ಪುನರೂರು ಪ್ರತಿಷ್ಠಾನ : ಬಾಲ ವಿಕಾಸ ಶಿಬಿರ ಸಮಾರೋಪ

ಕಿನ್ನಿಗೋಳಿ : ಎಳವೆಯಲ್ಲಿ ಮಕ್ಕಳಿಗೆ ಶಿಸ್ತು, ಸಂಸ್ಕಾರ, ಸಂಸ್ಕೃತಿ ನಮ್ಮ ಆಚಾರ ವಿಚಾರದ ಬಗ್ಗೆ ಅರಿವು ಮೂಡಿಸಿ ಹಾಗೂ ಸೃಜನಶೀಲತೆಯನ್ನು ತುಂಬುವ ಕೆಲಸ ಇಂತಹ ಶಿಬಿರಗಳಿಂದ ನಡೆದಿದೆ ಪುನರೂರು ಟ್ರಸ್ಟ್ ಇಂತಹ ಜನಪಯೋಗಿ ಕೆಲಸ ಮಾಡುವ ಮೂಲಕವಾಗಿ ಇತರ ಸಂಘ ಸಂಸ್ಥೆಗಳಿಗೆ ಮಾದರಿಯಾಗಲಿ ಎಂದು ಎಂ.ಆರ್.ಪಿ.ಎಲ್‌ನ ಪ್ರಧಾನ ವ್ಯವಸ್ಥಾಪಕಿ ಲಕ್ಷ್ಮಿಕುಮಾರನ್ ಹೇಳಿದರು. ಭಾನುವಾರ ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದ ಸಭಾಂಗಣದಲ್ಲಿ ಪುನರೂರು ಪ್ರತಿಷ್ಠಾನ ಇದರ ಆಶ್ರಯದಲ್ಲಿ ಜನವಿಕಾಸ ಸಮಿತಿ ಮುಲ್ಕಿ ಇದರ ಸಹಕಾರದಲ್ಲಿ ನಡೆದ ಒಂದು ವಾರಗಳ ಕಾಲ ನಡೆದ ಬಾಲ ವಿಕಾಸ ಶಿಬಿರ – ೨೦೧೭ ಮಕ್ಕಳ ಬೌದ್ಧಿಕ ಬೆಳವಣಿಗಾಗಿ ಉಚಿತ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಆರ್‌ಎಸ್‌ಎಸ್ ಮಂಗಳೂರು ವಿಭಾಗದ ಪ್ರಚಾರ್ ಪ್ರಮುಖ್ ಸುನಿಲ್ ಕುಲಕರ್ಣಿ ಸಮಾರೋಪ ಭಾಷಣಗೈದರು.
ಈ ಸಂದರ್ಭ ಯೋಗಗುರು ಜಯಮುದ್ದು ಶೆಟ್ಟಿ, ಶ್ರೀವತ್ಸ ಉಪಾಧ್ಯಾಯ ಕೊಲೆಕಾಡಿ, ಸೋಂದಾ ಭಾಸ್ಕರ ಭಟ್, ವೆಂಕಿ ಪಲಿಮಾರು, ಕುತ್ಯಾರು ಅಶ್ವತ್ ಭಟ್, ಸುರೇಶ್ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು.
ಪುನರೂರು ಪ್ರತಿಷ್ಠಾನದ ಗೌರವಾಧ್ಯಕ್ಷರುಗಳಾದ ಧರ್ಮದರ್ಶಿ ಹರಿಕೃಷ್ಣ ಪುನರೂರು, ಎಚ್. ಕೆ. ಉಷಾರಾಣಿ, ಉಪಾಧ್ಯಕ್ಷೆ ರಾಧಿಕಾ ಸುಧೀರ್, ಜನವಿಕಾಸ ಸಮಿತಿಯ ಅಧ್ಯಕ್ಷ ಪಿ. ಎಸ್. ಸುರೇಶ್ ರಾವ್ ಪುನರೂರು ಉಪಸ್ಥಿತರಿದ್ದರು.
ಪುನರೂರು ಪ್ರತಿಷ್ಠಾನದ ಅಧ್ಯಕ್ಷ ಅಧ್ಯಕ್ಷ ದೇವಪ್ರಸಾದ್ ಪುನರೂರು ಸ್ವಾಗತಿಸಿದರು. ಪ್ರಾಣೇಶ್ ಭಟ್ ಕಾರ್ಯಕ್ರಮ ನಿರೂಪಿಸಿದರು.

Kinnigoli-01051709

Comments

comments

Comments are closed.

Read previous post:
Kinnigoli-30041701
ಸುರಗಿರಿ : ಗಣಪತಿ 108 ಪರಿಕಲಶ ಬ್ರಹ್ಮಕಲಶಾಭಿಷೇಕ

ಕಿನ್ನಿಗೋಳಿ :  ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಳದ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪ್ರಯುಕ್ತ ಭಾನುವಾರ ಶ್ರೀ ಗಣಪತಿ ದೇವರಿಗೆ 108 ಪರಿಕಲಶ ಸಹಿತ ಬ್ರಹ್ಮಕಲಶಾಭಿಷೇಕ ನಡೆಯಿತು.

Close