ಸುರಗಿರಿ : ಬ್ರಹ್ಮಕಲಶೋತ್ಸವ ಧಾರ್ಮಿಕ ಸಭೆ

ಕಿನ್ನಿಗೋಳಿ : ದೇವಳದಲ್ಲಿ ಪ್ರಾರ್ಥನೆ, ನಿಷ್ಕಲಶ್ಮ ಭಕ್ತಿ ಸಂಸ್ಕಾರದಿಂದ ಭಕ್ತರು ಭಗವಂತನ ಕೃಪೆಗೆ ಪಾತ್ರರಾಗಿ ಸಂತ್ರಪ್ತ ಜೀವನ ಸಾಗಿಸುತ್ತಾರೆ. ಎಂದು ಉಡುಪಿ ಪುತ್ತಿಗೆ ಮಠದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹೇಳಿದರು.
ಕಿನ್ನಿಗೋಳಿ ಸಮೀಪದ ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಪ್ರಯುಕ್ತ ಸೋಮವಾರ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.
ವೆ. ಮೂ. ಶಿಬರೂರು ಬ್ರಹ್ಮಶ್ರೀ ವೇದವ್ಯಾಸ ತಂತ್ರಿ ಜ್ಯೋತಿ ಪ್ರಜ್ವಲನೆ ಮಾಡಿದರು.
ಕರ್ನಾಟಕ ಸರಕಾರ ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಧಾರ್ಮಿಕ ಚಿಂತಕ ವೆ. ಮೂ. ವಿದ್ವಾನ್ ಪಂಜ ಭಾಸ್ಕರ ಭಟ್ ಧಾರ್ಮಿಕ ಉಪನ್ಯಾಸ ನೀಡಿ ಮಾತನಾಡಿ ದೇವಳದಲ್ಲಿ ಅಷ್ಟಬಂಧ ಬ್ರಹ್ಮಕಲಶ ನಡೆದಾಗ ದೇವರ ಸಾನಿಧ್ಯ ವೃದಿಯಾಗುತ್ತದೆ. ಜನರು ಶಿಸ್ತು ಸಂಸ್ಕಾರಗಳನ್ನು ನಿಯಮಿತವಾಗಿ ಪಾಲಿಸಿದಾಗ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.
ಕಟೀಲು ದೇವಳ ಅರ್ಚಕ ವೆ.ಮೂ. ಅನಂತಪದ್ಮನಾಭ ಆಸ್ರಣ್ಣ, ಪಕ್ಷಿಕೆರೆ ಸಂತ ಜೂದರ ಯಾತ್ರಿಕ ಕೇಂದ್ರದ ಧರ್ಮಗುರು ಫಾ. ಆಂಡ್ರ್ಯೂ ಲಿಯೋ ಡಿಸೋಜ, ಪಕ್ಷಿಕೆರೆ ಬದ್ರಿಯಾ ಜುಮ್ಮಾ ಮಸೀದಿಯ ಅಧ್ಯಕ್ಷ ಹಾಜಿ ಕೆ. ಮೀರನ್ ಸಾಹೇಬರು ಶುಭಾಶಂಸನೆಗೈದರು.
ಈ ಸಂದರ್ಭ ದೇವಳದ ವಿವಿಧ ಕಾಮಗಾರಿಗಳಿಗೆ ಸಹಕರಿಸಿದ ದಾನಿಗಳನ್ನು ಗೌರವಿಸಲಾಯಿತು. ಅಂಗಡಿಮಾರ್ ಕೃಷ್ಣಭಟ್ ಬರೆದ ಪಂಚಾಂಗವನ್ನು ಪುತ್ತಿಗೆ ಶ್ರೀಗಳು ಬಿಡುಗಡೆಗೊಳಿಸಿದರು.
ದ. ಕ. ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲು, ಬೆಳಗಾಂ ರಾಮದೇವ್ ಹೋಟಲ್‌ನ ಬೋಳ ರಘುರಾಮ ಶೆಟ್ಟಿ, ಮುಂಬಯಿ ಟ್ಯಾಕ್ಸ್ ಕನ್ಸಲ್ಟ್ಂಟ್ ಪ್ರವೀಣ್ ಬಿ. ಶೆಟ್ಟಿ , ಗೆಸ್ಪರ್ ಸೆರಾವೊ ಮುಂಬಯಿ, ಜಾಗತಿಕ ಬಂಟರ ಒಕ್ಕೂಟ ಉಪಾಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಮುಂಬಯಿ ಬಾಬು ಜೆ. ಶೆಟ್ಟಿ ಕಂಬಳಿ ಮನೆ ಕಿಲೆಂಜೂರು, ರಾಜೇಶ್ ಶೆಟ್ಟಿ ಭಂಡಾರ ಮನೆ ಮುಂಬಯಿ, ಗೋವಿಂದ ಶೆಟ್ಟಿ ಅತ್ತೂರುಗುತ್ತು ಮುಂಬಯಿ, ಶಿಬರೂರು ಗುತ್ತಿನಾರ್ ಉಮೇಶ್ ಶೆಟ್ಟಿ , ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಧ್ಯಕ್ಷ ಅತ್ತೂರು ಬೈಲು ವೆಂಕಟರಾಜ ಉಡುಪ, ಮೊಕ್ತೇಸರರಾದ ಬಾಲಚಂದ್ರ ಭಟ್, ಪ್ರಕಾಶ್ ಜೆ. ಶೆಟ್ಟಿ ಉಪಸ್ಥಿತರಿದ್ದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಅತ್ತೂರು ಹೊಸಲೊಟ್ಟು ಬಾಬು ಎನ್. ಶೆಟ್ಟಿ ಪ್ರಸ್ತಾವನೆಗೈದರು. ದೇವಳದ ಆಡಳಿತ ಮೊಕ್ತೇಸರ ಮತ್ತು ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಕೆ. ಸೀತಾರಾಮ ಶೆಟ್ಟಿ ದೇವಳದ ಅಭಿವೃದ್ಧಿಯ ಬಗ್ಗೆ ವಿವರ ತಿಳಿಸಿದರು. ದೇವಳದ ಮೊಕ್ತೇಸರ ಧನಂಜಯ ಶೆಟ್ಟಿಗಾರ್ ಸಾಗರಿಕ ಸ್ವಾಗತಿಸಿದರು. ಧೀರಜ್ ಶೆಟ್ಟಿ ಮಮ್ಮೆಟ್ಟು ವಂದಿಸಿದರು. ಕೃಷ್ಣರಾಜ್ ಭಟ್ ದಾನಿಗಳ ವಿವರ ನೀಡಿದರು. ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli-02051701

Comments

comments

Comments are closed.

Read previous post:
Kinnigoli-01051707
ಸುರಗಿರಿ- ಅಷ್ಟಬಂಧ ಬ್ರಹ್ಮಕಲಶೋತ್ಸವ

ಕಿನ್ನಿಗೋಳಿ : ಅತ್ತೂರು ಕೆಮ್ರಾಲ್ ಕಿಲೆಂಜೂರು ಗ್ರಾಮಕ್ಕೆ ಸೇರಿದ ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಸೋಮವಾರ ಮಿಥುನ ಲಗ್ನ ಸುಮೂಹೂರ್ತದಲ್ಲಿ ಶ್ರೀ ಮಹಾಲಿಂಗೇಶ್ವರ ದೇವರಿಗೆ ಕರ್ಪೂರಾದಿ 85 ದ್ರವ್ಯಮಿಳಿತ 504 ಪರಿಕಲಶ...

Close