ಸುರಗಿರಿ- ಅಷ್ಟಬಂಧ ಬ್ರಹ್ಮಕಲಶೋತ್ಸವ

ಕಿನ್ನಿಗೋಳಿ : ಅತ್ತೂರು ಕೆಮ್ರಾಲ್ ಕಿಲೆಂಜೂರು ಗ್ರಾಮಕ್ಕೆ ಸೇರಿದ ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಳದ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ವರ್ಷಾವಧಿ ಜಾತ್ರಾ ಮಹೋತ್ಸವ ದಿನಾಂಕ ಎಪ್ರಿಲ್ 23 ರಿಂದ ಮೇ. 1ರ ತನಕ ಶ್ರೀ ಮಹಾಲಿಂಗೇಶ್ವರ ದೇವರಿಗೆ ಅಷ್ಟಬಂಧ ಬ್ರಹ್ಮಕಲಶೋತ್ಸವವು ಶಿಬರೂರು ಬ್ರಹ್ಮಶ್ರೀ ವೇ.ಮೂ.ವೇದವ್ಯಾಸ ತಂತ್ರಿಗಳ ನೇತ್ರತ್ವದಲ್ಲಿ ಪವಿತ್ರಪಾಣಿ ಲಕ್ಷ್ಮೀನಾರಾಯಣ ಆಚಾರ್ ಶರಣ ಮತ್ತು ಪ್ರಧಾನ ಅರ್ಚಕ ಅಂಗಡಿಮಾರ್ ವಿಶ್ವೇಶ ಭಟ್ ಅವರ ಉಪಸ್ಥಿತಿಯಲ್ಲಿ ನಡೆಯಲಿರುವುದು ಹಾಗೂ ಮೇ 2 ರಿಂದ ಮೇ 5 ರವರೆಗೆ ವರ್ಷಾವಧಿ ಜಾತ್ರಾ ಮಹೋತ್ಸವ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಅತ್ತೂರು ಹೊಸಲೊಟ್ಟು ಬಾಬು ಎನ್. ಶೆಟ್ಟಿ ಹೇಳಿದರು.
ಸುರಗಿರಿ ಮಹಾಲಿಂಗೇಶ್ವರ ದೇವಳದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಎಪ್ರಿಲ್ 26 ರಂದು ಬೆಳಿಗ್ಗೆ 8 ರಿಂದ ತೋರಣ ಮೂಹೂರ್ತ, ಉಗ್ರಾಣ ಮೂಹೂರ್ತ, ಸಂಜೆ 6.30 ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನೃತ್ಯ ವೈಭವ, ನಂತರ ವಿವಿಧ ಗಣ್ಯರ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ, ರಾತ್ರಿ ಮಂಗಳೂರು ಲಕುಮಿ ತಂಡದಿಂದ ದೊಂಬೊರಿ ಪಂತೆಗೆ ಹಾಸ್ಯಮಯ ನಾಟಕ, ಎಪ್ರಿಲ್ 27 ರಂದು ಬೆಳಿಗ್ಗೆ ಬಿಂಬಶುದ್ಧಿ ನವಗ್ರಹ ಶಾಂತಿ ಹಾಗೂ ಧಾರ್ಮಿಕ ಕಾರ್ಯಕ್ರಮಗಳು, ಸಂಜೆ6.30 ರಿಂದ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕ್ರತಿಕ ಕಾರ್ಯಕ್ರಮ, ಸನಾತನ ನಾಟ್ಯಾಲಯ ಮಂಗಳೂರು ಇವರಿಂದ ರಾಷ್ಟ್ರದೇವೋಭವ. ಎಪ್ರಿಲ್ 28 ರಂದು ಬೆಳಿಗ್ಗೆ ಧಾರ್ಮಿಕ ಕಾರ್ಯಕ್ರಮ ಸಂಜೆ 6.30 ರಿಂದ ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈಭವ, ಶ್ರೀ ಮಹಾಲಿಂಗೇಶ್ವರ ಬಾಲ ಯಕ್ಷಗಾನ ಸಂಘ ಸಿದ್ದಕಟ್ಟೆ ಅವರಿಂದ ಶಿವ ಭಕ್ತ ಶಿವಾಮಣ. ಎಪ್ರಿಲ್ 29 ರಂದು ಬೆಳಿಗ್ಗೆ 5 ಗಂಟೆಗೆ, ಗಣಪತಿ ದೇವರ ಬಿಂಬ ಪ್ರತಿಷ್ಟಾಪನೆ, ಮಹಾಲಿಂಗೇಶ್ವರ ದೇವರಿಗೆ ಅಷ್ಟಬಂಧ ಲೇಪನ, ಮ್ರತ್ಯುಂಜಯ ಹೋಮ, 108 ತೆಂಗಿನಕಾಯಿ ಗಣಯಾಗ, ವಿಶೇಷ ಶಾಂತಿ ಹೋಮ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಸಂಜೆ 6.30 ರಿಂದ ಸ್ಥಳಿಯ ಪ್ರತಿಭೆಗಳಿಂದ ಸಾಂಸ್ಕೃತಿಕ ವೈಭವ, ವಿಠಲ ನಾಯಕ್ ಕಲಡ್ಕ ಅವರಿಂದ ಗೀತಾ ಸಾಹಿತ್ಯ ಸಂಭ್ರಮ, ಬಂಟರ ಸಂಘ ಮುಲ್ಕಿ ಅವರಿಂದ ತುಳು ಸಾಂಸ್ಕ್ರತಿಕ ಹಾಗೂ ಜನಪದ ವೈಭವ ನಡೆಯಲಿದೆ. ಎಪ್ರಿಲ್ 30 ರಂದು ಬೆಳಿಗ್ಗೆ ಮಹಾಗಣಪತಿ ದೇವರಿಗೆ 108 ಪರಿಕಲಶ ಸಹಿತ ಬ್ರಹ್ಮಕಲಶಾಭಿಷೇಕ, ನಾಗ ಪ್ರತಿಷ್ಠೆ, ನಾಗದೇವರಿಗೆ ಕಲಶಾಭಿಷೇಕ, ಆಶ್ಲೇಷಾ ಬಲಿ, ಅಣ್ಣಪ್ಪ ಪಂಜುರ್ಲಿ ಪ್ರತಿಷ್ಠೆ ಕಲಾಶಾಭಿಷೇಕ, ಬ್ರಹ್ಮಕಲಶ ಮಂಡಲ ರಚನೆ. ಸಂಜೆ 5 ರಿಂದ ಜಿಲ್ಲೆಯ ಪ್ರಸಿದ್ದ ಆಯ್ದ ಕಲಾವಿದರಿಂದ ಯಕ್ಷ-ಗಾನ-ವೈಭವ, ರಾತ್ರಿ 9 ಗಂಟೆಗೆ ದಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ, ಮೇ 1 ರಂದು ಬೆಳಿಗ್ಗೆ 9.10ಕ್ಕೆ ಶ್ರೀ ಮಹಾಲಿಂಗೇಶ್ವರ ದೇವರಿಗೆ 504 ಪರಿಕಲಶ ಸಹಿತ ಬ್ರಹ್ಮಕಲಶೋತ್ಸವ, ರಾತ್ರಿ 6.30 ರಿಂದ ನೃತ್ಯ ವೈಭವ ನಂತರ ಧಾರ್ಮಿಕ ಸಭಾ ಕಾರ್ಯಕ್ರಮ, ರಾತ್ರಿ 10 ಗಂಟೆಗೆ ಬಲೇ ತೆಲಿಪಾಲೆ ಖ್ಯಾತಿಯ ಪ್ರಶಂಸ ಕಾಪು, ನಮ್ಮ ಕಲಾವಿದರು ಬೆದ್ರ ಹಾಗೂ ವಿಸ್ಮಯ ವಿನಾಯಕ ತಂಡದಿಂದ ಬಂಜರ ತೆಲಿಕೆ ಕಾರ್ಯಕ್ರಮ ನಡೆಯಲಿದೆ.
ಪ್ರತೀ ದಿನ ವಿವಿಧ ಭಜನಾ ಮಂಡಳಿಯಿಂದ ಭಜನಾ ಸೇವೆ, ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಮದ್ಯಾಹ್ನ ಮತ್ತು ರಾತ್ರಿ ಅನ್ನಸಂತರ್ಪಣೆ ನಡೆಯಲಿದೆ ಎಂದರು.
ಆಡಳಿತ ಮೊಕ್ತೇಸರ ಕೆ ಸೀತಾರಾಮ ಶೆಟ್ಟಿ ದುರ್ಗಾದಯಾ ಮಾತನಾಡಿ ದೇವಳದಲ್ಲಿ ಬ್ರಹ್ಮಕಲಶದ ನಿಮಿತ್ತ ಮಹಾಗಣಪತಿ ದೇವರ ಶಿಲಾಮಯ ಗರ್ಭಗುಡಿ, ಶಿಲಾಮಯತೀರ್ಥ ಮಂಟಪ, ದೇವಳದ ಮುಂಬಾಗದಲ್ಲಿ ಅಣ್ಣಪ್ಪ ಪಂಜುರ್ಲಿಯ ದೈವಸ್ಥಾನ, ನೂತನ ಪುಷ್ಕರಣಿ, ನಾಗದೇವರ ಸನ್ನಿಧಿ, ದೇವಾಲಯದ ಒಳಾಂಗಣದ ಮೇಲ್ಚಾವಣಿ, ಹಾಗೂ ಶಿಲ್ಪಕಲೆಗಳಿಂದ ಒಳಗೊಂಡ ಕೆಲಸ ಕಾರ್ಯಗಳು ಸುಮಾರು 4 ಕೋಟಿ ವೆಚ್ಚದಲ್ಲಿ ದಾನಿಗಳ ಸಹಕಾರದಿಂದ ನಡೆಯುತ್ತಿದು ಮುಕ್ತಾಯ ಹಂತದಲ್ಲಿದೆ. ಮೇ 2 ರಿಂದ 5 ರವರೆಗೆ ವಾರ್ಷಿಕ ಮಹೋತ್ಸವ ನಡೆಯಲಿದ್ದು ಈ ಎಲ್ಲಾ ಕಾರ್ಯಕ್ರಮಗಳಿಗೆ ಸಾವಿರಾರು ಮಂದಿ ಕ್ಷೇತ್ರಕ್ಕೆ ಬೇಟಿ ನೀಡಲಿದ್ದು ಕಾರ್ಯಕ್ರಮದ ಯಶಸ್ಸಿಗೆ ಎಲ್ಲಾ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಈ ಸಂದರ್ಭ ದೇವಳದ ಅರ್ಚಕ ವಿಶ್ವೇಶ್ವರ ಭಟ್, ಮೊಕ್ತೇಸರರಾದ ವೈ ಬಾಲಚಂದ್ರ ಭಟ್, ಕೆ ಧನಂಜಯ ಶೆಟ್ಟಿಗಾರ್ ಸಾಗರಿಕಾ, ಕಾರ್ಯಾಧ್ಯಕ್ಷ ಅತ್ತೂರು ಬೈಲು ವೆಂಕಟರಾಜ ಉಡುಪ, ಪ್ರಧಾನ ಕಾರ್ಯದರ್ಶಿ ಕೆ ಲವ ಶೆಟ್ಟಿ ಕೆಮ್ರಾಲ್, ಪ್ರಧಾನ ಕೋಶಾಧಿಕಾರಿ ರಮಾನಂಥ ಎನ್ ಶೆಟ್ಟಿ ಅಮಿತಾ ನಿವಾಸ ಕೆಮ್ರಾಲ್, ಸುರಗಿರಿ ಯುವಕ ಮಂಡಲ ಅಧ್ಯಕ್ಷ ಸಚಿನ್ ಶೆಟ್ಟಿ ಅತ್ತೂರು ಮತ್ತಿತರರು ಉಪಸ್ಥಿತರಿದ್ದರು.

Comments

comments

Comments are closed.