ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಳ ಧಾರ್ಮಿಕ ಸಭೆ

ಕಿನ್ನಿಗೋಳಿ : ದೇವಳಗಳು ನಮ್ಮ ದೇಶದ ಸಂಸ್ಕೃತಿಯ ಪ್ರತೀಕ. ದೇವರ ಭಕ್ತಿ, ಸಂಸ್ಕಾರಯುತ ಸತ್ಕರ್ಮ ಹಾಗೂ ಉತ್ತಮ ಚಿಂತನೆಗಳನ್ನು ನಮ್ಮ ಜೀವನದಲ್ಲಿ ರೂಡಿಸಿದಾಗ ಕಷ್ಟಗಳು ದೂರವಾಗಿ ಪರಿಹಾರ ತನ್ನಿಂದ ತಾನೆ ದೊರೆಯುತ್ತದೆ ಎಂದು ಕಟಪಾಡಿ ಆನೆಗುಂದಿ ಸಂಸ್ಥಾನದ ಶ್ರೀ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿಗಳು ಹೇಳಿದರು.
ಕಿನ್ನಿಗೋಳಿ ಸಮೀಪದ ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಪ್ರಯುಕ್ತ ಬುಧವಾರ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿ ಮಾತನಾಡಿಡಿದರು.
ಕಸಾಪದ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಕಾರ್ಯಕ್ರಮ ಉದ್ಘಾಟಿಸಿ ದೇವಳಗಳು ಧರ್ಮ ಜಾಗೃತಿ ಸಂಸ್ಕಾರ ಸಂಸ್ಕೃತಿಯನ್ನು ತಿಳಿ ಹೇಳುವ ಕಾರ್ಯ ಮಾಡುತ್ತಿವೆ ಎಂದು ಹೇಳಿದರು.
ಧಾರ್ಮಿಕ ಚಿಂತಕ ಕೊಲಕಾಡಿ ವಾದಿರಾಜ ಉಪಾಧ್ಯಾಯ ಧಾರ್ಮಿಕ ಉಪನ್ಯಾಸ ನೀಡಿ ಮಾತನಾಡಿ ಭಾರತ ದೇಶ ಧಾರ್ಮಿಕ ಕ್ಷೇತ್ರಗಳ ಬೆನ್ನೆಲುಬು. ಕುಟುಂಬದ ಹಿರಿಯರು ಯುವ ಪೀಳಿಗೆಗೆ ಶಿಸ್ತು ಸಂಸ್ಕಾರ ಆಚಾರ ವಿಚಾರಗಳನ್ನು ಎಳವೆಯಲ್ಲಿಯೇ ಮೂಡಿಸಿದಾಗ ಸುಸಂಸ್ಕೃತ ಸಮಾಜದ ನರ್ಮಾಣ ಸಾಧ್ಯ ಎಂದು ಹೇಳಿದರು.
ಕಟೀಲು ದೇವಳ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ , ಮೂಡಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎಮ್. ಮೋಹನ್ ಆಳ್ವ, ಉಡುಪಿ ಸಾಯಿರಾಧ ಡೆವಲಪ್ಪರ‍್ಸ್ ಸಂಸ್ಥೆಯ ಮನೋಹರ ಶೆಟ್ಟಿ , ಕಚ್ಚೂರು ನಾಗೇಶ್ವರ ದೇವಳ ಆಡಳಿತ ಮೊಕ್ತೇಸರ ಸುರೇಶ್ ಭಂಡಾರಿ ಕಡಂದಲೆ, ಪುನರೂರು ದೇವಸ್ಥಾನ ಆಡಳಿತ ಮೊಕ್ತೇಸರ ಪಟೇಲ್ ವಾಸುದೇವ ರಾವ್, ದ. ಕ ಪದ್ಮಶಾಲಿ ಮಹಾಸಭಾದ ಅಧ್ಯಕ್ಷ ಪುರಂದರ ಡಿ.ಶೆಟ್ಟಿಗಾರ್, ಕಿನ್ನಿಗೋಳಿ ಉದ್ಯಮಿ ಪ್ರಥ್ವಿರಾಜ್ ಆಚಾರ್ಯ, ದ.ಕ. ಎಪಿಎಂಸಿ ಅಧ್ಯಕ್ಷ ಪ್ರಮೋದ್ ಕುಮಾರ್, ಕಿನ್ನಿಗೋಳಿ ಜಿಎಸ್‌ಬಿ ಸಭಾದ ಅಧ್ಯಕ್ಷ ಕೆ. ಅಚ್ಚುತ ಮಲ್ಯ, ಪಾವಂಜೆ ದೇವಾಡಿಗ ಸಮಾಜ ಸೇವಾ ಸಂಘದ ಉಪಾಧ್ಯಕ್ಷ ಯಾದವ ದೇವಾಡಿಗ, ಸುರಗಿರಿ ಮಹಾಲಿಂಗೇಶ್ವರ ದೇವಳ ಆಡಳಿತ ಮೊಕ್ತೇಸರ ಸೀತಾರಾಮ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಅತ್ತೂರು ಹೊಸಲೊಟ್ಟು ಬಾಬು ಎನ್. ಶೆಟ್ಟಿ, ಕಾರ್ಯಾಧ್ಯಕ್ಷ ವೆಂಕಟರಾಜ ಉಡುಪ ಅತ್ತೂರುಬೈಲು, ಮೊಕ್ತೇಸರ ಬಾಲಚಂದ್ರ ಭಟ್, ಅತ್ತೂರು ಭಂಡಾರ ಮನೆ ಶಂಭು ಮುಕ್ಕಾಲ್ದಿ, ಅತ್ತೂರು ಕುಂಜಿರಾಯ ದೈವಸ್ಥಾನದ ಅಧ್ಯಕ್ಷ ಚರಣ್ ಜೆ. ಶೆಟ್ಟಿ , ಜಯ ಶೆಟ್ಟಿ ಮೂಂಡ್ರಗುತ್ತು ಉಪಸ್ಥಿತರಿದ್ದರು.
ಸುರಗಿರಿ ಮಹಾಲಿಂಗೇಶ್ವರ ದೇವಳ ಆಡಳಿತ ಮೊಕ್ತೇಸರ ಧನಂಜಯ ಶೆಟ್ಟಿಗಾರ್ ಸಾಗರಿಕ ಸ್ವಾಗತಿಸಿದರು. ಶಿಕ್ಷಕ ಸಾಯಿನಾಥ ಶೆಟ್ಟಿ ಮುಂಡ್ಕೂರು ಕಾರ್ಯಕ್ರಮ ನಿರೂಪಿಸಿದರು. ಕೃಷ್ಣರಾಜ ಭಟ್ ವಂದಿಸಿದರು.

Kinnigoli-27041701

Comments

comments

Comments are closed.

Read previous post:
Kinnigoli-260417017
ಎಳತ್ತೂರು ಫ್ರೆಂಡ್ಸ್ ಕ್ಲಬ್ 6 ನೇ ವಾರ್ಷಿಕೋತ್ಸವ

ಕಿನ್ನಿಗೋಳಿ: ಸಂಸ್ಕಾರಯುತ ಶಿಕ್ಷಣ ನೀಡಿದಾಗ ಮಕ್ಕಳ ಭವಿಷ್ಯವು ಉತ್ತಮವಾಗಿ ರೂಪುಗೊಳ್ಳುವುದರಲ್ಲಿ ಸಂಶಯವಿಲ್ಲ ಎಂದು ಇನ್ನಾ ಆಯುರ್ವೇದ ಭೂಷಣ ಪ್ರೌಢಶಾಲೆ ಶಿಕ್ಷಕ ರಾಜೇಂದ್ರ ಭಟ್ ಹೇಳಿದರು. ಎಳತ್ತೂರು ಜಾತ್ರಾ ಮಹೋತ್ಸವ...

Close