ತಾಂತ್ರಿಕ ತರಬೇತಿಯನ್ನು ಸದುಪಯೋಗಪಡಿಸಬೇಕು

ಕಿನ್ನಿಗೋಳಿ : ವಿಶ್ವಕರ್ಮ ಸಮಾಜದ ಬಾಂಧವರು ಚಿನ್ನ ,ಬೆಳ್ಳಿ , ಮರದ ಕೆಲಸ , ಕೆತ್ತನೆಯ ಕೆಲಸಗಳಲ್ಲಿ ತಾಂತ್ರಿಕ ತರಬೇತಿ ಪಡೆದು ಸದುಪಯೋಗಪಡಿಸಬೇಕು. ಎಂದು ಮೂಡಬಿದಿರೆ ಬನ್ನಡ್ಕ ಎಸ್. ಕೆ. ಎಫ್ ಸಮೂಹ ಸಂಸ್ಥೆ ಮುಖ್ಯಸ್ಥ ಜಿ. ರಾಮಕೃಷ್ಣ ಆಚಾರ್ಯ ಹೇಳಿದರು.
ಕಿನ್ನಿಗೋಳಿ ರಾಜರತ್ನಪುರ ಸರಾಫ್ ಅಣ್ಣಯ್ಯಾಚಾರ್ಯ ಸಭಾಭವನದಲ್ಲಿ ಭಾನುವಾರ ನಡೆದ ಕಿನ್ನಿಗೋಳಿ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ ( ರಿ ) ಕಿನ್ನಿಗೋಳಿ ಇದರ 31 ನೇ ವರ್ಷದ ವಾರ್ಷಿಕೋತ್ಸವ ಸನ್ಮಾನ ಹಾಗೂ ಶ್ರೀ ಕಾಳಿಕಾಂಬಾ ಮಹಿಳಾ ವೃಂದದ ದಶಮಾನೋತ್ಸವ ವರ್ಷದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಟೀಲು ದೇವಳದ ಅರ್ಚಕ ಕಮಲಾದೇವಿಪ್ರಸಾದ್ ಆಸ್ರಣ್ಣ ಹಾಗೂ ಪುರೋಹಿತ್ ಅಕ್ಷಯ ಶರ್ಮ ಕಟಪಾಡಿ ಶುಭ ಹಾರೈಸಿದರು.
ಕಂಚಿನಡ್ಕ ಸುಶೀಲ ಸದಾಶಿವ ಆಚಾರ್ಯ ಅವರು ಕಿನ್ನಿಗೋಳಿ ಶ್ರೀ ಕಾಳಿಕಾಂಬಾ ಮಹಿಳಾ ವೃಂದದ ದಶಮಾನೋತ್ಸವ ವರ್ಷದ ಉದ್ಘಾಟನೆಯನ್ನು ನೆರವೇರಿಸಿದರು. ಈ ಸಂದರ್ಭ ಮರದ ಕೆತ್ತನೆ ಕೆಲಸಗಾರ ಎ. ಎಸ್. ಅಚ್ಚುತ ಆಚಾರ್ಯ ಬಲವಿನಗುಡ್ಡೆ, ಕೆ.ಭೋಜ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು. ಸಾಧಕಿ ಧೃತಿ ಡಿ ಅವರನ್ನು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಉಮಾನಾಥ ಕೋಟ್ಯಾನ್, ಮಂಗಳೂರು ಶ್ರೀ ಕಾಳಿಕಾಂಬಾ ವಿನಾಯಕ ದೇವಳದ ಆಡಳಿತ ಮೊಕ್ತೇಸರ ನಾಗರಾಜ ಆಚಾರ್ಯ, ಕೊಲಕಾಡಿ ಶ್ರೀ ಕಾಳಿಕಾಂಬಾ ದೇವಳದ ಮೊಕ್ತೇಸರ ಸುರೇಶ್ ಆರ್. ಆಚಾರ್ಯ, ಕಿನ್ನಿಗೋಳಿ ಶ್ರೀ ಕಾಳಿಕಾಂಬಾ ಮಹಿಳಾ ವೃಂದದ ಅಧ್ಯಕ್ಷೆ ಗೀತಾ ಯೋಗೀಶ್ ಆಚಾರ್ಯ ಉಪಸ್ಥಿತರಿದ್ದರು.
ಸರಾಫ್ ಅಣ್ಣಯ್ಯಾಚಾರ್ಯ ಸಭಾಭವನ ಸಮಿತಿ ಅಧ್ಯಕ್ಷ ಎಂ. ಪೃಥ್ವಿರಾಜ ಆಚಾರ್ಯ ಪ್ರಸ್ತಾವನೆಗೈದರು. ಕಿನ್ನಿಗೋಳಿ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ಅಧ್ಯಕ್ಷ ಶಿಲ್ಪಿ ಶಿವಪ್ರಸಾದ್ ಆಚಾರ್ಯ ಸ್ವಾಗತಿಸಿದರು. ಅನಿತಾ ವಿಶ್ವನಾಥ ವರದಿ ವಾಚಿಸಿದರು. ಕೆ. ಬಿ. ಸುರೇಶ್ ಕಾರ್ಯಕ್ರಮ ನಿರೂಪಿಸಿದರು.
Kinnigoli30041701

Comments

comments

Comments are closed.

Read previous post:
Kinnigoli-30041701
ಸುರಗಿರಿ : ಗಣಪತಿ 108 ಪರಿಕಲಶ ಬ್ರಹ್ಮಕಲಶಾಭಿಷೇಕ

ಕಿನ್ನಿಗೋಳಿ :  ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಳದ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪ್ರಯುಕ್ತ ಭಾನುವಾರ ಶ್ರೀ ಗಣಪತಿ ದೇವರಿಗೆ 108 ಪರಿಕಲಶ ಸಹಿತ ಬ್ರಹ್ಮಕಲಶಾಭಿಷೇಕ ನಡೆಯಿತು.

Close