ಬಪ್ಪನಾಡು ಶತ ಚಂಡಿಕಾ ಧಾರ್ಮಿಕ ಸಭೆ

ಮೂಲ್ಕಿ: ಮೂಲ್ಕಿಯ ಬಪ್ಪನಾಡು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ನೇತ್ರತ್ವದಲ್ಲಿ ಲೋಕಕಲ್ಯಾಣಾರ್ಥವಾಗಿ ಮೂಲ್ಕಿ ಹೋಬಳಿಯ ಸಂಘ,ಸಂಸ್ತೆಗಳು ಹಾಗೂ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಳದ ಸಹಕಾರದೊಂದಿಗೆ ಮೇ ೫ರಂದು ಜರಗಲಿರುವ ಶ್ರೀ ಶತ ಚಂಡಿಕಾದ್ವರ ಯಾಗದ ಅಂಗವಾಗಿ ಇಂದು ದೇವಳದ ವಠಾರದಲ್ಲಿ ಜರಗಿದ ಧಾರ್ಮಿಕ ಸಭೆಯನ್ನು ಮೂಲ್ಕಿ ಸಮೀಪದ ಕೊಲ್ಲೂರಿನ ಕಾಂತಾಬಾರೆ-ಬೂದಾಬಾರೆ ಜನ್ಮ ಕ್ಷೇತ್ರದ ಸಮಿತಿಯ ಅಧ್ಯಕ್ಷ ದಾಮೋದರ ದಂಡಕೇರಿ ಉದ್ಘಾಟಿಸಿದರು. ಜಾನಪದ ವಿದ್ವಾಂಸ ಡಾ ಗಣೇಶ್ ಅಮೀನ್ ಸಂಕಮಾರ್ ರವರು *ಬಪ್ಪನಾಡು ಡೋಲು*ಕುರಿತು ಧಾರ್ಮಿಕ ಪ್ರವಚನ ನೀಡಿದರು.ಕಿಲ್ಪಾಡಿ ಭಂಡಸಾಲೆ ಶೇಖರ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದು ಬಪ್ಪನಾಡು ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಸುವರ್ಣ,ಮೂಲ್ಕಿ ನಗರ ಪಂಚಾಯತ್ ಅಧ್ಯಕ್ಷ ಸುನೀಲ್ ಆಳ್ವ ,ಯಾಗ ದೀಕ್ಷಕ ನಿಡ್ಡೋಡಿ ಚಾವಡಿ ಮನೆ ಜಗನ್ನಾಥ ಶೆಟ್ಟಿ ಮತ್ತಿತರಿದ್ದರು.ಮಂಡ್ಯ ಸತೀಶ್ ಮತ್ತು ತಂಡದಿಂದ *ಮಹಿಷಾ ಮಽನಿ*ಹರಿಕಥೆ ನಡೆಯಿತು.

Mulki-13051701

Comments

comments

Comments are closed.

Read previous post:
Mulki-02051701
ಬಪ್ಪನಾಡು ಶತ ಚಂಡಿಕಾ ಧಾರ್ಮಿಕ ಸಭೆ

ಮೂಲ್ಕಿ: ಮೂಲ್ಕಿಯ ಬಪ್ಪನಾಡು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ನೇತ್ರತ್ವದಲ್ಲಿ ಲೋಕಕಲ್ಯಾಣಾರ್ಥವಾಗಿ ಮೂಲ್ಕಿ ಹೋಬಳಿಯ ಸಂಘ, ಸಂಸ್ಥೆಗಳು ಹಾಗೂ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಳದ ಸಹಕಾರದೊಂದಿಗೆ ಮೇ...

Close