ್, ಕೆಆರ್‌ಇಸಿ ಕನ್ನಡ ಮಾಧ್ಯಮ ಶಾಲಾ ಅಧ್ಯಾಪಕ ವಿಶ್ವನಾಥ ಪಿ., ಸಾಮಾಜಿಕ ಕಾರ್ಯಕರ್ತ ವಿಜಯ ಕುಮಾರ್, ಸಿವಿಲ್ ಕಂಟ್ರಾಕ್ಟರ್ ಧನ್‌ರಾಜ್ ಸಸಿಹಿತ್ಲು ಮತ್ತಿತರು ಉಪಸ್ಥಿತರಿದ್ದರು.
ಚೈತ್ರಾ ಶ್ರೀಕಾಂತ್ ಪ್ರಾರ್ಥಿಸಿದರು, ಸಂಸ್ಥೆಯ ವಿಶ್ವಸ್ಥರಾದ ಹೇಮಚಂದ್ರ ಶೆಟ್ಟಿಗಾರ್ ಪರಿಸರ ಗೀತೆ ಹಾಡಿದರು. ಡಾ. ಶ್ರೀಕಾಂತ್ ರಾವ್ ಸ್ವಾಗತಿಸಿ, ಎನ್‌ಐಟಿಕೆ ಕನ್ನಡ ಮಾಧ್ಯಮ ಹೈಸ್ಕೂಲಿನ ನಿವೃತ್ತ ಮುಖ್ಯೋಪಾಧ್ಯಾಯ ಎನ್.ಎಸ್. ಪ್ರಭು ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಿತೇಶ್ ಸಾಲ್ಯಾನ್ ವಂದಿಸಿದರು. ಸಂಸ್ಥೆಯ ವಿಶ್ವಸ್ಥರಾದ ಭಾಸ್ಕರ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ವಿದ್ಯಾಭಾರತಿ ಶಿಶುಮಂದಿರದ ಪುಟಾಣಿಗಳ ನೃತ್ಯ ವೈವಿಧ್ಯ ಹಾಗೂ ರಂಗ ಸುದರ್ಶನ ರಿ. ಸಸಿಹಿತ್ಲು ಇವರಿಂದ ಭೂಮಿ- ಪರಿಸರ ಸಂಬಂಧ ಸಾರುವ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Kinnigoli-25041703 Kinnigoli-25041704 Kinnigoli-25041705 Kinnigoli-25041706

Comments

comments

Comments are closed.

Read previous post:
Kinnigoli-250417012
ಕ್ರೀಡಾ ಸ್ಪೂರ್ತಿಯಿಂದ ಸವಾಲುಗಳನ್ನು ಎದುರಿಸಿ

ಕಿನ್ನಿಗೋಳಿ: ಉತ್ತಮ ಕ್ರೀಡಾ ಸ್ಪೂರ್ತಿಯಿಂದ ನಮ್ಮ ವೈಯಕ್ತಿಕ ಬದುಕಿನಲ್ಲಿಯೂ ಸವಾಲುಗಳನ್ನು ಎದುರಿಸಬಹುದು, ಕ್ರೀಡಾ ಸಂಘಟನೆಯಿಂದ ಸಮಾಜ ಸೇವೆಯ ಮನೋಭಾವನೆಯನ್ನು ಬೆಳೆಸಿಕೊಂಡು ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಿರಿ ಎಂದು ಹಿರಿಯ ಸಮಾಜ...

Close