ಎಸ್.ಡಿ.ಪಿ.ಐ. ಕಿನ್ನಿಗೋಳಿ : ರಕ್ತದಾನ ಶಿಬಿರ

ಕಿನ್ನಿಗೋಳಿ: ಮನುಷ್ಯನೊಬ್ಬನ ಪ್ರಾಣ ಉಳಿಸಲು ಸಹಕಾರಿಯಾಗುವ ರಕ್ತದಾನದಂತಹ ಶ್ರೇಷ್ಠ ಕಾರ್ಯಗಳಲ್ಲಿ ಯುವ ಜನಾಂಗ ಹೆಚ್ಚೆಚ್ಚು ತೊಡಗಿಕೊಳ್ಳಬೇಕು ಎಂದು ಮಂಗಳೂರು ತಾಲೂಕು ಪಂಚಾಯಿತಿ ಸದಸ್ಯ ದಿವಾಕರ ಕರ್ಕೇರ ಹೇಳಿದರು.
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕಿನ್ನಿಗೋಳಿ ಘಟಕ ಹಾಗೂ ಮಂಗಳೂರು ಲೇಡಿಗೋಶನ್ ಆಸ್ಪತ್ರೆ ರೆಡ್‌ಕ್ರಾಸ್ ಸಹಯೋಗದೊಂದಿಗೆ ಕಿನ್ನಿಗೋಳಿಯ ಶಾಂತಿನಗರದ ಕೆಜೆಎಮ್ ಸಮುದಾಯ ಭವನದಲ್ಲಿ ನಡೆದ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಗುತ್ತಕಾಡು ಕೆಜೆಎಮ್ ಸಹ ಉಸ್ತಾದರಾದ ಅಬ್ದುಲ್ ಹಮೀದ್ ಮುಸ್ಲಿಯಾರ್ ದುವಾ ಆಶೀರ್ವಚನ ನೀಡಿದರು.
ಎಸ್‌ಡಿಪಿಐ ಕಿನ್ನಿಗೋಳಿ ವಲಯಾಧ್ಯಕ್ಷ ಇಬ್ರಾಹಿಂ ಗುತ್ತಕಾಡು ಅಧ್ಯಕ್ಷತೆ ವಹಿಸಿದ್ದರು.
ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರಾ, ಹಾಜಿ ಟಿ.ಎಚ್. ಮಯ್ಯದ್ದಿ, ಎಸ್‌ಡಿಪಿಐ ಮುಲ್ಕಿ-ಮೂಡಬಿದ್ರಿ ಕ್ಷೇತ್ರಾಧ್ಯಕ್ಷ ಜಮಾಲ್ ಜೋಕಟ್ಟೆ, ಕೆಜೆಎಮ್ ಅಧ್ಯಕ್ಷ ಅಬ್ದುಲ್ ರಹ್‌ಮಾನ್, ಪಿಎಫ್‌ಐ ಗುತ್ತಕಾಡು ಘಟಕಾಧ್ಯಕ್ಷ ನವಾಝ್ ಹುಸೈನ್, ಉದ್ಯಮಿ ಅಬೂಸಾಲಿಹ್, ಲೇಡಿಗೋಶನ್ ವೈದ್ಯಾಧಿಕಾರಿ ಎಡ್ವರ್ಡ್ ಹಾಗೂ ಸಮಾಜ ಸೇವಕ ಇಲ್ಯಾಸ್ ಬಜ್ಪೆ, ಅಬ್ದುಲ್ ಕರೀಂ, ಜಲೀಲ್, ಅಬ್ದುಲ್ ಜಲೀಲ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-25041702

Comments

comments

Comments are closed.

Read previous post:
Kinnigoli-25041707
ಶ್ರೀ ಮಾರಿಯಮ್ಮ ದೇವಳ ಮಾರಡ್ಕ ಬಿಂಬ ಪ್ರತಿಷ್ಠೆ.

ಕಿನ್ನಿಗೋಳಿ: ಮಾರಡ್ಕ ಶ್ರೀ ಮಾರಿಯಮ್ಮ ದೇವಳದ ಮಾರಿಪೂಜಾ ಮಹೋತ್ಸವ ಅಂಗವಾಗಿ ಮಂಗಳವಾರ ಕಿನ್ನಿಗೋಳಿ ಅಶ್ವತ್ಥಕಟ್ಟೆಯಲ್ಲಿ ಪ್ರತಿಷ್ಠಾಪಿಸಿದ ದೇವರ ಬಿಂಬ ಪ್ರತಿಷ್ಠೆ.

Close