ಭ್ರಾಮರೀ ಮಹಿಳಾ ಸಮಾಜ – ದಶಮಾನೋತ್ಸವ

ವಿಕ ಸುದ್ದಿಲೋಕ ಕಿನ್ನಿಗೋಳಿ
ಸಂಘ ಸಂಸ್ಥೆಗಳು ಜನಪರ ಕಾಳಜಿಯೊಂದಿಗೆ ಸಮಾಜದ ಅಭಿವೃದ್ಧಿಯ ಹರಿಕಾರರಾಗಬೇಕು ಎಂದು ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ ಹೇಳಿದರು.
ಶನಿವಾರ ಕಿನ್ನಿಗೋಳಿ ರಾಜರತ್ನಪುರ ಶ್ರೀ ಬಾಲಗಣೇಶೋತ್ಸವ ವೇದಿಕೆಯಲ್ಲಿ ಭ್ರಾಮರೀ ಮಹಿಳಾ ಸಮಾಜ ಮೆನ್ನಬೆಟ್ಟು ಕಿನ್ನಿಗೋಳಿ ಇದರ ದಶಮಾನೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಿನಿ ಎಸ್. ಗುಜರನ್ ಕಾರ್ಯಕ್ರಮ ಉದ್ಘಾಟಿಸಿದರು. ಕೊಡೆತ್ತೂರು ದೇವಸ್ಯ ಮಠದ ಕೆ. ವೇದವ್ಯಾಸ ಉಡುಪ ಅವರು ಶುಭಾಶಂಸನೆಗೈದರು.
ಮೂಲ್ಕಿ ವಿಜಯಾ ಪದವಿಪೂರ್ವ ಕಾಲೇಜು ಪ್ರಿನ್ಸಿಪಾಲ್ ಪಮೀದಾ ಬೇಗಂ ಮಾತನಾಡಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮಹಿಳೆಯರು ಭಾಗವಹಿಸುವುದರೊಂದಿಗೆ ಮಕ್ಕಳಿಗೆ ಒಳ್ಳೆಯ ಸಂಸ್ಕಾರವನ್ನು ಕಲಿಸಿ ಅವರ ಆಸಕ್ತಿಗೆ ತಕ್ಕಂತೆ ಶಿಕ್ಷಣ ನೀಡಿ ಅವರನ್ನು ಸಮಾಜ ಗುರುತಿಸುವಂತೆ ಮಾಡಬೇಕು ಎಂದು ಹೇಳಿದರು.
ಮುಗ್ರೋಡಿ ಎನ್‌ಕ್ಲೇವ್ ಮಾಲಕ ದೀಪಕ್ ರೊಡ್ರಿಗಸ್, ಶ್ರೀ ವೀರಮಾರುತಿ ವ್ಯಾಯಾಮ ಶಾಲೆಯ ಈಶ್ವರ್ ಕಟೀಲು, ಸಾರ್ವಜನಿಕ ಬಾಲಗಣೇಶೋತ್ಸವ ಸಮಿತಿ ಅಧ್ಯಕ್ಷ ವಿನ್ಸೆಂಟ್ ರೊಡ್ರಿಗಸ್, ಕಿನ್ನಿಗೋಳಿ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ಅಧ್ಯಕ್ಷ ಶಿಲ್ಪಿ ಶಿವಪ್ರಸಾದ್ ಆಚಾರ್ಯ, ಆದರ್ಶ ಬಳಗ ಕೊಡೆತ್ತೂರು ಅಧ್ಯಕ್ಷ ದಾಮೋದರ ಶೆಟ್ಟಿ ಕೊಡೆತ್ತೂರು, ಶ್ರೀ ಕಾಳಿಕಾಂಬಾ ಮಹಿಳಾ ಮಂಡಲದ ಅಧ್ಯಕ್ಷೆ ಗೀತಾ ಯೋಗೀಶ್, ಸಂಸ್ಥೆಯ ಗೌರವಾಧ್ಯಕ್ಷೆ ಸಾವಿತ್ರಿ ಎಸ್. ಶೆಟ್ಟಿ, ನಿಕಟಪೂರ್ವ ಅಧ್ಯಕ್ಷರಾದ ಮೀನಾಕ್ಷಿ ಡಿ. ಕುಂದರ್, ಸುನಂದ ಕರ್ಕೇರ ಉಪಸ್ಥಿತರಿದ್ದರು.

ಸಾಧಕರಿಗೆ ಸಂಮಾನ :
ರಂಜನಿ ರಾವ್ ಕಿನ್ನಿಗೋಳಿ, ಕ್ರೀಡಾ ಸಾಧಕಿ ಅಕ್ಷತಾ ಪೂಜಾರಿ ಬೋಳ, ಜೆಸ್ಸಿ ಮಿನೇಜಸ್, ಯಕ್ಷಗಾನ ಕಲಾವಿದ ಗಣೇಶ ಚಂದ್ರಮಂಡಲ, ನಿವೃತ್ತ ಪಶುವೈದ್ಯ ಡಾ. ಬಿ. ಡಿ. ಜಯರಾಮ ಶೆಟ್ಟಿ, ಮಾಧವ ಶೆಟ್ಟಿಗಾರ್ ಕೆರೆಕಾಡು, ಸದಾಶಿವ ಮೂಲ್ಯ, ಶ್ರೀಧರ ಗಟ್ಟಿ, ಶಾಂಭವಿ (ದಾದಿ) ಚೇಳ್ಯಾರು, ಧೃತಿ ಆಚಾರ್ಯ ಉಲ್ಲಂಜೆ ಅವರನ್ನು ಸನ್ಮಾನಿಸಲಾಯಿತು. ಮಾಜಿ ಸೈನಿಕರಾದ ಸತೀಶ್ ಶೆಣೈ, ಪ್ರಶಾಂತ್ ಶೆಟ್ಟಿ ಗೋಳಿಜೋರ ಅವರನ್ನು ಗೌರವಿಸಲಾಯಿತು.
ಸೈನಿಕರ ನಿಧಿಗೆ ಧನ ಸಹಾಯವನ್ನು ಹಸ್ತಾಂತರಿಸಲಾಯಿತು. ಅರ್ಹ 10 ಬಡ ಕುಟುಂಬಗಳಿಗೆ ಸಹಾಯಧನ ವಿತರಿಸಲಾಯಿತು.
ಸಂಘದ ಅಧ್ಯಕ್ಷೆ ರೇವತಿ ಪುರುಷೋತ್ತಮ್ ಸ್ವಾಗತಿಸಿದರು. ಕಾರ್ಯದರ್ಶಿ ಅನುಷಾ ಕರ್ಕೇರ ಕಾರ್ಯಕ್ರಮ ನಿರೂಪಿಸಿದರು. ಚೈತ್ರಾ ಪ್ರಕಾಶ್ ಬಹುಮಾನ ವಿಜೇತರ ವಿವರ ತಿಳಿಸಿದರು. ಸಂಧ್ಯಾ ರಾಜಾರಾಮ್ ವಂದಿಸಿದರು.

Kinnigoli-01051710

Comments

comments

Comments are closed.

Read previous post:
Kinnigoli-01051709
ಪುನರೂರು ಪ್ರತಿಷ್ಠಾನ : ಬಾಲ ವಿಕಾಸ ಶಿಬಿರ ಸಮಾರೋಪ

ಕಿನ್ನಿಗೋಳಿ : ಎಳವೆಯಲ್ಲಿ ಮಕ್ಕಳಿಗೆ ಶಿಸ್ತು, ಸಂಸ್ಕಾರ, ಸಂಸ್ಕೃತಿ ನಮ್ಮ ಆಚಾರ ವಿಚಾರದ ಬಗ್ಗೆ ಅರಿವು ಮೂಡಿಸಿ ಹಾಗೂ ಸೃಜನಶೀಲತೆಯನ್ನು ತುಂಬುವ ಕೆಲಸ ಇಂತಹ ಶಿಬಿರಗಳಿಂದ ನಡೆದಿದೆ ಪುನರೂರು...

Close