ಸುರಗಿರಿ ದೇವಳ ಉಗ್ರಾಣ ಮುಹೂರ್ತ

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಪ್ರಯುಕ್ತ ಬುಧವಾರ ತೋರಣ ಮುಹೂರ್ತ, ಉಗ್ರಾಣ ಮುಹೂರ್ತ ನಡೆಯಿತು. ಕಟೀಲು ದೇವಳ ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ ಉಗ್ರಾಣ ಮೂಹೂರ್ತ ನಡೆಸಿ ಶುಭಹಾರೈಸಿದರು.
ಈ ಸಂದರ್ಭ ಗುರುಪುರ ಜಂಗಮ ಮಠದ ರುದ್ರಮುನಿ ಸ್ವಾಮೀಜಿ ಮಾತನಾಡಿ ದೇವಳಗಳು ಅಭಿವೃದ್ಧಿ ಹೊಂದಿದರೆ ಆ ಊರು ಅಭಿವೃದ್ಧಿ ಹೊಂದುತ್ತದೆ. ನಿರ್ಮಲ, ನಿಷ್ಠೆ, ಸಂಸ್ಕಾರ, ಸೌಹಾರ್ದಯುತ ಮನಸ್ಸು ನಮ್ಮದಾಗಿರ ಬೇಕು ಎಂದು ಹೇಳಿದರು.
ಅತ್ತೂರುಬೈಲು ಶ್ರೀ ಮಹಾಗಣಪತಿ ಮಂದಿರದ ಗಣಪತಿ ಉಡುಪ, ಕೃಷ್ಣ ಭಟ್ ಅಂಗಡಿಮಾರ್ ಕೆಮ್ರಾಲ್, ಬ್ರಹ್ಮಶ್ರೀ ಶಿಬರೂರು ವೇದವ್ಯಾಸ ತಂತ್ರಿ, ಸುರಗಿರಿ ಮಹಾಲಿಂಗೇಶ್ವರ ದೇವಳದ ಪ್ರಧಾನ ಅರ್ಚಕ ಅಂಗಡಿಮಾರ್ ವಿಶ್ವೇಶ ಭಟ್, ಸುರಗಿರಿ ಮಹಾಲಿಂಗೇಶ್ವರ ದೇವಳ ಆಡಳಿತ ಮೊಕ್ತೇಸರ ಸೀತಾರಾಮ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಬಾಬು ಎನ್. ಶೆಟ್ಟಿ ಅತ್ತೂರು ಹೊಸಲೊಟ್ಟು, ಕಾರ್ಯಾಧ್ಯಕ್ಷ ವೆಂಕಟರಾಜ ಉಡುಪ ಅತ್ತೂರುಬೈಲು, ಪ್ರಧಾನ ಕಾರ್ಯದರ್ಶಿ ಕೆ. ಲವ ಶೆಟ್ಟಿ ಕೆಮ್ರಾಲ್, ಪ್ರಧಾನ ಕೋಶಾಧಿಕಾರಿ ರಮಾನಾಥ ಎನ್.ಶೆಟ್ಟಿ ಕೆಮ್ರಾಲ್, ಮೊಕ್ತೇಸರರಾದ ವೈ. ಬಾಲಚಂದ್ರ ಭಟ್ ಕೋಡುಮನೆ, ಪ್ರಕಾಶ್ ಜೆ.ಶೆಟ್ಟಿ, ಕೆ.ಅನಂತರಾi ಭಟ್ ಅಂಗಡಿಮಾರ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-26041701 Kinnigoli-26041702Kinnigoli-26041703 Kinnigoli-26041704Kinnigoli-26041705 Kinnigoli-26041706Kinnigoli-26041707 Kinnigoli-26041708 Kinnigoli-260417010 Kinnigoli-260417011Kinnigoli-260417012 Kinnigoli-260417013 Kinnigoli-260417014

Comments

comments

Comments are closed.

Read previous post:
Kinnigoli-25041702
ಎಸ್.ಡಿ.ಪಿ.ಐ. ಕಿನ್ನಿಗೋಳಿ : ರಕ್ತದಾನ ಶಿಬಿರ

ಕಿನ್ನಿಗೋಳಿ: ಮನುಷ್ಯನೊಬ್ಬನ ಪ್ರಾಣ ಉಳಿಸಲು ಸಹಕಾರಿಯಾಗುವ ರಕ್ತದಾನದಂತಹ ಶ್ರೇಷ್ಠ ಕಾರ್ಯಗಳಲ್ಲಿ ಯುವ ಜನಾಂಗ ಹೆಚ್ಚೆಚ್ಚು ತೊಡಗಿಕೊಳ್ಳಬೇಕು ಎಂದು ಮಂಗಳೂರು ತಾಲೂಕು ಪಂಚಾಯಿತಿ ಸದಸ್ಯ ದಿವಾಕರ ಕರ್ಕೇರ ಹೇಳಿದರು. ಸೋಶಿಯಲ್...

Close