ಕಟೀಲು: ಕಟ್ಟಡ ಅಕ್ಷರಾನ್ನಂ ಉದ್ಘಾಟನೆ

ಕಿನ್ನಿಗೋಳಿ: ಅನ್ನದಾನ, ವಿದ್ಯಾದಾನ ಜೊತೆಗೆ ಯಕ್ಷಗಾನದ ಮೂಲಕ ಕಟೀಲು ಮಾತೆ ಎಲ್ಲರಿಗೂ ಅಭಯಪ್ರದವಾಗಿದ್ದಾರೆ. ಕಟೀಲು ಪರಿಸರದಲ್ಲಿ ಇನ್ನಷ್ಟು ಜನಪರ ಯೋಜನೆಗಳು ಸಂಪನ್ನವಾಗಲಿ ಎಂದು ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಹೇಳಿದರು.
ಭಾನುವಾರ ಕಟೀಲು ಅನುದಾನಿತ ಶ್ರೀ ದುರ್ಗಾಪರಮೇಶ್ವರೀ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವದ ಸವಿನೆನಪಿಗಾಗಿ ನಿರ್ಮಿಸಿದ ಕಟೀಲು ದೇವಳದ ಆರು ಶಿಕ್ಷಣ ಸಂಸ್ಥೆಗಳ ಮೂರು ಸಾವಿರ ವಿದ್ಯಾರ್ಥಿಗಳಿಗೆ ಅಕ್ಷರದಾಸೋಹ ಯೋಜನೆಯ ಅನ್ನಛತ್ರ ಅಕ್ಷರಾನ್ನಂ ಉದ್ಘಾಟಿಸಿ ಆಶೀರ್ವಚನ ನೀಡಿ ಮಾತನಾಡಿದರು.
ಮುಲ್ಕಿ ಮೂಡಬಿದಿರೆ ಶಾಸಕ ಕೆ. ಅಭಯಚಂದ್ರ ಜೈನ್ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿರುವ ಕಟೀಲಿನ ಶಿಕ್ಷಣ ಸಂಸ್ಥೆಗಳು ರಾಜ್ಯಕ್ಕೇ ಮಾದರಿಯಾಗುವಂತಹ ಸಾಧನೆ ಮಾಡಿವೆ. ದೇಗುಲದ ವತಿಯಿಂದ ನಡೆಸಲ್ಪಡುವ ಇಲ್ಲಿನ ಶಿಕ್ಷಣ ಸಂಸ್ಥೆಗಳು ನಗರ ಕೇಂದ್ರಗಳ ಶಿಕ್ಷಣ ಗುಣಮಟ್ಟಕ್ಕಿಂತಲೂ ಹೆಚ್ಚಾಗಿ ಶಿಕ್ಷಣ ನೀಡುತ್ತಿರುವುದು ವಿದ್ಯಾರ್ಥಿಗಳ ಸಂಖ್ಯೆಯಿಂದ ತಿಳಿಯುತ್ತದೆ. ಎಂದರು.
ದ.ಕ. ಲೋಕಸಭಾ ಸದಸ್ಯ ನಳಿನ್ ಕುಮಾರ್ ಪಾಕಶಾಲೆ ಉದ್ಘಾಟಿಸಿದರು. ದ.ಕ. ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ ಸ್ಮರಣ ಸಂಚಿಕೆ ಶತಾಕ್ಷರೀ ಬಿಡುಗಡೆಗೊಳಿಸಿದರು.
ಅಕ್ಷರ ದಾಸೋಹ ಕಟ್ಟಡಕ್ಕೆ ದೇಣಿಗೆ ನೀಡಿದ ಅಶೋಕ್ ಕುಮಾರ್ ಅಮೀನ್, ಕೊಡೆತ್ತೂರು ಬಾಲಕೃಷ್ಣ ಉಡುಪ, ಎಲ್ ವಿ. ಅಮೀನ್, ಮಿಜಾರು ರಾಜೇಶ್ ಶೆಟ್ಟಿ, ಕರುಣಾಕರ ಎಂ ಶೆಟ್ಟಿ ಮುಂತಾದವರನ್ನು ಸನ್ಮಾನಿಸಲಾಯಿತು.
ಕಟೀಲು ದೇವಳದ ಮೊಕ್ತೇಸರರಾದ ವಾಸುದೇವ ಆಸ್ರಣ್ಣ, ಕೊಡೆತ್ತೂರು ಗುತ್ತು ಸನತ್ ಕುಮಾರ ಶೆಟ್ಟಿ, ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ತಾ.ಪಂ. ಸದಸ್ಯ ಸುಕುಮಾರ ಸನಿಲ್, ಕಟೀಲು ಗ್ರಾ.ಪಂ. ಅಧ್ಯಕ್ಷೆ ಗೀತಾ ಪೂಜಾರ‍್ತಿ, ಉಪಾಧ್ಯಕ್ಷ ಕಿರಣ್ ಕುಮಾರ್ ಶೆಟ್ಟಿ, ನಟ ಅಣ್ಣು ಧೀರಕ್ ಶೆಟ್ಟಿ, ಪಡುಬಿದ್ರೆ ಸತೀಶ ಶೆಟ್ಟಿ, ಸಂಜೀವನಿ ಟ್ರಸ್ಟ್‌ನ ಡಾ. ಸುರೇಶ್ ರಾವ್, ಐಕಳ ಹರೀಶ ಶೆಟ್ಟಿ, ನಂದಳಿಕೆ ಕೃಷ್ಣ ಶೆಟ್ಟಿ, ಶಾಲಾ ಮುಖ್ಯ ಶಿಕ್ಷಕಿ ಸರೋಜಿನಿ, ಕಟೀಲು ಕಾಲೇಜು ಪ್ರಿನ್ಸಿಪಾಲ್ ಎಂ. ಬಾಲಕೃಷ್ಣ ಶೆಟ್ಟಿ, ಪದವಿ ಪೂರ್ವ ಕಾಲೇಜು ಪ್ರಿನ್ಸಿಪಾಲ್ ಜಯರಾಮ ಪೂಂಜ, ಪದ್ಮನಾಭ ಮರಾಠೆ, ಸೋಮಪ್ಪ ಅಲಂಗಾರು, ಗೋಪಾಲ ಶೆಟ್ಟಿ, ಶಿಕ್ಷಕರಕ್ಷಕ ಸಂಘದ ವೆಂಕಟರಮಣ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.
ಶತಮಾನೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಅನಂತಪದ್ಮನಾಭ ಆಸ್ರಣ್ಣ ಸ್ವಾಗತಿಸಿದರು. ಶ್ರೀಹರಿನಾರಾಯಣದಾಸ ಆಸ್ರಣ್ಣ ಪ್ರಸ್ತಾವನೆಗೈದರು. ಕಮಲಾದೇವಿಪ್ರಸಾದ ಆಸ್ರಣ್ಣ ವಂದಿಸಿದರು. ಸಾಯಿನಾಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli-02051704

Comments

comments

Comments are closed.

Read previous post:
Kinnigoli-02051703
ಕಿನ್ನಿಗೋಳಿ: ತುಡಾಮ್ ಕೆರೆ ಪುನರುಜ್ಜೀವನ  

ಕಿನ್ನಿಗೋಳಿ: ಗ್ರಾಮಗಳ ಹಳೆಯ ಕೆರೆಗಳ ಅಭಿವೃದ್ಧಿ ಹೂಳೆತ್ತುವಿಕೆಯಿಂದ ಹಾಗೂ ಇಂಗುಗುಂಡಿ ನಿರ್ಮಾಣದಿಂದ ಅಂತರ್ಜಲ ಹೆಚ್ಚಾಗಿ ಕೃಷಿ ಕಾರ್ಯಕ್ಕೆ ಹಾಗೂ ಕುಡಿಯುವ ನೀರಿನ ಯೋಜನೆಗೆ ಹೆಚ್ಚಿನ ಉಪಯೋಗವಾಗಲಿದೆ. ಗ್ರಾಮ ಗ್ರಾಮಗಳಲ್ಲಿ...

Close