ಕಟೀಲು ದೇಗುಲದಲ್ಲಿ ಗಂಜಿ ಊಟ ಆರಂಭ

ಕಿನ್ನಿಗೋಳಿ: ಅನ್ನದಾನಕ್ಕೆ ಪ್ರಸಿದ್ಧವಾಗಿರುವ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ಮೇ 1ರಿಂದ ಬೆಳಿಗ್ಗೆ ಭಕ್ತರಿಗೆ ಗಂಜಿ ಊಟ ಪ್ರಾರಂಭವಾಗಿದೆ.
ಈಗಾಗಲೇ ಯಾತ್ರಾರ್ಥಿಗಳಿಗೆ ಮಧ್ಯಾಹ್ನ ಹಾಗೂ ರಾತ್ರಿ ಅನ್ನಪ್ರಸಾದ ವ್ಯವಸ್ಥೆ ಇತ್ತು. ಇದೀಗ ಬೆಳಿಗ್ಗೆ 7.30ರಿಂದ 10ರತನಕ ಭಕ್ತರಿಗೆ ಗಂಜಿ ಊಟವನ್ನು ಪ್ರಸಾದ ರೂಪವಾಗಿ ನೀಡುವ ಯೋಜನೆ ಕಾರ್ಯ ರೂಪಕ್ಕೆ ಬಂದಿದೆ. ಯಾತ್ರಾರ್ಥಿಗಳು ಹಾಗೂ ಶಾಲಾ ಮಕ್ಕಳ ಅನ್ನ ಪ್ರಸಾದಕ್ಕಾಗಿ ದೇವಳ ಈಗಾಗಲೇ ವಾರ್ಷಿಕ ಸುಮಾರು ಮೂರು ಕೋಟಿ ರೂಪಾಯಿಗಳಷ್ಟನ್ನು ಖರ್ಚು ಮಾಡುತ್ತಿದೆ.
ವಿವಿಧೆಡೆಗಳಿಂದ ಬರುವ ಭಕ್ತರಿಗೆ, ಪ್ರವಾಸಕ್ಕೆ ಬರುವ ಶಾಲಾ ಮಕ್ಕಳಿಗೆ ದೇಗುಲದಲ್ಲಿ ಊಟದ ವ್ಯವಸ್ಥೆ ಇರುವುದು ಅನುಕೂಲವಾದಂತೆ ಇದೀಗ ಬೆಳಿಗ್ಗಿನ ಗಂಜಿ ಊಟವು ಇನ್ನಷ್ಟು ಪರಿಣಾಮಕಾರಿಯಾಗಲಿದೆ. ಮುಂದಿನ ದಿನಗಳಲ್ಲಿ ಕಟೀಲು ಕ್ಷೇತ್ರಕ್ಕೆ ಬರುವ ಎಲ್ಲ ಭಕ್ತರಿಗೆ ದಿನವಿಡೀ ಪಾನೀಯ ನೀಡುವ ಬಗ್ಗೆಯೂ ಚಿಂತನೆ ನಡೆದಿದೆ.

Comments

comments

Comments are closed.

Read previous post:
Kinnigoli-02051704
ಕಟೀಲು: ಕಟ್ಟಡ ಅಕ್ಷರಾನ್ನಂ ಉದ್ಘಾಟನೆ

ಕಿನ್ನಿಗೋಳಿ: ಅನ್ನದಾನ, ವಿದ್ಯಾದಾನ ಜೊತೆಗೆ ಯಕ್ಷಗಾನದ ಮೂಲಕ ಕಟೀಲು ಮಾತೆ ಎಲ್ಲರಿಗೂ ಅಭಯಪ್ರದವಾಗಿದ್ದಾರೆ. ಕಟೀಲು ಪರಿಸರದಲ್ಲಿ ಇನ್ನಷ್ಟು ಜನಪರ ಯೋಜನೆಗಳು ಸಂಪನ್ನವಾಗಲಿ ಎಂದು ಪಲಿಮಾರು ಮಠದ ಶ್ರೀ ವಿದ್ಯಾಧೀಶ...

Close