ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಳ ಧಾರ್ಮಿಕ ಸಭೆ

ಕಿನ್ನಿಗೋಳಿ : ದೇವಳಗಳಿಗೆ ನೀಡುವ ಹಣ ಸದುಪಯೋಗಗೊಳ್ಳುತ್ತದೆ. ಶಿಸ್ತು ಸಂಸ್ಕಾರದ ಧಾರ್ಮಿಕ ನಂಬಿಕೆಯಿಂದ ಎಲ್ಲರಿಗೂ ನೆಮ್ಮದಿ ಸುಖ ಶಾಂತಿ ದೊರಕುತ್ತದೆ. ಎಂದು ಪಲಿಮಾರು ಮಠದ ಶ್ರೀ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಹೇಳಿದರು.
ಕಿನ್ನಿಗೋಳಿ ಸಮೀಪದ ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಪ್ರಯುಕ್ತ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿ ಮಾತಾಡಿದರು.
ಮೂಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತ ಅರಸರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ದೇವಳಗಳು ಧರ್ಮ ಜಾಗೃತಿಯ ಜೊತೆಗೆ ಜನರಿಗೆ ಧಾರ್ಮಿಕ ಸಂಸ್ಕಾರ ಸಂಸ್ಕೃತಿಯ ತಿಳಿ ಹೇಳುವ ಕೆಲಸ ಮಾಡಿ ಜನರನ್ನು ಸುಸಂಸ್ಕೃರನ್ನಾಗಿಸಬೇಕು ಎಂದು ಹೇಳಿದರು.
ಕಟೀಲು ಪದವಿ ಕಾಲೇಜು ಪ್ರಿನ್ಸಿಪಾಲ್ ಎಂ. ಬಾಲಕೃಷ್ಣ ಶೆಟ್ಟಿ ಧಾರ್ಮಿಕ ಉಪನ್ಯಾಸ ನೀಡಿದರು.
ಕಟೀಲು ದೇವಳ ಅರ್ಚಕ ಶ್ರೀ ಹರಿನಾರಾಯಣದಾಸ ಆಸ್ರಣ್ಣ ಮಾತಾನಾಡಿ ದೇವಳದಲ್ಲಿ ಪೂಜೆ ಪುನಸ್ಕಾರ ಅನ್ನದಾನ ನಿರಂತರ ನಡೆದರೆ ಸಾನಿಧ್ಯ ವೃದ್ಧಿಯಾಗಿ ಔನತ್ಯಕ್ಕೆ ಏರಲು ಸಾಧ್ಯ ಎಂದು ಹೇಳಿದರು.
ದ. ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಯುಗಪುರುಷದ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ, ಧಾರ್ಮಿಕ ಮುಖಂಡ ಕೆ. ಪಿ. ಜಗದೀಶ ಅಧಿಕಾರಿ, ಕಲ್ಲಾಪು ವೀರಭದ್ರ ದೇವಸ್ಥಾನದ ಗುರಿಕಾರ ರತ್ನಾಕರ ಯಾನೆ ಕಾಂತಣ್ಣ ಗುರಿಕಾರ, ಎಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ಆಡಳಿತ ಮೊಕ್ತೇಸರ ಸಂತೋಷ ಕುಮಾರ್ ಹೆಗ್ಡೆ, ಕೊಡೆತ್ತೂರು ಶ್ರೀ ಅರಸು ಕುಂಜಿರಾಯ ದೈವಸ್ಥಾನದ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಸುರಗಿರಿ ಮಹಾಲಿಂಗೇಶ್ವರ ದೇವಳ ಆಡಳಿತ ಮೊಕ್ತೇಸರ ಕೆ. ಸೀತಾರಾಮ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಅತ್ತೂರು ಹೊಸಲೊಟ್ಟು ಬಾಬು ಎನ್. ಶೆಟ್ಟಿ, ಕಾರ್ಯಾಧ್ಯಕ್ಷ ವೆಂಕಟರಾಜ ಉಡುಪ ಅತ್ತೂರುಬೈಲು, ಮೊಕ್ತೇಸರ ಬಾಲಚಂದ್ರ ಭಟ್, ಅತ್ತೂರು ಭಂಡಾರ ಮನೆ ಶಂಭು ಮುಕ್ಕಾಲ್ದಿ, ಕುಂಜಿರಾಯ ದೈವಸ್ಥಾನದ ಅಧ್ಯಕ್ಷ ಚರಣ್ ಜೆ. ಶೆಟ್ಟಿ, ತಾ. ಪಂ. ಸದಸ್ಯರಾದ ಶುಭಲತಾ ಶೆಟ್ಟಿ, ವಜ್ರಾಕ್ಷಿ ಪಿ. ಶೆಟ್ಟಿ , ಕೆಮ್ರಾಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್ ಅಂಚನ್ ಬೊಳ್ಳೂರು, ಕಟೀಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಪೂಜಾರ್ತಿ ಮತ್ತಿತರರು ಉಪಸ್ಥಿತರಿದ್ದರು. ಮೊಕ್ತೇಸರ ಧನಂಜಯ ಶೆಟ್ಟಿಗಾರ್ ಸಾಗರಿಕ ಸ್ವಾಗತಿಸಿದರು. ಶಿಕ್ಷಕಿ ಸುಧಾರಾಣಿ ಶೆಟ್ಟಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಜನಾರ್ದನ ಕಿಲೆಂಜೂರು ವಂದಿಸಿದರು.

Kinnigoli-01051708

Comments

comments

Comments are closed.

Read previous post:
Kinnigoli-01051710
ಭ್ರಾಮರೀ ಮಹಿಳಾ ಸಮಾಜ – ದಶಮಾನೋತ್ಸವ

ವಿಕ ಸುದ್ದಿಲೋಕ ಕಿನ್ನಿಗೋಳಿ ಸಂಘ ಸಂಸ್ಥೆಗಳು ಜನಪರ ಕಾಳಜಿಯೊಂದಿಗೆ ಸಮಾಜದ ಅಭಿವೃದ್ಧಿಯ ಹರಿಕಾರರಾಗಬೇಕು ಎಂದು ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ ಹೇಳಿದರು. ಶನಿವಾರ ಕಿನ್ನಿಗೋಳಿ...

Close