ಕಿನ್ನಿಗೋಳಿ: ತುಡಾಮ್ ಕೆರೆ ಪುನರುಜ್ಜೀವನ  

ಕಿನ್ನಿಗೋಳಿ: ಗ್ರಾಮಗಳ ಹಳೆಯ ಕೆರೆಗಳ ಅಭಿವೃದ್ಧಿ ಹೂಳೆತ್ತುವಿಕೆಯಿಂದ ಹಾಗೂ ಇಂಗುಗುಂಡಿ ನಿರ್ಮಾಣದಿಂದ ಅಂತರ್ಜಲ ಹೆಚ್ಚಾಗಿ ಕೃಷಿ ಕಾರ್ಯಕ್ಕೆ ಹಾಗೂ ಕುಡಿಯುವ ನೀರಿನ ಯೋಜನೆಗೆ ಹೆಚ್ಚಿನ ಉಪಯೋಗವಾಗಲಿದೆ. ಗ್ರಾಮ ಗ್ರಾಮಗಳಲ್ಲಿ ಎಂದು ಮುಲ್ಕಿ ಮೂಡಬಿದಿರೆ ಶಾಸಕ ಕೆ. ಅಭಯಚಂದ್ರ ಜೈನ್ ಹೇಳಿದರು.
ನಬಾರ್ಡ್ ಯೋಜನೆಯಡಿಯಲ್ಲಿ ಕಿನ್ನಿಗೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾಳಿಪಾಡಿ ಗ್ರಾಮದಲ್ಲಿ 50 ಲಕ್ಷರೂ ವೆಚ್ಚದಲ್ಲಿ ತುಡಾಮ ಕೆರೆಯ ಪುನರುಜ್ಜೀವನದ ಕಾಮಗಾರಿಗೆ ಶಿಲನ್ಯಾಸ ನೆರವೇರಿಸಿ ಮಾತನಾಡಿದರು.
ದ.ಕ. ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಕುಮಾರ್ ಬೊಳ್ಳೂರು, ತಾಲೂಕು ಪಂಚಾಯಿತಿ ಸದಸ್ಯ ದಿವಾಕರ ಕರ್ಕೇರ, ಎ. ಪಿ. ಎಂ. ಸಿ ಅಧ್ಯಕ್ಷ ಪ್ರಮೋದ್ ಕುಮಾರ್, ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರಾ, ಉಪಾಧ್ಯಕ್ಷೆ ಸುಜಾತಾ ಪೂಜಾರಿ, ಗ್ರಾ. ಪಂ. ಸದಸ್ಯರಾದ ಅರುಣ್, ಸುನೀತಾ ರೊಡ್ರಿಗಸ್, ಸಂತೋಷ್ ಕುಮಾರ್, ಚಂದ್ರಶೇಖರ್, ಸಂತಾನ್ ಡಿಸೋಜ, ದ. ಕ. ಜಿಲ್ಲಾ ಮಹಿಳಾ ಕಾಂಗ್ರೇಸ್ ಅಧ್ಯಕ್ಷೆ ಶಾಲೆಟ್ ಪಿಂಟೋ , ಎಂಜಿನಿಯರ್ ವಿಶ್ವನಾಥ , ಅಭಿಯಂತರ ಸುಜನ್‌ಚಂದ್ರ, ಶೇಷರಾಮ ಶೆಟ್ಟಿ, ನಾರಾಯಣ ಅಂಚನ್, ರಾಕಿ ಪಿಂಟೊ, ಸೆವ್ರಿನ್ ಲೋಬೊ, ಉಮೇಶ್ ಕೊಟ್ಯಾನ್, ಗ್ರಾ. ಪಂ ಸದಸ್ಯರಾದ ಸಂಗೀತಾ ಸೆರಾವೂ, ಗುತ್ತಿಗೆದಾರ ಪುರುಷೋತ್ತಮ ಕುಲಾಲ್ ಕಲ್ಲಬಾವಿ, ಕಿನ್ನಿಗೋಳಿ ಗ್ರಾ.ಪಂ. ಪಿಡಿಒ ಅರುಣ್ ಪ್ರದೀಪ್ ಡಿಸೋಜ, ಪ್ರಕಾಶ್ ಆಚಾರ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-02051703

Comments

comments

Comments are closed.

Read previous post:
Kinnigoli-02051702
ಮೂರುಕಾವೇರಿ : ವಾರ್ಷಿಕ ಮಾರಿ ಪೂಜೆ

ಕಿನ್ನಿಗೋಳಿ : ಮೂರುಕಾವೇರಿ ಶ್ರೀ ಮಹಮ್ಮಾಯಿ ದೇವಳ ವಾರ್ಷಿಕ ಮಾರಿಪೂಜೆಯ ಅಂಗವಾಗಿ ಮಂಗಳವಾರ ಕಿನ್ನಿಗೋಳಿ ಅಶ್ವಥ್ಥ ಕಟ್ಟೆಯಲ್ಲಿ ದೇವರ ಬಿಂಬ ಪ್ರತಿಷ್ಠೆ ನಡೆಯಿತು.

Close