ಬಪ್ಪನಾಡು ಶತ ಚಂಡಿಕಾ ಧಾರ್ಮಿಕ ಸಭೆ

ಮೂಲ್ಕಿ: ಮೂಲ್ಕಿಯ ಬಪ್ಪನಾಡು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ನೇತ್ರತ್ವದಲ್ಲಿ ಲೋಕಕಲ್ಯಾಣಾರ್ಥವಾಗಿ ಮೂಲ್ಕಿ ಹೋಬಳಿಯ ಸಂಘ, ಸಂಸ್ಥೆಗಳು ಹಾಗೂ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಳದ ಸಹಕಾರದೊಂದಿಗೆ ಮೇ 5ರಂದು ಜರಗಲಿರುವ ಶ್ರೀ ಶತ ಚಂಡಿಕಾದ್ವರ ಯಾಗದ ಅಂಗವಾಗಿ ದೇವಳದ ವಠಾರದಲ್ಲಿ ಜರಗಿದ ಧಾರ್ಮಿಕ ಸಭೆಯನ್ನು ಮೂಲ್ಕಿಯ ಉದ್ಯಮಿ ಅತುಲ್ ಕುಡ್ವ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ರಾಜ್ಯ ಧಾರ್ಮಿಕ ಪರಿಷತ್ ನ ಸದಸ್ಯ ಪದ್ಮನಾಭ ಕೋಟ್ಯಾನ್ ವಹಿಸಿದ್ದು ವಿದ್ವಾನ್ ಕೆ ಆರ್ ಶಶಾಂಕ್ ಭಟ್ ನಾಲ್ಮೂರುರವರು ದೇವಿ ಸಾನಿಧ್ಯ ಕುರಿತು ಪ್ರವಚನ ನೀಡಿದರು. ದ.ಕ.ಜಿಲ್ಲಾ ಪದ್ಮಶಾಲಿ ಮಹಾಸಭಾದ ಅಧ್ಯಕ್ಷ ಪುರಂದರ ಶೆಟ್ಟಿಗಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದು ಶ್ರೀ ಕ್ಷೇತ್ರ ಬಪ್ಪನಾಡಿನ ಕಾರ್ಯ ನಿರ್ವಹಣಾಽಕಾರಿ ಶ್ರೀಮತಿ ಜಯಮ್ಮ, ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಸುವರ್ಣ, ಮೂಲ್ಕಿ ನಗರ ಪಂಚಾಯತ್ ಅಧ್ಯಕ್ಷ ಸುನೀಲ್ ಆಳ್ವ ,ಯಾಗ ದೀಕ್ಷಕ ನಿಡ್ಡೋಡಿ ಚಾವಡಿ ಮನೆ ಜಗನ್ನಾಥ ಶೆಟ್ಟಿ ಮತ್ತಿತರಿದ್ದರು.

Mulki-02051701

Comments

comments

Comments are closed.

Read previous post:
ಕಟೀಲು ದೇಗುಲದಲ್ಲಿ ಗಂಜಿ ಊಟ ಆರಂಭ

ಕಿನ್ನಿಗೋಳಿ: ಅನ್ನದಾನಕ್ಕೆ ಪ್ರಸಿದ್ಧವಾಗಿರುವ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ಮೇ 1ರಿಂದ ಬೆಳಿಗ್ಗೆ ಭಕ್ತರಿಗೆ ಗಂಜಿ ಊಟ ಪ್ರಾರಂಭವಾಗಿದೆ. ಈಗಾಗಲೇ ಯಾತ್ರಾರ್ಥಿಗಳಿಗೆ ಮಧ್ಯಾಹ್ನ ಹಾಗೂ ರಾತ್ರಿ ಅನ್ನಪ್ರಸಾದ ವ್ಯವಸ್ಥೆ...

Close