ಎಳತ್ತೂರು ಫ್ರೆಂಡ್ಸ್ ಕ್ಲಬ್ 6 ನೇ ವಾರ್ಷಿಕೋತ್ಸವ

ಕಿನ್ನಿಗೋಳಿ: ಸಂಸ್ಕಾರಯುತ ಶಿಕ್ಷಣ ನೀಡಿದಾಗ ಮಕ್ಕಳ ಭವಿಷ್ಯವು ಉತ್ತಮವಾಗಿ ರೂಪುಗೊಳ್ಳುವುದರಲ್ಲಿ ಸಂಶಯವಿಲ್ಲ ಎಂದು ಇನ್ನಾ ಆಯುರ್ವೇದ ಭೂಷಣ ಪ್ರೌಢಶಾಲೆ ಶಿಕ್ಷಕ ರಾಜೇಂದ್ರ ಭಟ್ ಹೇಳಿದರು.
ಎಳತ್ತೂರು ಜಾತ್ರಾ ಮಹೋತ್ಸವ ಪ್ರಯುಕ್ತ ಎಳತ್ತೂರು ಫ್ರೆಂಡ್ಸ್ ಕ್ಲಬ್‌ನ 6 ನೇ ವಾರ್ಷಿಕೋತ್ಸವ ಮತ್ತು ಸನ್ಮಾನ ಸಮಾರಂಭದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿ ಮಾತನಾಡಿದರು.
ಟಿವಿ ಮಾಧ್ಯಮಗಳಲ್ಲಿ ಬರುವ ಫ್ಯಾಶನ್ ವಿಚಾರಗಳತ್ತ ಆಕರ್ಷಿತರಾಗುತ್ತಿರುವ ಮಕ್ಕಳಲ್ಲಿ ಭಾರತದ ಮಹಾಕಾವ್ಯಗಳ ಜ್ಞಾನದ ಕೊರತೆ ಕಾಣುತ್ತಿದೆ. ಹಿಂದೂ ಧರ್ಮದ ಮೌಲ್ಯಗಳು ಇಂದು ಆತಂಕದಲ್ಲಿರಬೇಕಾದರೆ ಇಂತಹ ಫ್ರೆಂಡ್ಸ್ ಕ್ಲಬ್‌ಗಳು ಸಮಾಜಮುಖಿ ಕೆಲಸ ಮಾಡುತ್ತಿರುವುದು ಅಭಿನಂದನಾರ್ಹ ಎಂದರು.
ಸಾಯಿರಾಧ ಸಮೂಹಸಂಸ್ಥೆಗಳ ಆಡಳಿತ ನಿರ್ದೇಶಕ ಮನೋಹರ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ ಹುಟ್ಟುವಾಗ ಯಾವ ಜಾತಿಯಲ್ಲಿ ಹುಟ್ಟಿದೆ ಎನ್ನುವುದು ಮುಖ್ಯವಲ್ಲ. ಸಮಾಜದಲ್ಲಿ ಇನ್ನೊಬ್ಬರಿಗೆ ಉಪಕಾರವಾಗುವಂತೆ ಹೇಗೆ ಬದುಕಿದೆ ಎನ್ನುವುದು ಮುಖ್ಯ. ಸಮಾಜದಲ್ಲಿನ ಎಲ್ಲಾ ವರ್ಗಗಳೊಂದಿಗೆ ಕೊಡುಕೊಳ್ಳುವಿಕೆಯ ಭಾವನೆ ಇದ್ದಾಗ ಸೌಹಾರ್ದತೆಗೆ ಧಕ್ಕೆ ಬಾರದು ಎಂದರು.
ಈ ಸಂದರ್ಭ ಖ್ಯಾತ ಯಕ್ಷಗಾನ ಕಲಾವಿದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮುಖ್ಯಪ್ರಾಣ ಶೆಟ್ಟಿಗಾರ್ ಅವರನ್ನು ಸನ್ಮಾನಿಸಲಾಯಿತು. ಸನ್ಮಾನಿತರ ಅಭಿನಂದನಾ ಭಾಷಣವನ್ನು ಯಕ್ಷಗಾನ ಅರ್ಥದಾರಿ ಶ್ರೀಧರ ಡಿ.ಎಸ್. ಮಾಡಿದರು.
ಎಳತ್ತೂರು ಫ್ರೆಂಡ್ಸ್ ಕ್ಲಬ್ ವತಿಯಿಂದ ದಾಮೋದರ ಮೂಲ್ಯ ಗುತ್ತಕಾಡು, ಅಶೋಕ ಗುತ್ತಕಾಡು, ಪ್ರತೀಕ್ಷಾ ತಾಳಿಪಾಡಿ ಅವರಿಗೆ ವೈದ್ಯಕೀಯ ಖರ್ಚಿಗಾಗಿ ಧನಸಹಾಯ ಮಾಡಲಾಯಿತು.
ಯುಗಪುರುಷ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ, ಎಳತ್ತೂರು ಮಹಾಲಿಂಗೇಶ್ವರ ದೇವಳ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ಹೆಗ್ಡೆ, ಉದ್ಯಮಿ ಟಿ.ಎ.ಹನೀಫ್, ಪ್ರಗತಿಪರ ಕೃಷಿಕ ಆರ್ಥರ್ ಡಿಸೋಜ, ಉದ್ಯಮಿ ಧನಪಾಲ ಶೆಟ್ಟಿ, ಸುನಿಲ್ ಶೆಟ್ಟಿ ಕೆರೆಗುತ್ತು, ಎಳತ್ತೂರು ಫ್ರೆಂಡ್ಸ್ ಸಲಹೆಗಾರ ಪ್ರಕಾಶ್ ಹೆಗ್ಡೆ, ಶಶಿಧರ ಶೆಟ್ಟಿ ನಡಿಯಾಲ್ ಗುತ್ತು, ಮೀರಾ ಶೆಟ್ಟಿ ಎಳತ್ತೂರು, ಮತ್ತಿತರರು ಉಪಸ್ಥಿತರಿದ್ದರು.
ಶಶಿಕಾಂತ್ ರಾವ್ ಸ್ವಾಗತಿಸಿದರು. ಶ್ಯಾಂ ಸುಂದರ್ ಶೆಟ್ಟಿ ವಂದಿಸಿದರು. ದಿವಾಕರ ಕರ್ಕೇರ ಕಾರ್ಯಕ್ರಮ ನಿರೂಪಿಸಿದರು.

Kinnigoli-260417017

Comments

comments

Comments are closed.

Read previous post:
Kinnigoli-260417018
ಹಳೆಯಂಗಡಿ: ಶರತ್‌ಕುಮಾರ್ ಆಯ್ಕೆ

ಕಿನ್ನಿಗೋಳಿ: ಹಳೆಯಂಗಡಿ ಯುವವಾಹಿನಿಯ ನೂತನ ಅಧ್ಯಕ್ಷರಾಗಿ ಶರತ್ ಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಿಕಟಪೂರ್ವ ಅಧ್ಯಕ್ಷ ದೀಪಕ್ ನಾನಿಲ್, ಉಪಾಧ್ಯಕ್ಷ ರಾಕೇಶ್ ಆರ್. ಸಾಲಿಯಾನ್, ಗೌರವ ಪ್ರಧಾನ ಕಾರ್ಯದರ್ಶಿ ಚಂದ್ರಿಕ...

Close